ಯರಗಟ್ಟಿ : ಸಮೀಪದ ಮುನವಳ್ಳಿ ಪಟ್ಟಣದ ಸಮಾಜ ಸೇವಾ ಸಂಸ್ಥೆಯಾದ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಶ್ರೀ ವಿ.ಪಿ.ಜೇವೂರ ಸ್ಮಾರಕ ಮೂಕ ಮತ್ತು ಕಿವುಡು ಮಕ್ಕಳ ವಸತಿ ಶಾಲೆಯಲ್ಲಿ ಪ್ರಶಸ್ತಿ ಪುರಸ್ಕೃತರಾದ ಎಂ.ಜಿ.ಹೊಸಮಠ, ಸುಜಾತಾ ರೇಣುಕಪ್ರಸಾದ ಜಂಬಗಿ, ಮೀನಾಕ್ಷಿ ಮುರನಾಳ, ಅನ್ನಪೂರ್ಣ ಲಂಬೂನವರ, ರಮೇಶ ಮುರಂಕರ, ಆರ್.ಎಚ್.ಪಾಟೀಲನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷೆ ಶಾರದಾ ದ್ಯಾಮನಗೌಡರ ಮಾತನಾಡಿ ಪ್ರಶಸ್ತಿಗಳಿಂದ ವೃತ್ತಿ ಗೌರವ ಹೆಚ್ಚುತ್ತದೆ, ಸಮಾಜ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತದೆ, ಪ್ರಶಸ್ತಿ ಪುರಸ್ಕೃತರು ಇನ್ನಷ್ಟು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸುಷ್ಮಾ ಗೋಮಾಡಿ, ಭಾರತಿ ಕಟಿಗೆನ್ನವರ, ಅಶ್ವಿನಿ ದಶಮನಿ, ವಿಜಯಲಕ್ಷ್ಮೀ ಮುರಂಕರ, ಅನುರಾಧಾ ಬೆಟಗೇರಿ, ಗೌರಿ ಜಾವೂರ, ಸುಮಾ ಯಲಿಗಾರ, ಶೀಲಾ ಕರೀಕಟ್ಟಿ, ಸಹನಾ ನಲವಡೆ, ಪ್ರೀತಿ ಕರೀಕಟ್ಟಿ, ಉಮಾ ಹಂಪಣ್ಣವರ, ಗೀತಾ ಜಿಡ್ಡಿಮನಿ, ಮುಕ್ತಾ ಪಶುಪತಿಮಠ, ಸುಜಾತಾ ಕೋರಿ, ಲಲಿತಾ ಕಾಮಶೆಟ್ಟಿ, ಪೂಜಾ ಗೋಪಶೆಟ್ಟಿ, ಸುಜಾತಾ ಪಾಟೀಲ, ವೈಷ್ಣವಿ ಶೆಟ್ಟರ, ಶೀತಲ ಗೋಮಾಡಿ, ಶಿವು ಕಾಟಿ, ಸುಜಾತಾ ಬಡ್ಲಿ, ಜಂಬಗಿ, ಮಂಜುನಾಥ ಮಾವಿನಕಟ್ಟಿ, ಶಿಕ್ಷಕರು ಸೇರಿದಂತೆ ಇನ್ನರ್‌ವ್ಹೀಲ್ ಕ್ಲಬ್‌ದ ಸದಸ್ಯೆಯರು ಇದ್ದರು.