ವಿಜ್ಞಾನ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು, ಹೊಸ ಹೊಸ ಆವಿಷ್ಕಾರಗಳನ್ನು ಜಗತ್ತಿಗೆ ಪರಿಚಯಿಸಿದ ಖಗೋಳಶಾಸ್ತ್ರಜ್ಞ ಜಯಂತ್ ನಾರ್ಲಿಕರ್ ಇಂದು (ಮೇ 20) ಪುಣೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಖಗೋಳಶಾಸ್ತ್ರಜ್ಞ ಮಾತ್ರವಲ್ಲದೆ ಇವರು ಬರಹಗಾರರಾಗಿಯೂ ಗುರುತಿಸಿಕೊಂಡವರು. ಬರಹಗಳ ಮೂಲಕ ಸಂಕೀರ್ಣವಾದ ವೈಜ್ಞಾನಿಕ ವಿಷಯಗಳನ್ನು ಸರಳ, ಸುಂದರ ಭಾಷೆಯಲ್ಲಿ ಪ್ರಸ್ತುತಪಡಿಸುವ ಅವರ ಶೈಲಿ ತುಂಬಾನೇ ವಿಶಿಷ್ಟವಾಗಿತ್ತು. ಖಗೋಳಶಾಸ್ತ್ರಜ್ಞನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುವುದರ ಹಿಂದೆಯೂ ಒಂದು ಕಾರಣವಿತ್ತಂತೆ.
ಖಗೋಳಶಾಸ್ತ್ರಜ್ಞ ಜಯಂತ್ ನಾರ್ಲಿಕರ್ ಇಂದು ನಿಧನ
