ಸೇವಾಭದ್ರತೆ, ಸಮಾನ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಮನವಿ; ವೇತನ ವಿಳಂಬ, ಕಡಿಮೆ ಭತ್ಯೆ ಬಗ್ಗೆ ಅಸಮಾಧಾನ

Pratibha Boi
ಸೇವಾಭದ್ರತೆ, ಸಮಾನ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಮನವಿ; ವೇತನ ವಿಳಂಬ, ಕಡಿಮೆ ಭತ್ಯೆ ಬಗ್ಗೆ ಅಸಮಾಧಾನ
WhatsApp Group Join Now
Telegram Group Join Now
ಬೆಳಗಾವಿ:  ರಾಜ್ಯದ ವಿವಿಧ ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಹಲವು ವರ್ಷಗಳಿಂದ ಪೌರ ನೀರು ಸರಬರಾಜು ಮಾಡುವ ಕಾರ್ಯದಲ್ಲಿ ನಿರತರಾಗಿರುವ ನೌಕರರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಪೌರ ನೀರು ಸರಬರಾಜು ನೌಕರರ ಮಹಾ ಸಂಘದ ನೇತೃತ್ವದಲ್ಲಿ ಸರ್ಕಾರಕ್ಕೆ ತೀವ್ರವಾಗಿ ಆಗ್ರಹಿಸಿದ್ದಾರೆ.
ಸಂಘದ ವತಿಯಿಂದ ನೀಡಲಾದ ಮನವಿಯಲ್ಲಿ, “ರಾಜ್ಯದ ನಾಗರಿಕರಿಗೆ ನಿತ್ಯ ಕುಡಿಯುವ ನೀರು ಒದಗಿಸುತ್ತಿರುವ ನಮಗೆ ಇಲ್ಲಿಯವರೆಗೆ ಯಾವುದೇ ರೀತಿಯ ವಿಶೇಷ ನೇರನೇಮಕಾತಿ/ನೇರಪಾವತಿ ಮಾಡಿಲ್ಲ. ಆದರೆ, ನಮ್ಮಂತೆಯೇ ಸರಿಸಮಾನ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರವು ಈಗಾಗಲೇ ಮೂರು ಬಾರಿ ವಿಶೇಷ ನೇರನೇಮಕಾತಿ/ನೇರಪಾವತಿ ನೀಡಿ, ಸಂಕಷ್ಟ ಭತ್ಯೆ, ಗೃಹಭಾಗ್ಯದಂತಹ ಹಲವು ಸೌಲಭ್ಯಗಳನ್ನು ಕಲ್ಪಿಸಿ ಸೇವಾಭದ್ರತೆ ಒದಗಿಸಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೌರ ನೀರು ಸರಬರಾಜು ನೌಕರರು ಹಬ್ಬ ಹರಿದಿನಗಳೆನ್ನದೆ, ಹಗಲಿರುಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದರೂ ಸರ್ಕಾರ ತಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದೆ. ಕೋವಿಡ್‌ನಂತಹ ಕಷ್ಟದ ಕಾಲದಲ್ಲಿಯೂ ಧೃತಿಗೆಡದೆ ಸೇವೆ ಸಲ್ಲಿಸಿ, ಕೆಲ ನೌಕರರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, “ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಆದೇಶವಿದ್ದರೂ, ಟೆಂಡರ್‌ ಪಡೆದ ಏಜೆನ್ಸಿಗಳು ನಿಗದಿಪಡಿಸಿದ ವೇತನಕ್ಕಿಂತ ಕಡಿಮೆ ನೀಡುತ್ತಿವೆ (ಪಿಎಫ್, ಇಎಸ್‌ಐ ಸೇರಿ). ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಮತ್ತು ರಜೆಗಳ ಎರಡು ಪಟ್ಟು ವೇತನ ನೀಡಬೇಕೆಂಬ ಆದೇಶಗಳು ಪಾಲನೆಯಾಗುತ್ತಿಲ್ಲ. ನೀಡುವ ಅತ್ಯಲ್ಪ ವೇತನದಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿ ನೌಕರರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ,” ಎಂದು ತಿಳಿಸಲಾಗಿದೆ.
*ಸಂಘದ ಪ್ರಮುಖ ಬೇಡಿಕೆಗಳು:*
 * ಪೌರಕಾರ್ಮಿಕರ ಮಾದರಿಯಲ್ಲೇ ನಿಯಮಾವಳಿ ರೂಪಿಸಿ, ಹಾಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪೌರ ನೀರು ಸರಬರಾಜು ನೌಕರರನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಂಜೂರಾತಿ ಪಡೆದ ಹುದ್ದೆಗಳ ಎದುರು ವಿಶೇಷ ನೇರನೇಮಕಾತಿ/ನೇರಪಾವತಿ ಮಾಡಬೇಕು.
 * ವಯೋನಿವೃತ್ತಿ/ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದರೆ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಧನ ನೀಡಬೇಕು.
   ಸುವರ್ಣ ಸೌದ ಗಾರ್ಡನ್ ಟೆಂಟ್ನಲ್ಲಿ ನಡೆದ ಪ್ರತಿಭಟನೆ  ಸಭೆಯಲ್ಲಿ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್, ಸತೀಶ ಎಸ್.ವಿ ಮತ್ತು ನೂರಾರು ನೌಕರರು ಉಪಸ್ಥಿತರಿದ್ದರು. ಸರ್ಕಾರವು ಕೂಡಲೇ ಈ ಬೇಡಿಕೆಗಳನ್ನು ಪರಿಗಣಿಸಿ ನೌಕರರಿಗೆ ಸೇವಾಭದ್ರತೆ ಒದಗಿಸಬೇಕು ಎಂದು ಅವರು ಕೋರಿದ್ದಾರೆ.
     ಈ ಸ್ಥಳಕ್ಕೆ ಆಗಮಿಸಿದ ಪೌರಾಡಳಿತ ಸಚಿವ ಕೆ ರೆಹಮಾನ ಖಾನ ಆಗಮಿಸಿ ಸ್ಥಳದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾತನಾಡಿ ಕ್ರಮ ಕೈಗೊಳ್ಳಲು ಸೂಚಿಸಿದರು. ಇದಕ್ಕೆ ಸಂಬಂಧಪಟ್ಟಂತೆ  ಸಿ ಎಮ್ ಸಿದ್ರಾಮಯ್ಯ ಅವರೊಂದಿಗೆ ಚರ್ಚಿಸಿ ಸಂಪುಟ ಸಭೆ ಕರೆದು ಕ್ರಮ ಕೈಗೊಳ್ಳಲಾಗುವದು ಎಂದರು.
WhatsApp Group Join Now
Telegram Group Join Now
Share This Article