ಬಳ್ಳಾರಿ,ಅ.27: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ & ರಕ್ಷಣೆ) ಕಾಯೆ-2015 ತಿದ್ದುಪಡಿ 2021 ಹಾಗೂ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ & ರಕ್ಷಣೆ) ಮಾದರಿ ನಿಯಮಗಳು – 2016 ತಿದ್ದುಪಡಿ – ಮಾದರಿ ನಿಯಮಗಳು -2022ರನ್ವಯ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರು, ಬಾಲ ನ್ಯಾಯ ಮಂಡಳಿಗೆ ಇಬ್ಬರು ಸಮಾಜ ಕಾರ್ಯಕರ್ತರನ್ನು 3 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.
ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ತ್ರಿವೇಣಿ ಪತ್ತಾರ್, ಸದಸ್ಯರಾಗಿ ಚಟ್ಲ ವೆಂಕಟೇಶ್, ಸಣ್ಣ ಕೇಶವ, ಚಂದ್ರಕಲಾ, ಎಫ್.ಗೌಸಿಯಾ ಹಾಗೂ ಬಾಲನ್ಯಾಯ ಮಂಡಳಿಯ ಸದಸ್ಯರಾಗಿ ನರಹರಿ ಕಲಾವತಿ ಇವರುಗಳು ಆಯ್ಕೆಯಾಗಿದ್ದಾರೆ.
ಸೋಮವಾರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ವರದಿ ಮಾಡಿಕೊಂಡಿದ್ದಾರೆ. ಈ ವೇಳೆ ನಿಕಟಪೂರ್ವ ಅಧ್ಯಕ್ಷರು, ಸದಸ್ಯರು ಹಾಗೂ ಮಕ್ಕಳ ಪಾಲನಾ ಸಂಸ್ಥೆಯ ಅಧೀಕ್ಷಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು


