ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರಂತರ ಕಲಿಕೆಯಿಂದ ಉತ್ತಮ ಫಲಿತಾಂಶ :ಅಶೋಕ್ ಕುಮಾರ್ 

Ravi Talawar
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರಂತರ ಕಲಿಕೆಯಿಂದ ಉತ್ತಮ ಫಲಿತಾಂಶ :ಅಶೋಕ್ ಕುಮಾರ್ 
WhatsApp Group Join Now
Telegram Group Join Now
ಧಾರವಾಡ: ಸತ್ತೂರಿನ ಶ್ರೀ ಬಸವೇಶ್ವರ ಎಜುಕೇಶನ್ ಆ್ಯಂಡ್ ಡೆವಲಪ್ಮೆಂಟ್ ಟ್ರಸ್ಟ್ ಹಾಗೂ ಡಾ ಶರಣಪ್ಪ ಎಂ ಕೊಟಗಿ ಚಾರಿಟೇಬಲ್ ಟ್ರಸ್ಟ್ ಸತ್ತೂರ ಮತ್ತು ರೂರಲ್ ಬಿ.ಇಡಿ ಕಾಲೇಜ್ ಸತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸ ಮಾಲಿಕೆ ವಿಷಯ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನ.
 ನಮ್ಮ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕಯ ಮಾಹಿತಿಯನ್ನು ಒದಗಿಸುವುದರ ಜೊತೆಗೆ ಅವರನ್ನು ಕಲಿಕೆಯಲ್ಲಿ ತೊಡಗಿಸಲು ಇಂತಹ ಉಪನ್ಯಾಸ ಮಾಲಿಕೆಯ ಮೂಲಕ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ವಿಷಯಗಳನ್ನು ಬೋಧಿಸುವುದರೊಂದಿಗೆ ವಿದ್ಯಾರ್ಥಿಗಳ ಜೀವನ ರೂಪಿಸುವ ಕಾರ್ಯವನ್ನು ಮಾಡಲಾಗುತ್ತದೆ  ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ   ಶ್ರೀ ಬಸವೇಶ್ವರ ರೂರಲ್ ಎಜುಕೇಶನ್ ಆ್ಯಂಡ್ ಡೆವಲಪ್ಮೆಂಟ್ ಟ್ರಸ್ಟಿನ  ಅಧ್ಯಕ್ಷರಾದ ಡಾ ಶರಣಪ್ಪ ಎಂ  ಕೊಟಗಿರವರು ಮಾತನಾಡಿದರು.
ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಯಾವ ರೀತಿಯ ಪ್ರಯತ್ನ ಕ್ಕೆ ಪ್ರತಿಫಲ ದೊರೆಯುತ್ತದೆ ಹೇಗೆ ಓದಬೇಕು ಯಾವುದನ್ನು ಓದಬೇಕು. ಸಾಮಾನ್ಯ ಜ್ಞಾನದಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ, ಕ್ರೀಡೆ, ತಂತ್ರಜ್ಞಾನ, ಪ್ರಶಸ್ತಿ, ರಾಜಕೀಯ, ಆರ್ಥಿಕತೆ ಮುಂತಾದ ವಿಷಯಗಳನ್ನು ನಿರಂತರ ಕಲಿಕೆಯಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಬರಲು ಸಾಧ್ಯ ಹಾಗೆ ದಿನನಿತ್ಯ ನಿಯತಕಾಲಿಕೆಗಳು ಯೋಜನೆ ದಿನಪತ್ರಿಕೆಗಳು ಹಲವಾರು ಲೇಖಕರು ಮತ್ತು ಸಂಪಾದಕರ ಪುಸ್ತಕಗಳನ್ನು ಸ್ಪರ್ಧಾರ್ಥಿಯು ಇಡಿಯಾಗಿ ಓದುವುದಕ್ಕಿಂತ ಬಿಡಿ  ಬಿಡಿಯಾಗಿ ಓದಿ ಅರ್ಥೈಸಿಕೊಳ್ಳುವುದರ ಮೂಲಕ ಯಶಸ್ಸನ್ನು ಹೊಂದಲು ಸಾಧ್ಯ ಎಂದು ಗುರುದೇವ್ ಐಎಎಸ್ & ಕೆಎಎಸ್ ಸ್ಟಡಿ ಸರ್ಕಲ್ ಧಾರವಾಡದ ತರಬೇತಿದಾರರಾದ ಅಶೋಕ್ ಕುಮಾರ್ ರವರು ಮಾತನಾಡಿದರು
  ಪ್ರಸ್ತಾವಿಕವಾಗಿ ರೂರಲ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯರಾದ ಡಾ. ಮಾಂತೇಶ್ ಹಿರೇಮಠ್ ರವರು ಮಾತನಾಡಿದರು .
 ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಶ್ರೀ ಬಸವೇಶ್ವರ ಫಾರ್ಮಸಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ನವೀನ್ ಕರೆರ ಮತ್ತು ಶ್ರೀ ಎಲ್ ವಾಯ್ ಬುಡ್ಡನವರ ಕಾರ್ಯಕ್ರಮದ ಸಂಯೋಜಕರಾದ ಶ್ರೀ ರಂಗನಾಥ ದಾಸರ ಹಾಗೂ ಎಲ್ಲಾ ಕಾಲೇಜಿನ  ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
WhatsApp Group Join Now
Telegram Group Join Now
Share This Article