ಗುಡಿಸಲು ಆಕಸ್ಮಿಕ ಬೆಂಕಿ/ಶಾಸಕ ಲಕ್ಷ್ಮಣ ಸವದಿ ಸಂತ್ರಸ್ತ ಕುಟುಂಬಕ್ಕೆ ನೆರವು

Pratibha Boi
ಗುಡಿಸಲು ಆಕಸ್ಮಿಕ ಬೆಂಕಿ/ಶಾಸಕ ಲಕ್ಷ್ಮಣ ಸವದಿ ಸಂತ್ರಸ್ತ ಕುಟುಂಬಕ್ಕೆ ನೆರವು
WhatsApp Group Join Now
Telegram Group Join Now

ಅಥಣಿ: ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ವಿಮಲವ್ವಾ ಕಲ್ಲಪ್ಪ ನಾಗನೂರ ಎಂಬುವವರ ಗುಡಿಸಲು ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಈ ದುರ್ಘಟನೆಯಲ್ಲಿ ಗುಡಿಸಲಿನಲ್ಲಿದ್ದ ಬಟ್ಟೆಗಳು, ಆಹಾರ ಧಾನ್ಯಗಳು, ಬೆಲೆಬಾಳುವ ವಸ್ತುಗಳು ಮತ್ತು ಪ್ರಮುಖ ದಾಖಲೆಗಳು ಸೇರಿ ೨ ರಿಂದ ೩ ಲಕ್ಷ ರೂ.ಗಳ ಹಾನಿ ಸಂಭವಿದ್ದ ಘಟನಾ ಸ್ಥಳಕ್ಕೆ ಶಾಸಕ ಲಕ್ಷö್ಮಣ ಸವದಿ ಬೇಟಿ ನೀಡಿ ೫೦ ಸಾವಿರ ರೂ.ಗಳ ನೆರವು ನೀಡಿ ಮಾನವಿಯತೆ ಮೇರೆದಿದ್ದಾರೆ.
ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮ ಬಳಿಯ ಬಡ ಕುಟುಂಬ ಗುಡಿಸಿಲಿನಲ್ಲಿ ವಾಸವಿದ್ದು ಆಕ್ಮೀಕ ಬೆಂಕಿ ಅವಘಡ ಸಂಭವಿಸಿ ಅಪಾರ ಹಾನಿಯಾಗಿದ್ದು ಸೋಮವಾರ ಶಾಸಕ ಲಕ್ಷö್ಮಣ ಸವದಿ ಅವರು ಸ್ಥಳಕ್ಕೆ ಬೇಟಿ ನೀಡಿ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಸಂತ್ರಸ್ತ ಕುಟುಂಬದ ಮುಖ್ಯಸ್ಥೆ ವಿಮಲವ್ವಾ ಕಲ್ಲಪ್ಪ ನಾಗನೂರ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದ ಶಾಸಕ ಲಕ್ಷ್ಮಣ ಸವದಿ ಅವರು, ನಷ್ಟದ ಕುರಿತು ವಿಷಾದ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ಲಕ್ಷö್ಮಣ ಸವದಿ ಮಾತನಾಡಿ ವಿಮಲವ್ವಾ ನಾಗನೂರ ಅವರ ಮನೆ ಅಕಸ್ಮಿಕ ಬೆಂಕಿಯಿಂದ ಸುಟ್ಟು ಹೋಗಿರುವ ಘಟನೆ ಅತ್ಯಂತ ದುಃಖಕರ. ಈ ಅನಿರೀಕ್ಷಿತ ಅನಾಹುತದಿಂದ ಕುಟುಂಬಕ್ಕೆ ಆಗಿರುವ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಆದರೆ, ಸಂತ್ರಸ್ತ ಕುಟುಂಬವು ಧೈರ್ಯಗೆಡಬಾರದು. ಕೂಡಲೇ ಸರ್ಕಾರದಿಂದ ಸಿಗಬೇಕಾದ ಎಲ್ಲ ರೀತಿಯ ಪರಿಹಾರ ಮತ್ತು ಸೂಕ್ತ ಅನುದಾನವನ್ನು ಆದಷ್ಟು ಬೇಗನೆ ಕೊಡಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಸಂತ್ರಸ್ತ ಕುಟುಂಬಕ್ಕೆ ತಾತ್ಕಾಲಿಕ ನೆರವು ಒದಗಿಸುವುದರ ಜೊತೆಗೆ, ಸರ್ಕಾರದಿಂದ ಗರಿಷ್ಠ ಪರಿಹಾರ ಮತ್ತು ಮನೆ ನಿರ್ಮಾಣಕ್ಕೆ ಸಹಾಯಧನ ಕೊಡಿಸುವ ಭರವಸೆಯನ್ನು ನೀಡಿದರು.
ಈ ವೇಳೆ ಅಶೋಕ ಕೌಜಲಗಿ, ಶ್ರೀಶೈಲ ನಾಯಕ, ಬಸವರಾಜ ಮರನೂರ್, ವಿನಾಯಕ ಕರಬಸಪ್ಪಗೊಳ, ಮಲ್ಲು ಕುಳ್ಳೋಳಿ, ಮುತ್ತು ಮೊಕಾಶಿ, ಬಸು ತೇರದಾಳ, ಆನಂದ ಮಾದಗುಡಿ, ಅಧಿಕಾರಿ ಎಮ್. ಎಮ್ ಮಿರ್ಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article