ಶ್ರಾವಣ ಸಂಭ್ರಮ : ವಸ್ತು ಪ್ರದರ್ಶನ

Ravi Talawar
ಶ್ರಾವಣ ಸಂಭ್ರಮ : ವಸ್ತು ಪ್ರದರ್ಶನ
WhatsApp Group Join Now
Telegram Group Join Now
ಬೆಳಗಾವಿ:  ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ವತಿಯಿಂದ ಶ್ರಾವಣ ಮಾಸ ಹಾಗೂ ಹಬ್ಬಗಳ ಅಂಗವಾಗಿ *ಶ್ರಾವಣ ಸಂಭ್ರಮ* ವಸ್ತು ಪ್ರದರ್ಶನ  ಮೇಳವನ್ನು ಏರ್ಪಡಿಸಲಾಗಿದೆ.
 ಆಗಸ್ಟ್ 16 ಮತ್ತು 17ರಂದು ಅನಗೋಳ ರಸ್ತೆಯ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಮೇಳ ಆಯೋಜಿಸಲಾಗಿದೆ. ಬ್ರಾಹ್ಮಣ ಸಮುದಾಯದ ಎಲ್ಲ ಉಪ ಪಂಗಡಗಳ ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವವರು ತಮ್ಮ ಉತ್ಪನ್ನ ಹಾಗೂ ಸೇವೆಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಅವಕಾಶವಿದೆ. ಪ್ರತಿಯೊಬ್ಬರಿಗೆ 2 ಟೇಬಲ್ (1.5×3 ಅಳತೆ), ಕುರ್ಚಿಗಳನ್ನು ಪೂರೈಸಲಾಗುವದು.
ಮೇಳವು ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿದೆ. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಭಾಗವಹಿಸುವ ಆಸಕ್ತರು ಆಗಸ್ಟ್ 14ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:  ವಿಲಾಸ ಬದಾಮಿ -9880291605, ಅನುಶ್ರೀ ದೇಶಪಾಂಡೆ -9141519326, ಅರವಿಂದ ತೆಲಂಗ್ -9449171855, ಆರ್.ಎಸ್.ಕುಲಕರ್ಣಿ  -9448304236, ಶ್ರೀದೇವಿ ಕುಲಕರ್ಣಿ- 9480677976, ಚಂದ್ರಶೇಖರ ನವಲಗುಂದ- 9611610642.
WhatsApp Group Join Now
Telegram Group Join Now
Share This Article