“ಅಥಣಿ ನಗರಸಭೆಯಾಗಿ ಮೇಲ್ದರ್ಜೆಗೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ” ಶಿವಕುಮಾರ ಸವದಿ, ದಿಲೀಪ ಲೋಣಾರೆ ‌ಭಾಗಿ

Pratibha Boi
“ಅಥಣಿ ನಗರಸಭೆಯಾಗಿ ಮೇಲ್ದರ್ಜೆಗೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ” ಶಿವಕುಮಾರ ಸವದಿ, ದಿಲೀಪ ಲೋಣಾರೆ ‌ಭಾಗಿ
WhatsApp Group Join Now
Telegram Group Join Now
ಅಥಣಿ : ಪುರಸಭೆಯನ್ನು ನಗರ ಸಭೆಯಾಗಿ ಮೇಲ್ದರ್ಜೆಗೇರಿದ ವಿಷಯ ತಿಳಿಯುತ್ತಿದ್ದಂತೆಯೇ ಯುವ ಮುಖಂಡರಾದ  ಶಿವಕುಮಾರ ಸವದಿ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ ನೇತೃತ್ವದಲ್ಲಿ ಪುರಸಭೆಯ ಸದಸ್ಯರು ಅಂಬೇಡ್ಕರ ವೃತ್ತದಲ್ಲಿ ಜಮಾವಣೆಗೊಂಡು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು.
ಸಂಭ್ರಮದಲ್ಲಿ ಪುರಸಭೆಯನ್ನು ನಗರ ಸಭೆಯಾಗಿ ಮೇಲ್ದರ್ಜೆಗೇರಲು ಪ್ರಮುಖ ಕಾರಣೀಕರ್ತರಾದ ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿಯವರಿಗೆ ಜೈ ಕಾರ ಹಾಕಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಶಿವಕುಮಾರ ಸವದಿ ಮಾತನಾಡಿ ಅಥಣಿ ಪುರಸಭೆ ನಗರ ಸಭೆಯಾಗಿ ಈ ಮೊದಲೇ ಮೇಲ್ದರ್ಜೆಗೇರಬೇಕಿತ್ತು ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಹಿನ್ನಡೆಯಾಗಿತ್ತು ಅಥಣಿ ಜನರು ಬಹುದಿನಗಳ ಬೇಡಿಕೆಯನ್ನು ಶಾಸಕರಾದ ಲಕ್ಷ್ಮಣ ಸವದಿಯವರ ಸತತ ಪ್ರಯತ್ನದ ಫಲವಾಗಿ ಈಡೇರಿದೆ ಪುರಸಭೆಯಿಂದ ನಗರ ಸಭೆಯಾಗಿ ಮೇಲ್ದರ್ಜೆಗೇರಿದ್ದು, ನಮಗೆಲ್ಲರಿಗೂ ಸಂತೋಷ ತಂದಿದೆ ಎಂದರು.
ಪುರಸಭಾ ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ ಮಾತನಾಡಿ, 1853 ರಲ್ಲಿ ಪುಣೆ ಮುನಿಸಿಪಾಲಿಟಿ ಯೊಂದಿಗೆ ಪ್ರಾರಂಭಗೊಂಡ ಅಥಣಿ ಪುರಸಭೆ ಇಂದು ನಗರ ಸಭೆಯಾಗಿ ಮೇಲ್ದರ್ಜೆಗೇರಿದೆ ಇದಕ್ಕೆ ಹಗಲಿರುಳು ಶ್ರಮಿಸಿ ಕಾರಣೀಕರ್ತರಾದ ಅಥಣಿ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿಯವರಿಗೆ ಅಥಣಿ ನಾಗರಿಕರ ಪರವಾಗಿ ಧನ್ಯವಾದಗಳು ತಿಳಿಸುತ್ತೇನೆ ಎಂದ ಅವರು ಶಾಸಕ ಲಕ್ಷ್ಮಣ ಸವದಿಯವರ ನೇತೃತ್ವದಲ್ಲಿಯೇ ಅಥಣಿ ನಗರ ಸಭೆಯಿಂದ ಮಹಾ ನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಲಿ ಎಂದರು.
ಪುರಸಭಾ ಸದಸ್ಯರಾದ ಮಲ್ಲೇಶ ಹುದ್ದಾರ, ರಾಜಶೇಖರ ಗುಡೋಡಗಿ, ನರಸು ಬಡಕಂಬಿ ಮಾತನಾಡಿ, ಅಥಣಿ ಪುರಸಭೆ ನಗರ ಸಭೆಯಾಗಿ ಮೇಲ್ದರ್ಜೆಗೇರಿರುವುದು ನಮಗೆಲ್ಲ ಸಂತೋಷ ತಂದಿದೆ ಮತ್ತು ಸರಕಾರದ ಮೇಲೆ ಒತ್ತಡ ಹಾಕಿ ನಗರ ಸಭೆಯಾಗಿಸಿದ ಶಾಸಕ ಲಕ್ಷ್ಮಣ ಸವದಿಯವರಿಗೆ ಧನ್ಯವಾದಗಳು ಎಂದರು.
ವಿಜಯೋತ್ಸವದಲ್ಲಿ ಶಿವಕುಮಾರ ಸವದಿ, ಮಾಜಿ ಪುರಸಭಾ ಅಧ್ಯಕ್ಷ ದಿಲೀಪ ಲೋಣಾರೆ, ಮಲ್ಲೇಶ ಹುದ್ದಾರ, ರಾಜಶೇಖರ ಗುಡೋಡಗಿ, ರಾಜು ಬುಲಬುಲೆ ಬಿ.ಎನ್.ಪಾಟೀಲ, ವಿಶ್ವನಾಥ ಗಡದೆ, ಬಸು ನಾಯಿಕ, ಮುಸ್ತಾಕ್ ಮುಲ್ಲಾ. ಮಾಜಿ ಸದಸ್ಯ ನಿತಿನ ಗೊಂಗಡಿ. ಆಸೀಫ್ ತಾಂಬೋಳಿ. ಇಲಿಯಾಸ್ ಹಿಪ್ಪರಗಿ.
ಶ್ರೀನಿವಾಸ ಪಟ್ಟಣ. ಆನಂದ ಮಾಕಾಣಿ. ಆನಂದ ಮಾದಗುಡಿ. ಮನ್ಸೂರ್ ಬಾಗವಾನ. ಮತ್ತು ಪುರಸಭಾ ಸಿಬ್ಬಂದಿಗಳು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article