ಗಗನಯಾತ್ರಿ ಶುಭಾಂಶು ಶುಕ್ಷಾ ಹಾಗೂ ಮೂವರು ಸಹಚರರು ಇಂದು ಭೂಮಿಗೆ

Ravi Talawar
ಗಗನಯಾತ್ರಿ ಶುಭಾಂಶು ಶುಕ್ಷಾ ಹಾಗೂ ಮೂವರು ಸಹಚರರು ಇಂದು ಭೂಮಿಗೆ
WhatsApp Group Join Now
Telegram Group Join Now

 ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಇಂದು ಭೂಮಿಗೆ ಮರಳಲಿದ್ದಾರೆ. ಶುಭಾಂಶು ಮತ್ತು ಅವರ ಮೂವರು ಸಹಚರರು ಆಕ್ಸಿಯಮ್ -4 ಮಿಷನ್ ಸೋಮವಾರ ಸಂಜೆ 4.45 ಕ್ಕೆ (ಭಾರತೀಯ ಸಮಯ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್​ಎಸ್​) ಭೂಮಿಯ ಕಡೆಗೆ ಪ್ರಯಾಣ ಬೆಳೆಸಿದರು. ಈ ಗಗನಯಾತ್ರಿಗಳ ತಂಡವು ಸುಮಾರು 22.5 ಗಂಟೆಗಳ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ ಮಂಗಳವಾರ ಅಂದರೆ ಇಂದು ಮಧ್ಯಾಹ್ನ 3 ಗಂಟೆಗೆ (ಭಾರತೀಯ ಸಮಯ) ಕ್ಯಾಲಿಫೋರ್ನಿಯಾದ ಸಮುದ್ರ ತೀರದಲ್ಲಿ ಇಳಿಯಲಿದೆ.

ಅನ್​ಡಾಕಿಂಗ್​ ನೇರ ಪ್ರಸಾರ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಶುಭಾಂಶು ಮತ್ತು ಅವರ ಮೂವರು ಸಹಚರರು ಬಾಹ್ಯಾಕಾಶ ನಿಲ್ದಾಣದಿಂದ ಅನ್​ಡಾಕಿಂಗ್​ ಪ್ರಕ್ರಿಯೆಯನ್ನು ನೇರ ಪ್ರಸಾರ ಮಾಡಿತು. ಶುಭಾಂಶು ಜೊತೆಗೆ ಭೂಮಿಗೆ ಹಿಂದಿರುಗುತ್ತಿರುವ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಆಕ್ಸಿಯಮ್ -4 ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಮಿಷನ್ ತಜ್ಞರಾದ ಪೋಲೆಂಡ್‌ನ ಸ್ಲಾವೋಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಕೂಡ ಇದ್ದಾರೆ.

ಶುಭಾಂಶು ಮತ್ತು ಅವರ ಮೂವರು ಸಹಚರರು ಈಗಾಗಲೇ ಐಎಸ್​ಎಸ್​ನಲ್ಲಿದ್ದ ಇತರ ಗಗನಯಾತ್ರಿಗಳನ್ನು ತಬ್ಬಿಕೊಂಡು ಪರಸ್ಪರ ಅಭಿನಂದನೆ ಸಲ್ಲಿಸುವ ಮೂಲಕ ಭೂಮಿಗೆ ಮರಳಲು ಡ್ರ್ಯಾಗನ್ ಹತ್ತಿದರು. ಭಾನುವಾರದಂದು, ತಮ್ಮ ಭಾಷಣದಲ್ಲಿ ಶುಭಾಂಶು ನಾವು ಶೀಘ್ರದಲ್ಲೇ ಭೂಮಿಯ ಮೇಲೆ ಭೇಟಿಯಾಗುತ್ತೇವೆ ಎಂದು ಹೇಳಿದ್ದರು.

ಜೂನ್ 26 ರಂದು ಐಎಸ್​ಎಸ್​ ತಲುಪಿದ ಶುಭಾಂಶು ಈ 18 ದಿನಗಳ ಪ್ರಯಾಣದಲ್ಲಿ 288 ಬಾರಿ ಭೂಮಿಯನ್ನು ಪರಿಭ್ರಮಿಸಿದರು. ಶುಭಾಂಶು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ. ಅವರಿಗಿಂತ ಮೊದಲು ರಾಕೇಶ್ ಶರ್ಮಾ 1984 ರಲ್ಲಿ ಬಾಹ್ಯಾಕಾಶಕ್ಕೆ ತೆರಳಿ ಇತಿಹಾಸ ಸೃಷ್ಟಿಸಿದ್ದರು.

WhatsApp Group Join Now
Telegram Group Join Now
Share This Article