ನೇಸರಗಿ: ಸಮೀಪದ ಮತ್ತಿಕೊಪ್ಪ ಗ್ರಾಮದ ಐ ಸಿ ಎ ಆರ್ ಕೆ ಎಲ್ ಇ, ಕೆ ವಿ ಕೆ ಯಲ್ಲಿ ಹಿರಿಯ ವಿಷಯ ತಜ್ಞ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುತ್ತಿರುವ ಡಾ ಎಸ್ ಎಸ್. ಹಿರೇಮಠ ಅವರಿಗೆ ” ಸ್ನೇಹ ಪ್ರೀತಿ ನಿಮ್ಮೊಂದಿಗೆ ” ಸಲಹಾ ಸಮಿತಿ ತಂಡ (spm)ವತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ರವಿವಾರದಂದು ಬೈಲಹೊಂಗಲದ ಕೃಷಿ ಸಂಶೋಧನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಘೀರ ಹೋರಿ ಕರುಗಳ ಹುಟ್ಟುಹಬ್ಬದ ಪ್ರಯುಕ್ತ ಇಬ್ಬರು ವಿಜ್ಞಾನಿಗಳಾದ ಮತ್ತಿಕೊಪ್ಪ ಕೃಷಿ ವಿಶ್ವ ವಿದ್ಯಾಲಯದ ವಿಷಯ ತಜ್ಞ ಡಾ. ಎಸ್ ಎಸ್ ಹಿರೇಮಠ, ಮತ್ತು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಸಂಶೋಧನ ವಿಭಾಗದ ಡಾ. ಚನ್ನಕೇಶವ ಆರ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಇದೆ ಸಂದರ್ಭದಲ್ಲಿ ಮಲ್ಲೂರ ಗ್ರಾಮದ ಶಿವಾನಂದ ಅಂಗಡಿ, ಗುಡಿಕಟ್ಟಿ ಗ್ರಾಮದ ಯುವರಾಜ ಪೂಜಾರ, ನಾಗನೂರ ಗ್ರಾಮದ ಚಂದ್ರಶೇಖರ ಮುದ್ದೇನಗುಡಿ, ಮಲ್ಲೂರ ಗ್ರಾಮದ ಸಂಗಪ್ಪ ಮುರಗೋಡ, ಅಕ್ಕತಂಗೇರಹಾಳ ಗ್ರಾಮದ ನಿಂಗಪ್ಪ ದೊಡ್ಡಬಸಣ್ಣವರ, ಶಿಂದಿಕುರಬೇಟ ಗ್ರಾಮದ ವಿಶ್ವನಾಥ ನೇರಲಿ, ಮರಕಟ್ಟಿ ಗ್ರಾಮದ ಲಕ್ಷ್ಮೀ ಗುರಡಿ, ವಜ್ರಮಟ್ಟಿ ಗ್ರಾಮದ ಲಕ್ಷ್ಮಿಭಾಯಿ ಹಲಕಿ, ಮದರಕಂಡಿ ಗ್ರಾಮದ ಗಿರಿಮಲ್ಲಪ್ಪ ಕಂಕನವಾಡಿ, ಕರಿಕಟ್ಟಿ ಗ್ರಾಮದ ಯಲ್ಲನಾಯಕ್ ನಾಯ್ಕರ ಎಂಬ 10 ಜನ ಪ್ರಗತಿಪರ ರೈತರಿಗೆ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಕಲಬುರಗಿ ಜಿಲ್ಲೆಯ ಮಹಾಸಂಸ್ಥಾನ ಪೀಠ ಕೊಂಚೂರು ಪ ಪೂ. ಸವಿತಾನಂದನಾಥ ಸ್ವಾಮೀಜಿ, ಅಧ್ಯಕ್ಷತೆಯನ್ನು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಬೀಜ ಘಟಕದ ಅಧಿಕಾರಿಗಳಾದ ಡಾ ರವಿ ಹುಣಜಿ, ಅಥಿತಿಗಳಾಗಿ ನಿವೃತ್ತ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ಗೀತಾ ಹಿರೇಮಠ, ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಬಸವರಾಜ್ ಕುಂದಗೋಳಮಠ, ಸಂಶೋಧನೆ ನಿರ್ದೇಶಕರಾದ ಡಾ. ಬಿ ಡಿ. ಬಿರಾದಾರ, ಕಾರ್ಯಕಾರಿಣಿ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಹೆಗ್ಗಣ್ಣವರ, ಕೃಷಿಕರಾದ ವಿರೇಶ ನೇಗಿಲಿ, ಶಂಕರ ನಂದಿ, ಜಭುಲಿಂಗ್ ಮೇಟಿ, ಸಂಜಯ ಬಂತನಾಳ, ಮಹೇಶ ಶೆಟ್ಟರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.