ಮುನವಳ್ಳಿ,ಏಪ್ರಿಲ್ 11: ಪಟ್ಟಣದ ಶ್ರೀ ಅನ್ನದಾನೇಶ್ವರ ಪ.ಪೂ ಕಾಲೇಜಿನ ವಿಧ್ಯಾರ್ಥಿನಿಯರು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ೫ನೇ ರ‍್ಯಾಂಕ್ ಹಾಗೂ ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಗಂಗವ್ವ ಸುಣದೊಳಿ (೫೮೯) ೯೯%, ಬೆಳಗಾವಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದ ಫಕ್ಕೀರವ್ವ ಚುಂಚನೂರ (೫೮೯) ೯೮.೧೬, ಬೆಳಗಾವಿ ಜಿಲ್ಲೆಗೆ ೩ನೇ ಸ್ಥಾನ ಪಡೆದ ಅಶ್ವಿನಿ ಪೂಜೇರ (೫೮೨) ೯೭% ಅವರಿಗೆ ಮಠದ ಸಭಾ ಭವನದಲ್ಲಿ ಬುಧವಾರ ಗೌರವ ಸನ್ಮಾನ ಜರುಗಿತು.
ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ಮುರುಘೇಂದ್ರ ಶ್ರೀಗಳು ಸಾನಿದ್ಯ ವಹಿಸಿ ಮಾತನಾಡಿ ರಾಜ್ಯಕ್ಕೆ ೫ ನೇ ರ‍್ಯಾಂಕ್ ಪಡೆದಿರುವದು ಸಂತಸ ತಂದಿದೆ ನಮ್ಮ ಕಾಲೇಜಿಗೆ ರ‍್ಯಾಂಕ ಪಡೆಯುವ ಆಶೆ ಯಶಸ್ಸು ತಂದಿದೆ ಗಂಗವ್ವ ಸುಣದೊಳಿ ನಮ್ಮ ವಿದ್ಯಾಲಯದವರು ಎಂದು ಹೆಳಲು ಹೆಮ್ಮೆ ಎನಿಸುತ್ತದೆ ಎಂದರು.
ಪ್ರತಿ ವರ್ಷವು ನಮ್ಮ ಕಾಲೆಜಿನ ಪಲಿತಾಂಶ ಪ್ರತಿ ವರ್ಷವು ಹೆಚ್ಚಿನ ರೀತಿಯಲ್ಲಿ ವಿಧ್ಯಾರ್ಥಿಗಳು ಅಂಕಗಳನ್ನು ಪಡೆದು ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದರು. ಪಂಚನಗೌಡ ದ್ಯಾಮನಗೌಡರ ಮಾತನಾಡಿ ವಿಧ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಸಾಧನೆಗೆ ಶ್ರಮಿಸಬೇಕು ಹಾಗೂ ಉನ್ನತ ಹುದ್ದೇಗೆ ಶೆರುವ ಗುರಿ ಹೊಂದಿರಬೇಕೆಂದರು. ಸಂಸ್ಥೆಯ ಉಪಾಧ್ಯಕ್ಷ ಅರುನಗೌಡ ಪಾಟೀಲ ಮಾತನಾಡಿ ರಾಜ್ಯಕ್ಕೆ ೫ನೇ ರ‍್ಯಾಂಕ್ ಬಂದ ವಿದ್ಯಾರ್ಥಿನಿ ಮುಂದೆ ನಮ್ಮ ಸಂಸ್ಥೆಯಲ್ಲಿ ಓದಿದರೆ ಕಾಲೇಜು ಶುಲ್ಕ ಹಾಗೂ ಇನ್ನಿತರ ಅನುಕೂಲತೆ ನಾನು ಮಾಡಿಕೊಡುತ್ತೆನೆಂದರು.
ಮಲ್ಲಿಕಾರ್ಜುನ ಜಮಖಂಡಿ,ಶಂಕರ ಗಯ್ಯಾಳಿ, ಸಂಜು ಕಾಮಣ್ಣವರ, ಗಂಗಮ್ಮ ಸಂಕಣ್ಣವರ, ಪರಶುರಾಮ ಕದಂ, ಅಶೋಕ ಸಂಕಣ್ಣವರ, ವಿಠ್ಠಲ ನಲಗೆ, ಶಂಕರ ಜೋಗೋಜಿ, ನಾಗರಾಜ ಕಮ್ಮಾರ, ಇತರರು ಉಪಸ್ಥಿತರಿದ್ದರು. ಐ.ಕೆ.ಮಠಪತಿ ಸ್ವಾಗತಿಸಿ ಕಾರ್ಯಕ್ರಮ ನೀರೂಪಿಸಿದರು.