ಬಳ್ಳಾರಿ,ನ.೦8.. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅವ್ವಾರು ಮಂಜುನಾಥ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಭಾರಿ ಅಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅವ್ವಾರು ಮಂಜುನಾಥ ಮಾತನಾಡಿ, ಬಿಡಿಸಿಸಿಐ ಕರ್ನಾಟದಲ್ಲಿ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದೆ. ಈ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಯ ಜವಾಬ್ದಾರಿಯನ್ನು ಸ್ವೀಕರಿಸಿದ್ದು, ಎಲ್ಲರ ಸಹಕಾರದಿಂದಾಗಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ಈವರೆಗೆ ಅಧ್ಯಕ್ಷರಾಗಿದ್ದ ಯಶವಂತರಾಜ ನಾಗಿರೆಡ್ಡಿ ಮಾತನಾಡಿ, ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹೊಸಬರಿಗೆ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹಸ್ತಾಂತರ ಮಾಡಿರುವುದಾಗಿ ಹೇಳಿದರು.
ಮಾಜಿ ಸಚಿವರಾದ ಬಿ. ಶ್ರೀರಾಮುಲು, ಮಾಜಿ ನಗರ ಸಚಿವರಾದ, ಜಿ.ಸೋಮಶೇಖರ ರೆಡ್ಡಿ, ಬಿಡಿಸಿಸಿಐನ ಮಾಜಿ ಅಧ್ಯಕ್ಷರಾದ ಕೆ. ಚೆನ್ನಪ್ಪ, ಡಾ. ಡಿ.ಎಲ್. ರಮೇಶ್ ಗೋಪಾಲ್, ಸಿ. ಶ್ರೀನಿವಾಸರಾವ್, ಲಿಡ್ಕರ್ ಅಧ್ಯಕ್ಷರಾದ ಮುಂಡ್ರಗಿ ನಾಗರಾಜ್, ಬುಡಾ ಮಾಜಿ ಅಧ್ಯಕ್ಷರಾದ ಮಾರುತಿ ಪ್ರಸಾದ್ ಹಾಗೂ ನೂತನ ಅಧ್ಯಕ್ಷರ ಆಪ್ತರು, ಬಂಧುವರ್ಗ, ಮಿತ್ರರು, ವಿವಿಧ ಸಂಘ – ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿ ಅಭಿನಂದಿಸಿದರು.
ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು, ಹಿರಿಯ ಉಪಾಧ್ಯಕ್ಷರಾಗಿ ಎಸ್. ದೊಡ್ಡನಗೌಡ, ಉಪಾಧ್ಯಕ್ಷರಾದ ಗಿರಿಧರ ಸೊಂತಾ ಮತ್ತು ಪಿ. ಪಾಲಣ್ಣ, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ ಮತ್ತು ವಿ. ರಾಮಚಂದ್ರ, ಖಜಾಂಚಿಗಳಾದ ನಾಗಳ್ಳಿ ರಮೇಶ್ ಅವರನ್ನೂ ಈ ಸಂದರ್ಭದಲ್ಲಿ ಗೌರವಿಸಿ, ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಟಿ. ಶ್ರೀನಿವಾಸರಾವ್ (ವಾಸು), ಸಿ.ಎಸ್. ಸತ್ಯನಾರಾಯಣ, ನೇಕಾರ ನಾಗರಾಜ್, ತಾಟಕೂರಿ ಶ್ರೀನಿವಾಸರಾವ್, ಬಿ. ಸತ್ಯಬಾಬು, ಯು. ಗೋವಿಂದರೆಡ್ಡಿ, ಸಿಎ ಕೆ. ರಾಜಶೇಖರ್, ಪಿ. ವೇಣುಗೋಪಾಲ್ ಗುಪ್ತ, ವಿ. ವೆಂಕಟೇಶಲು, ಜೆ. ರಾಜೇಶ್, ಪಿ. ಗಿರೀಶ್, ಎಸ್. ಜಿತೇಂದ್ರ ಪ್ರಸಾದ್, ಆರ್. ನಾಗರಾಜ್, ವಿ.ಕೆ.ಎಲ್. ದೀಪಕ್, ಎಚ್. ರಾಜೇಶ್ ಕುಮಾರ್, ಎಸ್.ಪಿ. ವೆಂಕಟೇಶ್, ಜಿ. ರಾಘವೇಂದ್ರ ರೆಡ್ಡಿ, ಬಿ. ನಾಗರಾಜ್ ಮತ್ತು ಕೆ. ಗೋಪಾಲರೆಡ್ಡಿ ಇದ್ದರು.


