ಬಳ್ಳಾರಿ, ಮಾ.23; ಬೆಂಗಳೂರಿನಲ್ಲಿ 48 ಶಾಸಕರು ಸಭೆ ಮಾಡಿರೋ ವಿಚಾರ ನಿಜ. ಅಲ್ಲಿ ಎಲ್ಲರೂ ಪಕ್ಷದ ಪರವಾಗಿಯೇ ಸಭೆ ಮಾಡಿದ್ದೇವೆ.ಮೊದಲ ಬಾರಿ ಗೆದ್ದವರು ಎರಡನೇ ಬಾರಿ ಗೆದ್ದವರು ಸೇರಿ ಸಭೆ ಮಾಡಿದ್ದೇವೆ. ಯುವಕರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇವೆ ಎಂದು ನಗರದ ಶಾಸಕ ಭರತ್ ರೆಡ್ಡಿ ಹೇಳಿದ್ದಾರೆ.
ಅವರು ನಗರದಲ್ಲಿ ಮಾಧ್ಯಮಗಳಜೊತೆ ಮಾತನಾಡಿ, ಯುವಕರನ್ನು ಸಚಿವರನ್ನಾಗಿ ಮಾಡಿದ್ರೇ ಮುಂದೆ ಪಕ್ಷಕ್ಕೆ ಒಳ್ಳೆಯದಾಗಲಿದೆ.ಯಾರಿಗಾದರೂ ಸೂಕ್ತ ಅಭ್ಯರ್ಥಿಗೆ ಅವಕಾಶ ನೀಡಲು ಮನವಿ. ಅಧಿವೇಶನ ಮುಗಿಯುವದರೊಳಗಾಗಿ ಭೇಟಿಗೆ ಸಮಯ ನಿಡ್ತೇವೆ ಎಂದಿದ್ದಾರೆ. ದೆಹಲಿಯ ಹೈಕಮೆಂಡ್ ನಾಯಕರನ್ನು ಭೇಟಿ ಮಾಡಲಿದ್ದೇವೆ.
ದೆಹಲಿಯ ಹೈಕಮೆಂಡ್ ನಮ್ಮ ಕುಟುಂಬ ಇದ್ದಂತೆ. ಕುಟುಂಬದ ಮುಂದೆ ಬೇಡಿಕೆ ಇಡಲಿದ್ದೇವೆ. ಕ್ಯಾಬಿನೆಟ್ ವಿಸ್ತಾರಣೆಯಾದ್ರೇ ನಮಗೆ ಅವಕಾಶ ಕೊಡಿ ಎಂದು ಕೇಳಿದ್ದೇವೆ ಎಂದರು.


