ಅಥಣಿ: ಕಾರಖಾನೆ ಆಡಳಿತ ಮಂಡಳಿಯೊಂದಿಗೆ 15 ಜನರ ಸಲಹಾ ಸಮೀತಿ ರಚಿಸಿ ಆ ಮೂಲಕ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯನ್ನು ಮುನ್ನಡೆಸುವುದಿದ್ದರೆ ಮಾತ್ರ ನಾನು ಮತ್ತು ರಾಜು ಕಾಗೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಯ ನೇತೃತ್ವ ವಹಿಸಿಕೊಳ್ಳುತ್ತೇವೆ. ಸಲಹಾ ಸಮಿತಿ ನೀಡುವ ಸಲಹೆಗಳನ್ನು ಆಡಳಿತ ಮಂಡಳಿ ಒಪ್ಪಬೇಕು, ರೈತರ ಹಿತ, ತಾಲೂಕಿನ ಸ್ವಾಭಿಮಾನಕ್ಕೊಸ್ಕರ ನಮ್ಮ ತಾಲೂಕಿನ ರೈತರ ಮಕ್ಕಳೇ ಇಲ್ಲಿ ಆಡಳಿತ ಮಾಡಲಿ, ಸಹಕಾರಿ ಪೆನಲ್ ಅಧಿಕಾರಕ್ಕೆ ಬರುವದು ಖಚಿತ ಎಂದ ಶಾಸಕ ಲಕ್ಷ್ಮಣ ಸವದಿ ಹೇಳಿದರು
ಪಟ್ಟಣದ ರಾಯಲ್ ಸಭಾ ಭವನದಲ್ಲಿ ಶನಿವಾರ ನಡೆದ ಕೃಷ್ಣ ಸಹಕಾರಿ ಸಕ್ಕರೆ ಕಾರಖಾನೆಯ 2015ರ ಆಡಳಿತ ಮಂಡಳಿಯ ಚುನಾವಣೆಯ ಹಿನ್ನಲೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಕಾರಖಾನೆ ಶೇರುದಾರ ಮತದಾರರ ಅಭಿಪ್ರಾಯ ಸಂಗ್ರಹ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು ಹಾಲಿ ಇರುವ ಆಡಳಿತ ಮಂಡಳಿಯಿಂದ ನನಗೆ ರಾಜಕೀಯವಾಗಿ ಹಾನಿಯಾಗಿದೆ, ಆಡಳಿತ ಮಂಡಳಿ ಎನೇ ತಪ್ಪು ಮಾಡಿದರೂ ಕೂಡ ಅದು ನನ್ನ ಮೇಲೆಯೇ ಬರುತ್ತದೆ, ಆದ್ದರಿಂದಲೆ ಸದ್ಯ 15 ಜನರ ಸಹಲ ಸಮಿತಿಯನ್ನು ಸ್ಥಾಪನೆ ಮಾಡಿ ಕಾರಖಾನೆಗೆ ಅಗತ್ಯ ಮತ್ತು ಸೂಕ್ತ ಸಲಹೆಗಳನ್ನು ನೀಡುತ್ತೇವೆ. ಸಲಹ ಸಮಿತಿಯ ಎಲ್ಲ ಸಲಹೆಗಳನ್ನು ಮುಂಬರುವ ಆಡಳಿತ ಮಂಡಳಿ ಚಾಚು ತಪ್ಪದೆ ಮಾಡುವದಾದರೆ ಮಾತ್ರ ಈ ಬಾರಿ ಚುನಾವಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವೆ. ಇದಕ್ಕೆ ಸಭೆಯಲ್ಲೆ ಆಡಳಿತ ಮಂಡಳಿಯ ಒಪ್ಪಿಗೆ ಪಡೆದು ಎಲ್ಲರ ಸಹಕಾರದಿಂದ ಕೃಷ್ಣ ಸಹಕಾರಿ ಸಕ್ಕರೆ ಕಾರಖಾನೆ ಹಾನಿಯಿಂದ ಲಾಭದ ಕಡೆಗೆ ಕೊಂಡೊಯ್ಯಲು ಪ್ರಾಮಾಣಿಕ ಪ್ರೇಯತ್ನ ಮಾಡಲಾಗುವದು ಎಂದು ಹೇಳಿದರು
ಈ ವೇಳೆ ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ತಪ್ಪು ತಡೆಗಳಾಗಿದ್ದರೆ ನಮ್ಮ ಗಮನಕ್ಕೆ ತನ್ನಿ, ಇಂತಹ ಸಭೆಗಳಲ್ಲಿ ನೇರವಾಗಿ ಅಭಿಪ್ರಾಯ ವ್ಯಕ್ತ ಪಡಿಸಿ ಆಗ ಮಾತ್ರ ಆಡಳಿತ ಮಂಡಳಿ ಉತ್ತಮ ಆಡಳಿತ ನಡೆಸಲು ಸಾಧ್ಯ, ಇದು ರೈತರ ಸ್ವಂತ ಕಾರಖಾನೆಯಾಗಿದೆ ರೈತರು ಮನಸ್ಸು ಮಾಡಿದಲ್ಲಿ ಬದಲಾವಣೆ ಮಾಡಲು ಸಾಧ್ಯ ಎಂದು ಹೇಳಿದರು
ಪ್ರಾಸ್ತಾವಿಕವಾಗಿ ನ್ಯಾಯವಾದಿ ಎ.ಎಮ್.ಖೊಬ್ರಿ, ಪ್ರಗತಿ ಪರ ರೈತ ರಾಜು ನಾಡಗೌಡ, ಜುಗೂಳನ ಸಹಕಾರಿ ಧುರೀಣ ಅಣ್ಣಾಸಾಹೇಬ ಪಾಟೀಲ, ಅನಂತ ಬಸರೀಖೋಡಿ, ಶ್ಯಾಮ ಪೂಜಾರಿ, ಶೀತಲ್ ಪಾಟೀಲ, ಶೇಖರಗೌಡ ನೇಮಗೌಡ, ಸುರೇಶ ಮಾಯಣ್ಣವರ, ಎ.ಸಿಪಾಟೀಲ ಸೇರಿ ಹಲವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು
ಈ ವೇಳೆ ಕಾರ್ಖಾನೆಯ ಅಧ್ಯಕ್ಷರಾದ ಪರಪ್ಪ ಸವದಿ, ಉಪಾಧ್ಯಕ್ಷ ಶಂಕರ ವಾಘಮೋರೆ, ನಿರ್ದೇಶಕ ಶಾಂತಿನಾಥ ನಂದೇಶ್ವರ, ಪುರಸಭೆ ಸದಸ್ಯರಾದ ದತ್ತಾ ವಾಸ್ಟರ, ಸಂತೋಷ ಸಾವಡಕರ, ರಾಜೂ ಗುಡೊಡಗಿ, ಜಿ ಎಮ ಪಾಟೀಲ, ಮುಖಂಡರಾದ ಚಿದಾನಂದ ಸವದಿ, ಮಲ್ಲೇಶ ಸವದಿ, ಶಿವಕುಮಾರ ಸವದಿ, ರಾಮನಗೌಡ ಪಾಟೀಲ,ಶ್ರೀಶೈಲ ನಾಯಿಕ, ವಿಶ್ವನಾಥ ತೆಲಸಂಗ, ವಿಕಾಸ ರಾಠೋಡ, ಮಲ್ಲು ಕೂಳ್ಳೋಳ್ಳಿ, ಅಮೋಘ ಖೋಬ್ರಿ, ಧರೇಪ್ಪ ಠಕ್ಕಣ್ನವರ, ಮಹಾಂತೇಶ ಠಕ್ಕಣ್ಣವರ, ದಿಲೀಪ ಲೋಣಾರೆ,ಮುತ್ತು ಮೋಕಾಶಿ,ಬಸು ತೇರದಾಳ, ಸೇರಿದಂತೆ ಕಾರಖಾನೆ ಶೇರುದಾರ ಮತದಾರರು ಹಾಗೂ ಹಿತೈಸಿಗಳು ಉಪಸ್ಥಿತರಿದ್ದರು