ಪುಣೆ: ಪುಣೆಯ ಸ್ವಾರ್ಗೇಟ್ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ.
ಬಂಧಿತ ಆರೋಪಿಯನ್ನು ಪುಣೆಯ ಗುನಾತ್ ಗ್ರಾಮದ ದತ್ತಾತ್ರಯ ರಾಮದಾಸ್ ಗಡೆ (37) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಶಿರೂರಿನಲ್ಲಿ ಬಂಧಿಸಿರುವ ಪೊಲೀಸರು, ಪುಣೆಗೆ ಕರೆತರುತ್ತಿದ್ದಾರೆ.
ಬಂಧಿತ ಆರೋಪಿ ಮಂಗಳವಾರ ಬೆಳಿಗ್ಗೆ ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ.
ಆರಂಭದಲ್ಲಿ ಮಹಿಳೆಯನ್ನು ಅಕ್ಕ ಎಂದು ಕರೆದು ಮಾತಾಡಿಸಿದ್ದ ಆರೋಪಿ, ಬಳಿಕ ಸತಾರಾಕ್ಕೆ ಹೋಗುವ ಬಸ್ ಮತ್ತೊಂದು ಪ್ಲಾಟ್ಫಾರ್ಮ್ಗೆ ಬಂದಿದೆ ಎಂದು ಹೇಳಿ, ನಿಲ್ಲಿಸಿದ್ದ ಖಾಲಿ ಬಸ್ ಬಳಿ ಕರೆದೊಯ್ದಿದ್ದ. ಮಹಿಳೆ ಬಸ್ಸಿನೊಳಗೆ ಲೈಟ್ ಆನ್ ಇರದ ಕಾರಣ ಬಸ್ ಹತ್ತಲು ಹಿಂಜರಿದಿದ್ದಳು. ಈ ವೇಳೆ, ಇದೇ ಸರಿಯಾದ ಬಸ್ ಎಂದು ಹೇಳಿ ಒಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.