ಚೆನ್ಮೈ: ಬೆಂಗಳೂರಿನಲ್ಲಿ ನಡೆದ ಎಟಿಎಂ ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪ್ರಮುಖ ಆರೋಪಿಯನ್ನು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಎಟಿಎಂ ಕೇಂದ್ರಗಳಿಗೆ ಹಣ ತುಂಬಲು ಹೊರಟಿದ್ದ ಸಿಎಂಎಸ್ ಏಜೆನ್ಸಿ ವಾಹನವನ್ನು ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ದುಷ್ಕರ್ಮಿಗಳು ಅಡ್ಡಗಟ್ಟಿ ಅದರಲ್ಲಿದ್ದ ಸುಮಾರು 7.11 ಕೋಟಿ ದರೋಡೆ ಮಾಡಿದ್ದರು.
ಈ ದರೋಡೆ ಪ್ರಕರಣದ ಸಂಬಂಧ ಇದೀಗ ಮತ್ತೋರ್ವ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಸೌತ್ ಎಂಡ್ ಸರ್ಕಲ್ ನಿಂದ ಸಿಎಂಎಸ್ ಏಜೆನ್ಸಿ ವಾಹನವನ್ನು ತಡೆದು 7 ಕೋಟಿ 11 ಲಕ್ಷ ದರೋಡೆ ಪ್ರಕರಣದ ಆರೇಳು ಮಂದಿ ಆರೋಪಿಗಳ ಪೈಕಿ ಈಗಾಗಲೇ 4 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.
ಅಲ್ಲದೆ ಪ್ರಮುಖ ಆರೋಪಿಗಳಾದ ರವಿ ಮತ್ತು ಕಾನ್ಸ್ ಟೇಬಲ್ ಅಣ್ಣಪ್ಪನನ್ನು ಕೂಡ ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.ಇದೀಗ ಈ ಪಟ್ಟಿಗೆ ಮತ್ತೋರ್ವ ಪ್ರಮುಖ ಆರೋಪಿ ಸೇರ್ಪಡೆಯಾಗಿದ್ದು ಕ್ಸೇವಿಯರ್ ಎಂಬಾತನನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.


