ಬೆಳಗಾವಿ 12: ದಕ್ಷಿಣ ಕರ್ನಾಟಕದ ಬೆಂಗಳೂರು ಮತ್ತು ಮೈಸೂರು ಭಾಗಗಳಲ್ಲಿ ಮಾಡಿದ ಅಭಿವೃದ್ಧಿಯ ಕನಿಷ್ಠ 75% ಪ್ರತಿಶತ ಅಭಿವೃದ್ಧಿಯನ್ನಾದರೂ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಮಾಡಿರಿ ಎಂದು ನಾಡಿದ ಮತ್ತು ದೇಶದ ಹಿರಿಯ ವರಿಷ್ಠ ರಾಜಕಾರಣಿ ಮತ್ತು ರಾಷ್ಟಿçÃಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರು ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳನ್ನು ಕಲಬುರ್ಗಿ ಜಿಲ್ಲೆಯ ಯಡ್ರಾಮಿಯಲ್ಲಿ ನಡೆದ ಸರಕಾರಿ ಸಮಾರಂಭದಲ್ಲಿ ಬಹಿರಂಗ ವೇದಿಕೆಯ ಮೇಲೆಯೇ ಮೊನಚಾದ ಮಾತುಗಳಿಂದ ಆಗ್ರಹಿಸಿರುವದು ಅಭಿವೃದ್ಧಿಯ ವಿಷಯದಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿರುವುದಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ ನಗರದಲ್ಲಿ ಇಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾವು ಸಿಂಗಾಪೂರ ಮಾದರಿಯ ಅಭಿವೃದ್ಧಿಯನ್ನು ನಿರಿಕ್ಷೀಸಿಲ್ಲ. ಆದರೆ ಕನಿಷ್ಠ ಪಕ್ಷ ದಕ್ಷಿಣ ಕರ್ನಾಟಕದಲ್ಲಿ ಆದ ಅಭಿವೃದ್ಧಿಯ ಕನಿಷ್ಠ 75% ಪ್ರತಿಶತ ಅಭಿವೃದ್ಧಿಯನ್ನು ನಿರೀಕ್ಷಿಸುವದು ನಮ್ಮ ಹಕ್ಕು ಎಂದೂ ಸಹ ಮಲ್ಲಿಕಾರ್ಜು ಖರ್ಗೆ ಯವರು ಈ ಸಂದರ್ಭದಲ್ಲಿ ಖಾರವಾಗಿ ಹೇಳಿದ ಅವರ ಮಾತುಗಳು ಅಭಿವೃದ್ಧಿಯ ವಿಚಾರದಲ್ಲಿ ಈ ಭಾಗದ ಜನರ ಹತಾಶ ಭಾವನೆಯ ಪ್ರತೀಕವಾಗಿದ್ದು, ಸುಧೀರ್ಘ ರಾಜಕಾರಣ ಹಾಗೂ ಸರಕಾರದ ಆಡಳಿತಾತ್ಮಕ ಅಧಿಕಾರ ಹೊಂದಿದ ಅಂತಹ ನಾಯಕರಿಂದಲೇ ಇಂತಹ ಮಾತುಗಳು ಬಂದಿರುವದು ಕರ್ನಾಟಕ ರಾಜ್ಯದ ರಾಜಕೀಯ ಮತ್ತು ಆಡಳಿತಾತ್ಮಕ ವ್ಯವಸ್ಥೆಯ ಮನೋಸ್ಥಿತಿಯನ್ನು ಅರ್ಥೈಸುತ್ತಿದೆ ಎಂದು ಪೂಜಾರಿ ಯವರು ಪ್ರತಿಕ್ರಿಯಿಸಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದಿಂದ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಪೂರಕವಾಗಿ ಸರಕಾರದಿಂದ ಗಟ್ಟಿ ನಿಲುವಿನ ಅನೇಕ ಆದೇಶಾತ್ಮಕ ನಿರ್ಣಯಗಳು ಬರಹುದೆಂದು ನಿರೀಕ್ಷೆಯಲ್ಲಿದ ಉತ್ತರ ಕರ್ನಾಟಕ ಭಾಗದ ಜನರಿಗೆ ಭ್ರಮ ನಿರಶನವನ್ನುಂಟುಮಾಡಿದೆ. ಹಾಗೂ ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ತಮ್ಮ ರಾಜಕೀಯ ಇಚ್ಚಾಶಕ್ತಿಯನ್ನು ಸರಕಾರದ ಮೇಲೆ ಪ್ರಕಟಿಸುವಲ್ಲಿ ವಿಫಲರಾಗಿದ್ದಾರೆ. ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯ ವಿಭಜನೆಯೂ ಸಹ ಕನಸಾಗಿಯೇ ಉಳಿದು ಅನೇಕ ಅಭಿವೃದ್ಧಿಪರ ಕೊಡುಗೆಗಳಿಂದ ಬೆಳಗಾವಿ ಜಿಲ್ಲೆ ಜನತೆ ಮುಂದೆಯೂ ಸಹ ಅನ್ಯಾಯಕ್ಕೊಳಪಡುವ ಸ್ಥಿತಿ ಮುಂದುವರೆದಿದೆ ಎಂದು ಖೇಧ ವ್ಯಕ್ತಪಡಿಸಿದ್ದಾರೆ. ಇನ್ನುಮುಂದೆ ಈ ಕುರಿತು ಬಹುದೊಡ್ಡ ಹೋರಾಟಕ್ಕೆ ಅನಿಯಾಗಲು ಈ ಭಾಗದ ಜನ ಸನ್ನದ್ದರಾಗಿದ್ದಾರೆ ಎಂದು ಸರಕಾರಕ್ಕೆ ಎಚ್ಚರಿಸಿದ್ದಾರೆ.


