ಪ್ರವಚನ ಮಾಲಿಕೆಗಳು ನಿರಂತರವಾಗಿ ನಡೆಯುವುದರಿಂದ ಸಮಾಜದಲ್ಲಿ ಸತ್ಪ್ರವೃತ್ತಿ ಮತ್ತು ಶಾಂತಿ ನೆಲೆಸುತ್ತದೆ: ಅರವಿಂದ ದೇಶಪಾಂಡೆ

Hasiru Kranti
ಪ್ರವಚನ ಮಾಲಿಕೆಗಳು ನಿರಂತರವಾಗಿ ನಡೆಯುವುದರಿಂದ ಸಮಾಜದಲ್ಲಿ ಸತ್ಪ್ರವೃತ್ತಿ ಮತ್ತು ಶಾಂತಿ ನೆಲೆಸುತ್ತದೆ: ಅರವಿಂದ ದೇಶಪಾಂಡೆ
WhatsApp Group Join Now
Telegram Group Join Now
ಅಥಣಿ: ವ್ಯಾಸ ಭಾರತ ಪ್ರವಚನ ಮಾಲಿಕೆ ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆಯನ್ನು ಜೀವಂತವಾಗಿಟ್ಟುಕೊಳ್ಳುವ ಮಹತ್ವದ ಕಾರ್ಯವಾಗಿದೆ. ಮಹಾಭಾರತದ ಶಾಶ್ವತ ಸಂದೇಶಗಳು ಕಾಲಾತೀತವಾಗಿದ್ದು, ಪ್ರತಿಯೊಬ್ಬರ ಜೀವನದಲ್ಲಿ ಧರ್ಮ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಹಾಯಕವಾಗುತ್ತವೆ. ಇಂತಹ ಪ್ರವಚನ ಮಾಲಿಕೆಗಳು ನಿರಂತರವಾಗಿ ನಡೆಯುವುದರಿಂದ ಸಮಾಜದಲ್ಲಿ ಸತ್ಪ್ರವೃತ್ತಿ ಮತ್ತು ಶಾಂತಿ ನೆಲೆಸುತ್ತದೆ. ಎಂದು ಜ್ಞಾನ ಸತ್ರ ವೇದಿಕೆ ಅಧ್ಯಕ್ಷ ಅರವಿಂದ ದೇಶಪಾಂಡೆ ಹೇಳಿದರು
ಅಥಣಿ ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಜ್ಞಾನ ಸತ್ರ ವೇದಿಕೆ ಅಥಣಿ ಸಂಸ್ಥಾಪಕ ಅಧ್ಯಕ್ಷ ಅರವಿಂದ ದೇಶಪಾಂಡೆ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅದ್ಯಕ್ಷ ಅರವಿಂದ ದೇಶಪಾಂಡೆ ಮಾತನಾಡಿ ಬೆಂಗಳೂರಿನ ವಿದ್ವಾನ ಶ್ರೀ ಜಗದೀಶಶರ್ಮಾ ಸಂಪ ಅವರು ಉಪನ್ಯಾಸ ನೀಡಿಲಿದ್ದಾರೆ ಜ.೧೯ ರಿಂದ ೨೩ರ ವರೆಗೆ ಜೆ ಇ ಶಿಕ್ಷಣ ಸಂಸ್ಥೆಯ ಕಡಕೋಳ ಮಾಸ್ತರ ವೇದಿಕೆಯಲ್ಲಿ ಜ್ಞಾನ ಸತ್ರ ವೇದಿಕೆ, ಜಾಧವಜಿ ಶಿಕ್ಷಣ ಸಂಸ್ಥೆ, ಅಥಣಿ ಸಾಹಿತ್ಯ ಸಾಂಸ್ಕೃತಿಕ ಸಂಘ, ಸಿದ್ದೇಶ್ವರ ಮೋಫತ್ ವಾಚನಾಲಯ, ಅಥಣಿ ರೋಟರಿ ಸಂಸ್ಥೆ, ರಾವಬಹದ್ದೂರ ಮಂಗಸೂಳಿ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ವ್ಯಾಸ ಭಾರತ ಪ್ರವಚನ ಮಾಲಿಕೆ ಕಾರ್ಯಕ್ರಮ ನಡೆಯಲಿದೆ. ಮಹಾನ್ ಗ್ರಂಥದ ತತ್ತ್ವಾರ್ಥವನ್ನು ಜನಸಾಮಾನ್ಯರಿಗೆ ಸರಳವಾಗಿ ತಲುಪಿಸುವ ಉದ್ದೇಶದಿಂದ ಆಯೋಜಿಸಲಾಗುವ ಕಾರ್ಯಕ್ರಮವೇ ವ್ಯಾಸ ಭಾರತ ಪ್ರವಚನ ಮಾಲಿಕೆ ಆಗಿದ್ದು, ವ್ಯಾಸ ಭಾರತ ಪ್ರವಚನ ಮಾಲಿಕೆ ಯುವಕರಲ್ಲಿ ಆತ್ಮವಿಶ್ವಾಸ, ಶಿಸ್ತು, ಕರ್ತವ್ಯಪ್ರಜ್ಞೆ ಮತ್ತು ರಾಷ್ಟ್ರಭಕ್ತಿಯನ್ನು ಬೆಳೆಸಲು ಸಹಕಾರಿಯಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಜ್ಞಾವಂತರು ಭಾಗವಹಿಸಿ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು
ಈ ವೇಳೆ ಮುಖಂಡರಾದ ಗಜಾನನ ಮಂಗಸೂಳಿ, ಅರವಿಂದ ದೇಶಪಾಂಡೆ, ಸಚೀನ ದೇಸಾಯಿ, ಸಾಹಿತಿ ಬಾಳಪ್ಪ ಲೋಕಾಪೂರ, ನ್ಯಾಯವಾದಿ ವಿ ಎಸ್ ದಾತಾರ, ಅರುಣ ಯಲಗುದ್ರಿ, ನಿಲೇಶ ಜೇರೆ, ಮಹಾಲಿಂಗ ಮೇತ್ರಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article