ಬಳ್ಳಾರಿ,ಜೂ.15 ಜಿಲ್ಲೆಯಲ್ಲಿ ಕಲಾವಿದರ ವಿವರಗಳನ್ನು ಕ್ರೊಢೀಕರಿಸುವ ದೃಷ್ಟಿಯಿಂದ ಜಿಲ್ಲೆಯಲ್ಲಿನ ಕಲಾವಿದರ, ಕಲಾತಂಡಗಳ ಪಟ್ಟಿಯನ್ನು ತಯಾರಿಸಿ ಅವರಿಗೆ ಸೂಕ್ತ ಕಾರ್ಯಕ್ರಮಗಳನ್ನು ನೀಡಲು ಹಾಗೂ ನೈಜ ಕಲಾವಿದರ ಪಟ್ಟಿಯನ್ನು ತಯಾರಿಸಿ ಗುರುತಿನ ಚೀಟಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ತಿಳಿಸಿದ್ದಾರೆ.
ಕಲಾವಿದರು, ಕಲಾ ತಂಡದವರು ಹಾಗೂ ಸಾಹಿತಿಗಳು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಚೇರಿಯಿಂದ ನಿಗಧಿತ ನಮೂನೆಯನ್ನು ಪಡೆದು ಸ್ವ-ವಿವರದ ಮಾಹಿತಿಯೊಂದಿಗೆ ತಮ್ಮ ಆಧಾರ್ ಗುರುತಿನ ಚೀಟಿ, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಪಡೆದ ಪ್ರಶಸ್ತಿ, ಪುರಸ್ಕಾರಗಳ ವಿವರ, ಪ್ರಮುಖ ಪ್ರದರ್ಶನಗಳ ವಿವರ, ಶಿಲ್ಪಾ-ಚಿತ್ರಕಲೆಗಳ ಕಲಾ ಪ್ರದರ್ಶನಗಳು ಛಾಯಚಿತ್ರಗಳನ್ನು ಲಗತ್ತಿಸಬೇಕು.
ಅರ್ಜಿಗಳನ್ನು ಜೂ.27 ರೊಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಾಂಸ್ಕøತಿಕ ಸಮುಚ್ಚಯ, ಡಾ.ರಾಜಕುಮಾರ್ ರಸ್ತೆ, ಬಳ್ಳಾರಿ ಈ ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.08392-275182 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.