ಬೆಳಗಾವಿ. ಪ್ರತಿಷ್ಠಿತ ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಇದರ 16 ಜನ ನಿರ್ದೇಶಕರ ಚುನಾವಣೆಯಲ್ಲಿ 9 ಜನ ಅವಿರೋಧವಾಗಿ ಆಯ್ಕೆ ಆಗಿ ರವಿವಾರದಂದು ನಡೆದ 7 ಜನ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಥಣಿ ತಾಲೂಕಿನಿಂದ ಮಾಜಿ ಉಪ ಮುಖ್ಯ ಮಂತ್ರಿ, ಶಾಸಕ ಲಕ್ಷ್ಮಣ ಅವರು 122 ಮತಗಳನ್ನು ಪಡೆದು ಭರ್ಜರಿ ಜಯ ಗಳಿಸಿದ್ದಾರೆ. ಇವರ ಪ್ರತಿಸ್ಪರ್ದಿ ಮಾಜಿ ಶಾಸಕ ಮಹೇಶ ಕುಮಟಳ್ಳಿ ಕೇವಲ ಮೂರು ಮತಗಳನ್ನು ಪಡೆದು ಮುಖ್ಯಭಂಗ ಅನುಭವಿಸಿದ್ದಾರೆ. ಆದೆ ರೀತಿ ರಾಮದುರ್ಗ ತಾಲೂಕಿನಿಂದ ಮಾಜಿ ಶಾಸಕರಾದ ಮಹದೇವಪ್ಪ ಯಾದವಾಡ ಅವರ ಸಹೋದರ ಮಲ್ಲಣ್ಣ ಯಾದವಾಡ ಅವರು 19 ಮತಗಳನ್ನು ಪಡೆದು ಡಿಸಿಸಿ ಬ್ಯಾಂಕ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ. ಅವರ ವಿರುದ್ಧ ಸ್ಪರ್ಧೆಸಿದ್ದ ಜಾರಕಿಹೊಳಿ ಬಣದ ಎಸ್ ಎಸ್ ಡವನ ಅವರು 16 ಮತಗಳನ್ನು ಪಡೆದು 3 ಮತಗಳಿಂದ ಸೋಲು ಅನುಭವಿಸಿದ್ದಾರೆ. ಇವರಿಗೆ ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರು ಮಲ್ಲಣ್ಣ ಯಾದವಾಡ ಅವರಿಗೆ ಅಧಿಕೃತವಾಗಿ ಬೆಂಬಲ ನೀಡಿದ್ದರು. ರಾಯಭಾಗ ಕ್ಷೇತ್ರದಿಂದ ಜಾರಕಿಹೊಳಿ ಬಣದಿಂದ ಮಾಜಿ ಡಿಸಿಸಿ ಬ್ಯಾಂಕ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಅವರು 120 ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದ್ದಾರೆ. ಇವರ ವಿರುದ್ಧ ರಮೇಶ ಕತ್ತಿ ಹಾಗೂ ಲಕ್ಷ್ಮಣ ಸವದಿ ಬಣದಿಂದ ಸ್ಪರ್ದಿಸಿದ್ದ ಬಸಗೌಡ ಆಸಂಗಿ 64 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.

ಬೈಲಹೊಂಗಲ, ಹುಕ್ಕೇರಿ, ನಿಪ್ಪಾಣಿ, ಕಿತ್ತೂರು ತಾಲೂಕ ನಿರ್ದೇಶಕರ ಚುನಾವಣೆ ನಡೆದರು. ಕೋರ್ಟ್ ಆದೇಶ ಹಿನ್ನಲೆಯಲ್ಲಿ ತೀರ್ಪು ಅ. 28 ರ ವರೆಗೂ ಕಯ್ದಿರಿಸಲಾಗಿದೆ. ತದನಂತರ ಗೆದ್ದ ವೆಕ್ತಿಗಳ ಹೆಸರುಗಳನ್ನೂ ಘೋಸಿಸಲಾಗುವದು.
ಕೋರ್ಟ್ ತೀರ್ಪು ಜಯ ಘೋಷಣೆ ಮಾಡದ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನಿಂದ ಮಾಜಿ ಸಂಸದ ರಮೇಶ ಕತ್ತಿ 59 ಮತ ಪಡೆದು ಆಯ್ಕೆ ಆಗುವದು ಖಚಿತ ಎಂದು ಬಲ ಮೂಲಗಳಿಂದ ತಿಳಿದಿದೆ. ಬೈಲಹೊಂಗಲ ತಾಲೂಕಿನಿಂದ ಮಹಾಂತೇಶ ದೊಡ್ಡಗೌಡರ 53 ಮತಗಳನ್ನು ಪಡೆದು ನಿರ್ದೇಶಕರಾಗಿ ಆಯ್ಕೆ ಆಯ್ಕೆ ಆಗಳಿದ್ದಾರೆ ಎಂದು ಬಲ ಮೂಲಗಳಿಂದ ತಿಳಿದು ಬಂದಿದೆ.
ನಿಪ್ಪಾಣಿ ತಾಲೂಕಿನಿಂದ ಅಣ್ಣಾಸಾಹೇಬ ಜೊಲ್ಲೆ ಅವರು 71 ಮತಗಳನ್ನು ಪಡೆದು ಆಯ್ಕೆ ಅಗಲಿದ್ದಾರೆ ಎಂದು ತಿಳಿದು ಬಂದಿದೆ. ಕಿತ್ತೂರು ತಾಲೂಕಿನಿಂದ ಶಾಸಕ ಬಾಬಾಸಾಹೇಬ ಪಾಟೀಲ ಅವರ ಸಹೋದರ ನಾನಾಸಾಹೇಬ ಪಾಟೀಲ ಅವರು 15 ಮತಗಳನ್ನು ಪಡೆದರೆ ಅವರ ವಿರುದ್ಧ ಮಾಜಿ ಶಾಸಕ ಡಿ ಬಿ ಇನಾಮದಾರ ಅವರ ಪುತ್ರ ವಿಕ್ರಮ ಇನಾಮದಾರ 14 ಮತ ಪಡೆದರೆ ಒಂದು ಮತದ ಹಿನ್ನೆಡೆ ಅನುಭವಿಸುತ್ತಿದ್ದಾರೆ.
ಬಂದ ವರದಿಗಳ ಪ್ರಕಾರ 16 ಕ್ಷೇತ್ರಗಳ ಪೈಕಿ 11 ರಲ್ಲಿ ಜಾರಕಿಹೊಳಿ ಬಣ ಆಯ್ಕೆ ಆಗುವ ಸಂಭವ ಇದ್ದು ಇದು ಬಹಿರಂಗವಾಗಿ ಕೋರ್ಟ್ ಆದೇಶ ಬಂದ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ.