ಹೊಸಪೇಟೆ ( ವಿಜಯನಗರ): ನಗರದ ವಿವಿದ ಭಾಗಗಳಲ್ಲಿ ಅಭಿವೃದ್ಧಿ ಕೆಲಸಗಳು ಸಾಗುತ್ತಿದ್ದು ,ಇದೇ ಸಂದರ್ಭದಲ್ಲಿ ಸಾರ್ವಜನಿಕ ರ ತೊಂದರೆಗಳನ್ನು ಗಮನಿಸಿದ್ದ ನಗರಸಭೆ ಬಸವಣ್ಣ ಕಾಲುವೆಯ ಪಕ್ಕದ ರಸ್ತೆಯಲ್ಲಿ ರಾತ್ರಿಯ ವೇಳೆ ಕತ್ತಲು ಇದ್ದು ,ಈ ರಸ್ತೆ ಉಪಯೋಗಿಸುವ ಸಾರ್ವಜನಿಕ ರಿಗೆ ಬೀದಿ ನಾಯಿಗಳ ಹಾವಳಿಯಿಂದ ಹಾಗು
ರಸ್ತೆಯ ತಗ್ಗು ಗುಂಡಿ ಗಳಿಂದ ಉಂಟಾಗ ಬಹುದಾದ ಅನಾಹುತ ಗಳಿಂದ ರಕ್ಷಣೆ ನೀಡಲು ಕಾಲುವೆ ಒಂದು ಭಾಗದಲ್ಲಿ ವಿದ್ಯುತ್ ಕಂಬಗಳನ್ನು ಹಾಕುವ ಕಾರ್ಯಕ್ಕೆ ಮುಂದಾಗಿದ್ದು , ಈಗಾಗಲೇ ಅವುಗಳಿಗೆ ವಿದ್ಯುತ್ ಬಲ್ಪ ಗಳ ಜೋಡಣೆ ಕೂಡಾ ಅಳವಡಿಸಿ ಇಂದು ಅಂತಿಮ ಹಂತಕ್ಕೆ ತಲುಪಿದ್ದಾರೆ. ನಗರಸಭೆಯ ವಿದ್ಯುತ್ ವಿಭಾಗ ಇಂದು ವಿದ್ಯುತ್ ಕಂಬಗಳಲ್ಲಿ ಅಲ್ಲಲ್ಲಿ “ವೆಲ್ಡಿಂಗ್” ಮಾಡಿ ಕಂಬದ ದೃಡತೆ ಯನ್ನು ಖಾತ್ರಿ ಮಾಡಿಕೊಂಡರು. ಈ ಹಿಂದಿನ ಶಾಸಕರು ಈ ಕಾರ್ಯ ಮುತುವರ್ಜಿಯಿಂದ ನಡೆಸಿ ರಸ್ತೆಗೆ ದ್ವೀಪ ಅಳವಡಿಸಿದ್ದರು.ಆದರೆ ಈ ಭಾಗದ ಜನರು ವಿದ್ಯುತ್ ಕಂಬಕ್ಕೆ ಎಳೆದ ನೆಲದ ಕೆಳಭಾಗದಲ್ಲಿ ಇರುವ ವೈರ್ ಗಳ ಮೇಲೆ ಕಸ ಹಾಕಿ ಬೆಂಕಿ ಹಚ್ಚಿ ದ್ದರಿಂದ ,ಕೆಳ ಭಾಗದಲ್ಲಿನ ವೈರ್ ಗಳು ಸುಟ್ಟು ಹೋಗಿದ್ದು ,ಇದು ಕಸ( ಗುಜರಿ ) ಆರಿಸುವ ಜನರ ಕೈಗೆ ಸಿಕ್ಕು, ವೈರ್ ನಲ್ಲಿನ ತಾಮ್ರದ ತಂತಿ ಹಾಗು ಕಬ್ಬಿಣದ ತಂತಿ ,ಪ್ಲೇಟ್ ಗಳು ಕಳುವಾಗಿದ್ದನ್ನು ಗಮನಿಸ ದ್ದ ನಗರಸಭೆ, ಕಂಬಗಳ ಕೆಳಗೆ ಪೈಬರ್ ಪ್ಲೇಟ್ ಗಳನ್ನು ಅಳವಡಿಸಿದೆ.ಸದ್ರುಡ ವಾಗಿರು ಕಂಬಗಳಿಗೆ ಬಣ್ಣ ಹಚ್ಚಿ ನೂತನಕಂಬಗಳಂತೆ ಕಾಣುವಂತೆ ಮಾಡಿದ್ದಾರೆ.ರಸ್ರೆ ಗುಂಟ ಒಟ್ಟು 40 ಕಂಬಗಳಿದ್ದು ಎಲೆಕ್ಟ್ರಾನ್ ವಿದ್ಯುತ್ ದೀಪ ಅಳವಡಿಸಿದ್ದಾರೆ .ರಾತ್ರಿ ವೇಳೆ ಹಳೆ ಶುಗರ್ ಪ್ಯಾಕ್ಟರಿ ರಸ್ತೆ ಯಿಂದ ,ನೂರು ಹಾಸಿಗೆ ಆಸ್ಪತ್ರೆ ರಸ್ತೆ ವರೆಗೆ ಇನ್ನುಮೇಲೆ ಸುರಕ್ಷಿತ ವಾಗಿ ಓಡಾಡ ಬಹುದು . ಆದರೆ ರಾತ್ರಿ ಯ ವೇಳೆ ನಾಯಿಗಳ ಕಾಟ ಕ್ಕೆ ಇನ್ನೂ ಅಂತಿಮ ತೆರೆ ಕಂಡು ಬಂದಿಲ್ಲ. ಆದರೂ ವಿದ್ಯುತ್ ದೀಪ ಹಾಕಿದ ನಗರ ಸಭೆಗೆ ಸಾರ್ವಜನಿಕ ರಿಂದ ಅಭಿನಂದನೆಗಳು ಕೇಳಿ ಬಂದಿವೆ.


