ಹುಬ್ಬಳ್ಳಿ ಧಾರವಾಡ ನಗರ ವ್ಯಾಪ್ತಿಯಲ್ಲಿ ವಿವಿಧ ಮರಗಳ ತೆರವಿಗೆ ಬಹಿರಂಗ ಹರಾಜು

Ravi Talawar
ಹುಬ್ಬಳ್ಳಿ ಧಾರವಾಡ ನಗರ ವ್ಯಾಪ್ತಿಯಲ್ಲಿ ವಿವಿಧ ಮರಗಳ ತೆರವಿಗೆ ಬಹಿರಂಗ ಹರಾಜು
WhatsApp Group Join Now
Telegram Group Join Now
ಧಾರವಾಡ : ಹುಬ್ಬಳ್ಳಿ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಹಾಗೂ ವಿವಿಧ ಕಚೇರಿ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ 28 ಮರಗಳು ಮತ್ತು 70 ಮರದ ಟೊಂಗೆಗಳನ್ನು ತೆರುವುಗೊಳಿಸಲು ಹುಬ್ಬಳ್ಳಿ ವಲಯ ಅರಣ್ಯ ಅಧಿಕಾರಿ ಕಛೇರಿಯಲ್ಲಿ ಫೆಬ್ರವರಿ 21, 2025 ಮತ್ತು ಮಾರ್ಚ 4, 2025 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಮಾಡಲಾಗುವುದು.
ಧಾರವಾಡ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಹಾಗೂ ವಿವಿಧ ಕಚೇರಿ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ 25 ಮರಗಳು ಮತ್ತು 30 ಮರದ ಟೊಂಗೆಗಳನ್ನು ತೆರುವುಗೊಳಿಸಲು ಧಾರವಾಡ ವಲಯ ಅರಣ್ಯ ಅಧಿಕಾರಿ ಕಛೇರಿಯಲ್ಲಿ ಫೆಬ್ರವರಿ 25, 2025 ಮತ್ತು ಮಾರ್ಚ 10, 2025 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಮಾಡಲಾಗುವುದು.
ಮರ ಸಂರಕ್ಷಣಾ ಕಾಯ್ದೆ 1976 ರ ಸೆಕ್ಷನ್ 8 (3) (ಗಿII) ರ ಸೆಕ್ಷನ್‍ಗಳಲ್ಲಿ ಅಗತ್ಯ ಪಡಿಸಿರುವಂತೆ ಈ ಬಗ್ಗೆ ತಕರಾರು ಸಲ್ಲಿಸ ಬಯಸುವವರು ತಮ್ಮ ತಕರಾರನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಧಾರವಾಡ ಉಪ ವಿಭಾಗ, ಧಾರವಾಡ ಹಾಗೂ ಧಾರವಾಡದ ಕೆ.ಸಿ.ಪಾರ್ಕ ಎದುರು ಅರಣ್ಯ ಸಂಕೀರ್ಣದಲ್ಲಿರುವ ಮರ ಅಧಿಕಾರಿಯವರಿಗೆ ಲಿಖಿತ ರೂಪದಲ್ಲಿ ಫೆಬ್ರವರಿ 24, 2024 ರ ಒಳಗಾಗಿ ಸಲ್ಲಿಸಬಹುದಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article