ಹಸಿರು ಕ್ರಾಂತಿ : ಎಂ. ಕೆ. ಹುಬ್ಬಳ್ಳಿ : ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ (ನಗರ) 2.0 ಯೋಜನೆಯಡಿ ವಸತಿ ರಹಿತ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ವಸತಿ ಕಲ್ಪಿಸಲು Unified Web Portal ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಸ್ಥಳೀಯ ಸಂಸ್ಥೆಯ ವ್ಯಾಪ್ತಿಯೊಳಗೆ ಬರುವ ಎಲ್ಲಾ ವಾರ್ಡಗಳಲ್ಲಿ ವಸತಿ ರಹಿತ (ಕಚ್ಚಾ ಮನೆ ಹೊಂದಿರುವ) ಮತ್ತು ನಿವೇಶನ ರಹಿತ ಅರ್ಹ ಫಲಾನುಭವಿಗಳು ವಸತಿ ಸೌಲಭ್ಯ ಪಡೆಯಲು https:// pmay-urban. gov. in ದಲ್ಲಿ 15 ಜುಲೈ 2025 ರ ಒಳಗಾಗಿ ಅರ್ಜಿ ಸಲ್ಲಿಸಬೇಕೆಂದು ಹಾಗೂ ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯತ ವಸತಿ ಶಾಖೆಯನ್ನು ಸಂಪರ್ಕಿಸಬೇಕಾಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.