ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ ಅಧಕ್ಷ ಸ್ಧಾನಕ್ಕೆ ಅರ್ಜುನ ಜಿ ಲಮಾಣಿ ಹಾಗೂ ಉಪಾಧ್ಯಕ್ಷ ಸ್ಧಾನಕ್ಕೆ ಪುಷ್ಪಾ ಎಸ್ ಗಚ್ಚಿನಮಠ ಅವಿರೋಧವಾಗಿ ಆಯ್ಕೆ

Hasiru Kranti
ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ ಅಧಕ್ಷ ಸ್ಧಾನಕ್ಕೆ ಅರ್ಜುನ ಜಿ ಲಮಾಣಿ  ಹಾಗೂ ಉಪಾಧ್ಯಕ್ಷ ಸ್ಧಾನಕ್ಕೆ ಪುಷ್ಪಾ ಎಸ್ ಗಚ್ಚಿನಮಠ ಅವಿರೋಧವಾಗಿ ಆಯ್ಕೆ
WhatsApp Group Join Now
Telegram Group Join Now

ವಿಜಯಪುರ: ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧಕ್ಷ ಸ್ಧಾನಕ್ಕೆ ಅರ್ಜುನ ಜಿ ಲಮಾಣಿ (ಶಿಕ್ಷಣ ಇಲಾಖೆ) ಹಾಗೂ ಉಪಾಧ್ಯಕ್ಷ ಸ್ಧಾನಕ್ಕೆ ಪುಷ್ಪಾ ಎಸ್ ಗಚ್ಚಿನಮಠ (ಶಿಕ್ಷಣ ಇಲಾಖೆ) ಇವರುಗಳು ಮುಂದಿನ ಅವಧಿಯವರೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಆನಂದಗೌಡ ಎನ್ ಬಿರಾದಾರ ಮತ್ತು ಮಲಕಪ್ಪ ಎಸ್ ಟಕ್ಕಳಕಿ ಇವರು ತಮ್ಮ ಅಧ್ಯಕ್ಷ & ಉಪಾಧ್ಯಕ್ಷ ಹುದ್ದೆಗೆ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದರಿಂದ, ತೆರವಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಅರ್ಜುನ ಜಿ ಲಮಾಣಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪುಷ್ಪಾ ಎಸ್ ಗಚ್ಚಿನಮಠ (ಶಿಕ್ಷಣ ಇಲಾಖೆ) ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ, ಅಧ್ಯಕ್ಷರಾಗಿ ಅರ್ಜುನ ಲಮಾಣಿ (ಶಿಕ್ಷಣ ಇಲಾಖೆ) ಹಾಗೂ ಉಪಾಧ್ಯಕ್ಷರಾಗಿ ಪುಷ್ಪಾ ಎಸ್ ಗಚ್ಚಿನಮಠ (ಶಿಕ್ಷಣ ಇಲಾಖೆ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅರ್ಜುನ ಲಮಾಣಿ ಇವರು ಮೂರನೇ ಅವಧಿಗೆ (ಹ್ಯಾಟ್ರಿಕ್) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದರಂತೆ ಪುಷ್ಪಾ ಎಸ್ ಗಚ್ಚಿನಮಠ ಇವರು ಮೊದಲನೇ ಬಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಚುನಾವಣಾ ಪ್ರಕ್ರೀಯೆಯನ್ನು ಬ್ಯಾಂಕಿನ ಪ್ರಧಾನ ವ್ಯವಸ್ಧಾಪಕರಾದ ಎಮ್ ಕೆ ಜೋಶಿ ಇವರು ಜರುಗಿಸಿದರು. ಚುನಾವಣಾ ಪ್ರಕ್ರೀಯೆಯಲ್ಲಿ ನಿರ್ದೇಶಕರಾದ ಅರವಿಂದ ಭೋ ಹೂಗಾರ, ಹಣಮಂತ ಕೊಣದಿ, ಪ್ರಶಾಂತ ಎಸ್ ಚನಗೊಂಡ, ಆನಂದಗೌಡ ಬಿರಾದಾರ, ಅಲ್ಲಾಭಕ್ಷ ವಾಲಿಕಾರ, ಅಶೋಕ ವಿ. ಚನಬಸಗೋಳ, ಮಲಕಪ್ಪ ಟಕ್ಕಳಕಿ, ಚಂದ್ರಶೇಖರ ಜಿತ್ತಿ, ಎಸ್ ಎಸ್ ಕೆರೂರ, ಹನುಮಂತರಾಯ(ಕಿರಣ) ಸಿಂದಗಿ, ಮಹೇಶ ನಾಯಿಕ, ಸರಫರಾಜ ಕಂದಗಲ್, ಗೀತಾ ಎಸ್ ಹತ್ತಿ(ಕಳಸಗೊಂಡ), ಹಾಗೂ ಹಿತೈಷಿಗಳು, ವ್ಯವಸ್ಧಾಪಕ ಸಿ ಎಸ್ ಹಿರೇಮಠ ಹಾಗೂ ಸಿಬ್ಬಂದಿಯವರು ಉಪಸ್ಧಿತರಿದ್ದರು ಮತ್ತು ಬ್ಯಾಂಕಿನ ಸದಸ್ಯರು ಶುಭ ಹಾರೈಸಿದರು.

WhatsApp Group Join Now
Telegram Group Join Now
Share This Article