ಬಳ್ಳಾರಿ: 25 ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಘಟಕ, ಸನ್ಮಾರ್ಗ ಗೆಳೆಯರ ಬಳಗ ಬಳ್ಳಾರಿ, ಮಹಾದೇವ ತಾತ ಕಲಾ ಸಂಘ ಹಂದ್ಯಾಳು ಇವರ ಸಂಯುಕ್ತ ಆಶ್ರಯದಲ್ಲಿ ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ಹಾಸ್ಯ ಭರಿತವಾದ ದನಾ ಕಾಯುವವರ ದೊಡ್ಡಾಟ ನಾಟಕದ ಮೂಲಕ ದಿನಾಂಕ 24-04-2024 ರಂದು ಬುಧವಾರ ಕಾರೆಕಲ್ಲು ಗ್ರಾಮದಲ್ಲಿ ಪ್ರದರ್ಶಿಸಲಾಯಿತು .
ಚುನಾವಣೆ ಪರ್ವ ದೇಶದ ಗರ್ವ, ನಮ್ಮ ಮತ ನಮ್ಮ ಹಕ್ಕು ಎಂಬ ಧ್ಯೇಯ ವಾಕ್ಯದೊಂದಿಗೆ ಮತದಾನ ಮಾಡಲು ಜಾಗೃತಿ ಮೂಡಿಸಲಾಯಿತು ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನದ ಆಶಯ ಜನರ ಹಿತವನ್ನು ಕಾಯುವುದಾಗಿದೆ ಅದಕ್ಕಾಗಿ ಪ್ರತಿಯೊಬ್ಬರು ಸುಭದ್ರ ಸರ್ಕಾರ ರಚನೆಯಾಗಲು ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಲಾಯಿತು .
ಮತದಾನ ಮಾಡುವ ಜಾಗೃತಿ ಗೀತೆಗಳು ಹಾಡಿಸಲಾಯಿತು. ಹಾಸ್ಯದ ಮೂಲಕ ಪ್ರತಿಯೊಬ್ಬ ಯುವಕ ಯುವತಿಯರು ತಪ್ಪದೆ ಮತದಾನ ಮಾಡಲು ತಿಳಿಸಲಾಯಿತು ಪ್ರತಿಯೊಬ್ಬರು ಮೊಬೈಲಿಗೆ ದಾಸರಾಗದೆ ವಿಶೇಷವಾಗಿ ವೃದ್ಧರು ವಿಕಲಚೇತನರು ಅನಾರೋಗ್ಯದಿಂದ ಕೂಡಿರುವಂತಹ ವ್ಯಕ್ತಿಗಳು ಇದ್ದರೆ ಅವರಿಗೆ ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಮಾಡಿ ಮತಗಟ್ಟೆಗೆ ಬಂದು ಮತ ಚಲಾಯಿಸಲು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಅನುವು ಮಾಡಿಕೊಡುತ್ತದೆ ಎಂದು ತಿಳಿಸಲಾಯಿತು ಅದಕ್ಕಾಗಿ ತಪ್ಪದೆ ವೋಟ್ ಮಾಡಿ ಎಂದು ತಿಳಿಸಲಾಯಿತು ಕಾರ್ಯಕ್ರಮದಲ್ಲಿ ದಿ.ಶಂಕರ್ ನಾಯ್ಡು ರಚಿಸಿದ ರಂಗಕಲಾವಿದರಾದ ಪುರುಷೋತ್ತಮಹಂದ್ಯಾಳು ಅವರ ನಿರ್ದೇಶನದಲ್ಲಿ ನಾಟಕ ಪ್ರದರ್ಶನವಾಯಿತು.
ಕಲಾವಿದರಾದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎ ಎರ್ರಿಸ್ವಾಮಿ ರವರು ಹಾಸ್ಯದ ಮೂಲಕ ಜಾಗೃತಿ ಮೂಡಿಸಿದರು ಶ್ರೀ ಸಂದೀಪ್ ರವರಿಂದ ಮ್ಯಾಜಿಕ್ ಮೂಲಕ ಜಾಗೃತಿ ಮೂಡಿಸಲಾಯಿತು.
ಶ್ರೀ ನವೀನ್ ಮತ್ತು ತಂಡದಿಂದ ನೃತ್ಯದ ಮೂಲಕ ಜಾಗೃತಿ ಮೂಡಿಸಲಾಯಿತು ಸನ್ಮಾರ್ಗ ಗೆಳೆಯರ ಬಳಗದ ಸಂಚಾಲಕರಾದ ಕಪ್ಪುಗಲ್ ಬಿ ಚಂದ್ರಶೇಖರ್ ಆಚಾರ್ , ಕಲಾವಿದರಾದ ಶ್ರೀ ಪಾರ್ವತೇಶ, ಅಂಬರೀಶ್ ಅಚ್ಚೊಳ್ಳಿ, ದ್ರೌಪದಿ ಪಾತ್ರಧಾರಿ ಮೌನೇಶ್ ಕಲ್ಲಿಳ್ಳಿ, ಕುಮಾರ್ ಗೌಡ ಅಮರಾಪುರ, ವನ್ನೂರ್ಸಾಬ್, ಗಾದಿಲಿಂಗಪ್ಪ, ಸುಂಕಣ್ಣ, ಭೀಮನೇನಿ ಪ್ರಸಾದ್, ಹನುಮಂತಪ್ಪ , ಲೇಪಾಕ್ಷಿ ಗೌಡ, ಮುಂತಾದವರು ಭಾಗವಹಿಸಿದ್ದರು ಊರಿನ ಪ್ರಮುಖರಾದ ಕಟ್ಟೆಗೌಡರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.