ಮಹಿಳೆಯರ ಹಕ್ಕುಗಳ ಕುರಿತು ಜಾಗೃತಿ ಅವಶ್ಯಕ  : ಡಾ. ಗುರುದೇವಿ ಹುಲೆಪ್ಪನವರಮಠ

Pratibha Boi
ಮಹಿಳೆಯರ ಹಕ್ಕುಗಳ ಕುರಿತು ಜಾಗೃತಿ ಅವಶ್ಯಕ  : ಡಾ. ಗುರುದೇವಿ ಹುಲೆಪ್ಪನವರಮಠ
WhatsApp Group Join Now
Telegram Group Join Now
ರಾಮದುರ್ಗ : ಮಹಿಳೆ ಎಂದರೆ ಕೇವಲ ಕುಟುಂಬದ ಅಸ್ತಿತ್ವವಲ್ಲ ಸಮಾಜದ ಶಕ್ತಿಯ ಪ್ರತೀಕ. ಸ್ತ್ರೀ  ತಾಯಿ, ಸಹೋದರಿ, ಸ್ನೇಹಿತೆ , ಶಿಕ್ಷಕಿಯಾಗಿ ಹೀಗೆ ಹಲವಾರು ಪಾತ್ರಗಳಲ್ಲಿ ಮಹಿಳೆಯರು ಕೊಡುಗೆಯನ್ನು ನೀಡಿದ್ದಾಳೆ ಮತ್ತು ಅನ್ಯಾಯ ,ಅಸಮಾನತೆ, ನಡುವೆ ಸ್ತ್ರೀಯು ಉತ್ತಮ ರೀತಿಯಾಗಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾಳೆ ಹಿಂದಿನ ಕಾಲದಲ್ಲಿ ಮಹಿಳೆಯರು ಕೇವಲ ನಾಲ್ಕು ಗೋಡೆಗೆ ಸೀಮಿತ ಅಷ್ಟೇ ಎಂದವರ ಮುಂದೆ ಇಂದಿನ ಕಾಲದಲ್ಲಿ ಮಹಿಳೆ ಶಿಕ್ಷಣ , ರಾಜಕೀಯ, ವಿಜ್ಞಾನ, ಕ್ರೀಡೆ ಹಾಗೂ ಇತರ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾಳೆ ಎಂದು ದ್ವಿಭಾಷಾ ಲೇಖಕಿ ಹಾಗೂ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.
                ಸ್ಥಳೀಯ ಶ್ರೀಮತಿ ‌ ಆಯ್.ಎಸ್.ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಘ ಮತ್ತು ಐಕ್ಯೂಎಸಿ ಘಟಕಗಳ ಸಹಯೋಗದಲ್ಲಿ  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ ಮಹಿಳೆಯರು ಪ್ರಸ್ತುತ‌ ದಿನಗಳಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಪುರುಷರಷ್ಟೇ ಸಾಮರ್ಥ್ಯವನ್ನು ಹೊಂದಿದ್ದಾಳೆ ಮಹಿಳೆಯರು ತಮ್ಮ ಹಕ್ಕುಗಳನ್ನು ನಿರಂತರವಾಗಿ ಹೋರಾಟ ಮಾಡಿ ಪಡೆಯುತ್ತಿದ್ದಾಳೆ ಹಿಂದಿನ ಕಾಲದಲ್ಲಿ ಸಾಮಾಜಿಕ ಸಮಸ್ಯೆಗಳು,‌ ಆರ್ಥಿಕ ಸಂಕಷ್ಟ, ಅನ್ಯಾಯ, ಅಸಮಾನತೆ ಎದುರಿಸಿ ಸಾಧನೆ ಮಾಡಿದ್ದಾಳೆ ಮತ್ತು ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಹಕ್ಕುಗಳ ಕುರಿತು ಕುರಿತಾದ ಜಾಗೃತಿಯು ವಿದ್ಯಾರ್ಥಿನಿಯರಲ್ಲಿ ಅವಶ್ಯಕ ಎಂದು ಸ್ಥೂರ್ತಿದಾಯಕ‌ ಮಾತುಗಳನ್ನು ಹೇಳಿದರು.
       ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಡಿ.ಕಮತಗಿ‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ‌ ಸಂಚಾಲಕರಾದ ಸಂಜಯ ಹಾದಿಮನಿ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಎ.ಬಿ.ವಗ್ಗರ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಎಂ.ಆರ್.ದೊಡಮನಿ , ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಮಹೇಶ ಪಾಟೀಲ, ಉಪನ್ಯಾಸಕರಾದ ಪ್ರವೀಣ್ ಅಂಗಡಿ,ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸಿದ್ಧಾರೂಢ ಬಸಳಿಗುಂದಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಿನಾಯಕ ಹೊಸಮನಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article