ಮಹಾಲಿಂಗಪುರ ; ಘನ ಸರ್ವೊಚ್ಚ ನ್ಯಾಯಾಲಯವು ಪರಿಶಿಷ್ಟರ ಬಹುದಿನಗಳ ಬೇಡಿಕೆಯನ್ನು ರಾಜ್ಯ ಸರ್ಕಾರಗಳು ಆಧ್ಯತೆ ಮೇರಿಗೆ ಜಾರಿಗೋಳಿಸಬಹುದು ಎಂದು ಒಳಮೀಸಲಾತಿ ಹೋರಾಟ ಸಮೀತಿ ಸದಸ್ಯರಾದ ಅರ್ಜುನ ದೊಡಮನಿ ಹೇಳಿದರು.
ಸ್ಥಳೀಯ ಜಿ.ಎಲ್.ಬಿ.ಸಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಯಾಲಯ ಆದೇಶ ಹೊರಡಿಸಿ ಒಂದು ವರ್ಷಗತಿಸಿದರು. ಸರ್ಕಾರಗಳು ಒಳಮೀಸಲಾತಿ ಜಾರಿಗೆ ಮನಸ್ಸು ಮಾಡುತ್ತಿಲ್ಲ, ೩೦ ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ಮಾಡಿ ನ್ಯಾಯಾಲಯ ಕೊನೆಗೂ ನಮಗೆ ನ್ಯಾಯ ಒದಗಿಸಿದ್ದು, ಜಾರಿಗೋಳಿಸಲು ರಾಜ್ಯ ಸರ್ಕಾರಮೀನಾ ಮೇಷ ಎನಿಸಬಾರದು. ತಕ್ಷಣ ಜಾರಿಗೋಳಿಸಬೇಕು ಎಂದು ಆಗ್ರಹಿಸಿದರು.
ನಂತರ ಮಾತನಾಡಿದ ಒಳಮೀಸಲಾತಿ ಹೋರಾಟ ಸಮೀತಿ ಸದಸ್ಯ ವಿಠ್ಠಲ ಹೋಸಮನಿ ಸರ್ಕಾರ ನಮ್ಮ ಬೇಡಿಕೆಗಳನ್ನು ಇಡೆರಿಸುವಲ್ಲಿ ನಿರ್ಲಕ್ಷದೊರಣೆ ಮುಂದುವರೆಸದೆ, ಪ್ರಶಕ್ತ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೋಳಿಸುವ ಮೂಲಕ ಬದ್ದತೆಯನ್ನು ಪ್ರದರ್ಶಿಸಬೇಕು, ಇದೇ ಅ. ೧೧ ರಿಂದ ಆರಂಭಗೋಳ್ಳಲಿರುವ ಮಳೆಗಾಲದ ಅಧಿವೇಶನದಲ್ಲಿ ಸರ್ವ ಪಕ್ಷಗಳ ಅನುಮೋದನೆಯೊಂದಿಗೆ ಅಂಗಿಕರಿಸಿದರೆ, ನಮ್ಮ ಸಮೂದಾಯದ ೩೦ ಸಾವೀರಕ್ಕೂ ಅಧಿಕ ನಿರುದ್ದೋಗಿಗಳಿಗೆ ನ್ಯಾಯವದಗಿಸಿದಂತಾಗುತ್ತದೆ. ಕಳೆದ ೩ ದಶಕಗಳಿಂದ ಹೋರಾಟ ಮಾಡುತ್ತೀರುವ ನೊಂದ ಸಮೂದಾಯಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ.
ಒಂದು ಒಳಮೀಸಲಾತಿ ಜಾರಿಗೋಳ್ಳದಿದ್ದರೆ ೩೦ ಅಧಿವೇಶನದಲ್ಲಿ ಅನಿರ್ಧಿಷ್ಟ ಅಹೋರಾತ್ರಿ ಸತ್ಯಾಗ್ರಹವನ್ನು ಹಮ್ಮಿಕೊಂಡು ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಮಾಂಗ, ಬಸಪ್ ಮೇತ್ರಿ, ಭೀಮಶಿ ಗೌಂಡಿ, ರಾಘು ಅನೇಪ್ಪಗೋಳ, ಶಿವಾನಂದ ದೊಡಮನಿ, ಮಹಾಲಿಂಗ ಮಾದರ, ಲಗಮನ್ನ ಪೂಜಾರಿ, ಸದಾಶಿವ ಮಾದರ, ಮಹಾದೇವ ಮುಗಳಖೋಡ, ಮಹಾಲಿಂಗ ಕಡಕಬಾವಿ, ಅರುಣ ಮೇತ್ರಿ ಸೇರಿದಂತೆ ಹಲವರು ಇದ್ದರು.