ಇಂಡಿ: ಕಲಿಕೆಯಿಂದ ಹಿಂದುಳಿದಿರುವ ಮಕ್ಕಳಲ್ಲಿರು ವಿವಿಧ ಪ್ರತಿಬೆಗಳನ್ನು ಪ್ರದರ್ಶಿಸಲು ಒಳ್ಳೆಯ ಅವಕಾಶದ ವೇದಿಕೆ ಈ ಕಲಿಕಾ ಹಬ್ಬ ಪ್ರೇರಣೆಯಾಗಿದೆ ಎಂದು ಶಿಕ್ಷಣ ಪ್ರೇಮಿ ಎಸ್‌ವ್ಹಿವ್ಹಿ ಸಂಘದ ನಿದೇರ್ಶಕ ಅಪ್ಪಣ್ಣ ಕಲ್ಲೂರ ಹೇಳಿದರು.
ಅವರು ತಾಲೂಕಿನ ತಾಂಬಾ ಗ್ರಾಮದ ಸರಕಾರಿ ಹಿರೀಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಸಕರ ಮಾದರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಂಬಾ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದು ಸರಕಾರಿ ಶಾಲೆ ಆದರು ಕುಡಾ ಖಾಸಗಿ ಶಾಲೆಗಳಿಗೆ ಶೇಡ್ಡು ಹೊಡೆದು ಮಕ್ಕಳ ಸಂಖ್ಯೇ ಹಾಗೂ ಮಕ್ಕಳ ಉತ್ಸಾಹ ನೋಡಿದರೆ ಖಾಸಗಿ ಶಾಲೆಗಳನ್ನು ಮೀರಿಸಿ ಬೇರೆ ಬೇರೆ ಶಾಲೆಗಳಿಗೆ ಮಾದರಿ ಯಾಗಿದೆ ಎಂದು ಇಲ್ಲಿಯ ಮುಖ್ಯಗುರುಗಳು ಮತ್ತು ಶಿಕ್ಷಕರ, ಮಕ್ಕಳ ಬಗ್ಗೆ ಗುಣಗಾನ ಮಾಡಿದರು.
ಮುಖ್ಯ ಗುರುಗಳಾದ ಎ.ಆರ್.ಮಾಶ್ಯಾಳ ಮಾತನಾಡಿ, ಕಲಿಕೆಯಿಂದ ಕೆಲವು ಮಕ್ಕಳು ಹಿಂದುಳಿದಿದ್ದರು ಕುಡಾ ಆ ಮಕ್ಕಳನ್ನು ಹುರಿದುಂಬಿಸಿ ಶಿಕ್ಷಣದಲ್ಲಿ ಶಾಲೆ ಮತ್ತು ಸಭುದಾಯದ ನಡುವೆ ಸಮನ್ವಯತೆಯನ್ನು ಸಾಧಿಸುವದಕ್ಕಾಗಿ ಈ ಕಲಿಕಾ ಹಬ್ಬಗಳನ್ನು ಮಕ್ಕಳಿಗೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮಲ್ಲಯ್ಯ ಸಾರಂಗಮಠ ಸಾನಿಧ್ಯವಹಿಸಿದ್ದರು. ಎಸ್.ಡಿ.ಎಮ್.ಸಿ ಅಧ್ಯಕ್ಷ ಪುಟ್ಟುಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು, ಮಾಜಿ ಗ್ರಾಪಂ ಅಧ್ಯಕ್ಷ ಹಾಗೂ ಅಪ್ಪಣ್ಣ ಕಲ್ಲೂರ ಪೋಟೊ ಪೂಜೆ ನೇರವೆರಿಸಿದರು, ಜೆ.ಎಸ್.ಹತ್ತಳಿ, ರಜಾಖ ಚಿಕ್ಕಗಸಿ ಜೋತಿ ಬೆಳಗಿಸಿದರು, ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ, ಸಿದ್ದು ಹತ್ತಳ್ಳಿ ಬಲುನ್ ಹಾರಿಸಿದರು. ಬಿಜೆಪಿ ಹಿರೀಯ ಮುಖಂಡರಾದ ಜಿ.ವೈ.ಗೋರನಾಳ, ರಾಮಚಂದ್ರ ದೋಡಮನಿ, ನಾಗಪ್ಪ ಕುರುಬತಳ್ಳಿ, ಪ್ರಕಾಶ ಮುಂಜಿ, ಶಿವರಾಜ ಕೆಂಗನಾಳ, ಎಚ್.ಕೆ.ಮಾಳಗೊಂಡ, ಎಚ್.ಆರ್.ಚಾಳಿಕಾರ, ಬಿ.ಬಿ.ಬೀರಾದಾರ, ಎ.ಜಿ.ರಾಠೋಡ, ಬಿ.ವ್ಹಿ.ಸಿಂಧೆ, ಕಾಶೀನಾಥ ಪತ್ತಾರ ಸೇರಿದಂತೆ ಮತ್ತಿತ್ತರರು ವೇದಿಕೆಯ ಮೇಲೆ ಇದ್ದರು.
ಶಿಕ್ಷಕ ಬಿ.ಎಮ್.ಬರಮಣ ಸ್ವಾಗತಿಸಿದರು, ಪಿ.ವ್ಹಿ.ಬಳಗಾನೂರ ನೀರುಪಿಸಿದರು, ಎಸ್.ಎಸ್.ಬಿಸನಾಳ ವಂದಿಸಿದರು.
ವಿವಿಧ ಪ್ರತಿಬೆಗಳನ್ನು ಪ್ರದರ್ಶಿಸಲು ಕಲಿಕಾ ಹಬ್ಬ ಪ್ರೇರಣೆಯಾಗಿದೆ : ಅಪ್ಪಣ್ಣ ಕಲ್ಲೂರ


