ಸಮೃದ್ಧ ವಿಕಲಚೇತನರ ಸಂಸ್ಥೆಗೆ ಅಗತ್ಯ ಸಾಮಗ್ರಿ ದೇಣಿಗೆ ನೀಡಿದ ಪ್ರಯತ್ನ ಸಂಘಟನೆ

Ravi Talawar
ಸಮೃದ್ಧ ವಿಕಲಚೇತನರ ಸಂಸ್ಥೆಗೆ ಅಗತ್ಯ ಸಾಮಗ್ರಿ ದೇಣಿಗೆ ನೀಡಿದ ಪ್ರಯತ್ನ ಸಂಘಟನೆ
WhatsApp Group Join Now
Telegram Group Join Now
ಬೆಳಗಾವಿ : ಪ್ರಯತ್ನ ಸಂಸ್ಥೆಯ ವತಿಯಿಂದ ಸಮೃದ್ಧ ವಿಕಲಚೇತನರ ಸಂಸ್ಥೆಗೆ ಆಹಾರ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಲಾಯಿತು. ಬುಧವಾರ ಸಂಸ್ಥೆಗೆ ಭೇಟಿ ನೀಡಿದ ಪ್ರಯತ್ನ ಸಂಘಟನೆಯ ಅಧ್ಯಕ್ಷೆ ಶಾಂತಾ ಆಚಾರ್ಯ ಮತ್ತು ಸದಸ್ಯರು ಸಮೃದ್ಧ ವಿಕಲಚೇತನರ ಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗಾಗಿ ವಿವಿಧ ಸಾಮಗ್ರಿಗಳನ್ನು ನೀಡಿದರು. ಸಮೃದ್ಧ ಸಂಸ್ಥೆಯ ಆಜೀವ ಸದಸ್ಯ ರಮೇಶ ಜಂಗಲ್ ಈ ವೇಳೆ ಮಾತನಾಡಿ, ಪ್ರಯತ್ನ ಸಂಸ್ಥೆಯ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು. ಸಂಸ್ಥೆಗೆ ದೇಣಿಗೆ ನೀಡಿದ್ದಕ್ಕಾಗಿ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು.
ಶಾಂತಾ ಆಚಾರ್ಯ ಮಾತನಾಡಿ, ಕಳೆದ 15 ವರ್ಷಗಳಿಂದ ಸಂಘಟನೆಯ ವತಿಯಿಂದ ಅಗತ್ಯವುಳ್ಳವರಿಗೆ ವಿವಿಧ ರೀತಿಯ ನೆರವು ನೀಡಲಾಗುತ್ತಿದೆ. ಇಲ್ಲಿ ಸ್ವತಃ ವಿಕಲಚೇತನರಾಗಿರುವವರೇ ಬಹಳ ಶ್ರಮಪಟ್ಟು  ಸಂಸ್ಥೆ ನಡೆಸುತ್ತಿದ್ದು, ಸಂಸ್ಥೆಯ ಅಗತ್ಯತೆ ತಿಳಿದುಕೊಂಡು ಸಾಮಗ್ರಿ ನೀಡಲಾಗಿದೆ. ಸಂಸ್ಥೆಯ ಮಕ್ಕಳ ಭವಿಷ್ಯ ಉಜ್ವಲವಾಗಲಿ. ಸಮಾಜದ ಇನ್ನಿತರ ಸಂಘಟನೆಗಳೂ ನೆರವಿಗೆ ಮುಂದೆ ಬರಲಿ ಎಂದು ಆಶಿಸಿದರು.
ಸಮೃದ್ಧ ಅಂಗವಿಕಲರ ಸಂಸ್ಥೆಯ ಅಧ್ಯಕ್ಷರಾದ ಶಿವನಗೌಡ ಪಾಟೀಲ್, ಕಾರ್ಯದರ್ಶಿ ಪ್ರಶಾಂತ್ ಬೋಧದಾರ್, ಸಂಸ್ಥೆಯ ಸದಸ್ಯರು ಹಾಗೂ ವಿದ್ಯಾರ್ಥಿಗಳು, ಪ್ರಯತ್ನ ಸಂಸ್ಥೆಯ ಕಾರ್ಯದರ್ಶಿ ಗೌರಿ ಸರ್ನೋಬತ್, ಸಂಸ್ಥೆಯ ಸದಸ್ಯರಾದ ವೆಂಕಟೇಶ ಸರ್ನೋಬತ್, ವೀಣಾ ಕುಲಕರ್ಣಿ, ಸಂಗೀತಾ ಪಾಟೀಲ, ವರದಾ ಭಟ್, ಶ್ವೇತಾ ಬಿಜಾಪುರೆ ಮೊದಲಾದವರು ಇದ್ದರು.
WhatsApp Group Join Now
Telegram Group Join Now
Share This Article