ಬೆಳಗಾವಿ. ನಗರದಲ್ಲಿ ನಡೆದ ಅಟಲ್ ಜೀ ವಿರಾಸತ್ ಸಮ್ಮೇಳನವು ತುಂಬಾ ವಿಶೇಷವಾಗಿ ಅಟಲ್ ಜೀ ಅವರ ನೆನಪುಗಳ ಬೆಳಗಾವಿ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿನ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಅಟಲ್ ಜೀ ರವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಹಾಗೂ ಅವರನ್ನು ಭೇಟಿಮಾಡಿದ್ದ ಜಿಲ್ಲೆಯ 70 ಕ್ಕೂ ಹೆಚ್ಚು ಹಿರಿಯ ಕಾರ್ಯಕರ್ತರ ಸನ್ಮಾನ ಮಾಡಲಾಯಿತು. ಇದೇ ವೇಳೆ ಎಲ್.ಇ.ಡಿ ಪರದೆ ಮೂಲಕ ಅಟಲ್ ಜೀ ರವರ ಬಾಲ್ಯಜೀವನ ದಿಂದ ರಾಜಕೀಯ ಜೀವನ ವರೆಗಿನ ಕಿರುಚಿತ್ರ ಪ್ರದರ್ಶಿಸಲಾಯಿತು. ದಿವಂಗತ ಅಟಲ್ ಬಿಹಾರಿ ವಾಜಪೇಯಿ ವಿರಾಸತ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಜಗದೀಶ ಶೆಟ್ಟರ ಮತ್ತು ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿಯನ್ನು ಹಬ್ಬದಂತೆ ನಾವು ಆಚರಿಸುತ್ತೇವೆ ಅಂದರೆ, ಅದಕ್ಕೆ ಅವರ ಪರಿಶುದ್ಧವಾದ ವ್ಯಕ್ತಿತ್ವ ಕಾರಣ. ಅಟಲ್‌ಜೀ ಅವರು ತಮ್ಮ ಮೌಲ್ಯಾಧಾರಿತ ರಾಜಕಾರಣ, ಮುತ್ಸದ್ದಿತನ, ದೂರದೃಷ್ಟಿಯಿಂದ ವಿಶಿಷ್ಟವಾಗಿ ನಿಲ್ಲುತ್ತಾರೆ. ದೇಶವೇ ಮೊದಲು ಎಂದು ನಂಬಿದ ತತ್ವಾದರ್ಶಕ್ಕೆ ಬದ್ಧರಾಗಿ ರಾಜಕಾರಣ ನಡೆಸಿದವರು. ಆವತ್ತು ಪ್ರಮುಖ ನಗರಗಳನ್ನು ಸಂಪರ್ಕಿಸಲು ಅವರು ಹಾಕಿದ ಚತುಷ್ಪಥ ಹೆದ್ದಾರಿ ಯೋಜನೆ, ದೇಶದ ಬಗೆಗಿನ ಕಾಳಜಿ ಭಾರತದ ಆರ್ಥಿಕ ಪ್ರಗತಿಗೆ ಕಾರಣವಾಯಿತು ಎಂದು ಹೇಳಿದರು
ಶಾಸಕರಾದ ಅಭಯ್ ಪಾಟೀಲ ಹಾಗೂ ಅಭಿಯಾನದ ಜಿಲ್ಲಾ ಸಂಚಾಲಕರು ಹಾಗೂ ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಅಭಿವೃದ್ಧಿಗೆ ಹಲವಾರು ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಅವರು ಭಾರತದ ಪ್ರಧಾನ ಮಂತ್ರಿಯಾಗಿ ಮಾತ್ರವಲ್ಲದೆ ವಿದೇಶಾಂಗ ಸಚಿವರಾಗಿ ಮತ್ತು ಸಂಸತ್ತಿನ ವಿವಿಧ ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಸಕ್ರಿಯ ವಿರೋಧ ಪಕ್ಷದ ನಾಯಕರೂ ಆಗಿದ್ದರು. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಸ್ವತಂತ್ರ ಭಾರತದ ದೇಶೀಯ ಮತ್ತು ವಿದೇಶಿ ನೀತಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು
ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಸಮಿತಿಯ ರಾಜ್ಯ ಸಂಚಾಲಕರಾದ ಜಗದೀಶ್ ಹಿರೇಮನಿ ಅವರು ಹಾಗೂ ಮಾಜಿ ಶಾಸಕರಾದ ಸಂಜಯ್ ಪಾಟೀಲ್ ಅವರು “ಅಟಲ್ ಜೀ ರವರ ಜೀವನ” ವಿಷಯ ಕುರಿತು ಮಾಹಿತಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷರಾದ ಶ್ರೀಮತಿ ಗೀತಾ ಸುತಾರ, ಶಾಸಕರಾದ ವಿಠ್ಠಲ ಹಲಗೇಕರ, ಮಾಜಿ ಸಂಸದರಾದ ಮಂಗಳಾ ಅಂಗಡಿ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ವಿಶ್ವನಾಥ್ ಪಾಟೀಲ್,ಅರವಿಂದ ಪಾಟೀಲ, ಮಹಾಪೌರರಾದ ಶ್ರೀ ಮಂಗೇಶ ಪವಾರ, ಉಪಮಹಾಪೌರರಾದ ಶ್ರೀಮತಿ ವಾಣಿ ಜೋಶಿ ಹಾಗೂ ಹಿರಿಯ ಮುಖಂಡರು, ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು