ಸುರಂಗ ಮಾರ್ಗದಲ್ಲಿ‌ ಮತ್ತೆ ಗುಡ್ಡ ಕುಸಿತ

Ravi Talawar
ಸುರಂಗ ಮಾರ್ಗದಲ್ಲಿ‌ ಮತ್ತೆ ಗುಡ್ಡ ಕುಸಿತ
WhatsApp Group Join Now
Telegram Group Join Now

ಕಾರವಾರ: ನಗರದ ಲಂಡನ್ ಬ್ರೀಡ್ಜ್​​ ಬಳಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ನಿರ್ಮಿಸಲಾದ ಸುರಂಗ ಮಾರ್ಗದ ಬಳಿ ಮತ್ತೆ ಗುಡ್ಡ ಕುಸಿದಿದೆ. ಪರಿಣಾಮ ಮುಂಜಾಗೃತಾ ಕ್ರಮವಾಗಿ ಒಂದು ಸುರಂಗ ಮಾರ್ಗದಲ್ಲಿ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಗುಡ್ಡ ಕುಸಿತದಿಂದ ಈ ಹಿಂದೆ ಕೆಲ‌ವು ದಿನ ಬಂದ್ ಆಗಿದ್ದ ಸುರಂಗ‌ ಮಾರ್ಗದ ಇನ್ನೊಂದು ಬದಿಯಲ್ಲಿ ಶನಿವಾರ ಬೆಳಗ್ಗೆ ಮತ್ತೆ ಬಂಡೆ‌ಕಲ್ಲು ಹಾಗೂ‌ ಮಣ್ಣು ಕುಸಿದಿದೆ. ಇದರಿಂದ ಅಂಕೋಲಾದಿಂದ‌ ಕಾರವಾರ ನಗರಕ್ಕೆ ಸಂಪರ್ಕ‌ ಕಲ್ಪಿಸುವ ಸುರಂಗದ ಒಂದು ಬದಿಯ ಸಂಚಾರ ಬಂದ್ ಮಾಡಲಾಗಿದೆ.

ಸದ್ಯ ಐಆರ್​ಬಿ ಕಂಪನಿಯಿಂದ ಮಣ್ಣು, ಕಲ್ಲುಗಳ ತೆರವು ಮಾಡಿದ್ದು ಮುಂಜಾಗೃತಾ ಕ್ರಮವಾಗಿ ಈ ಮಾರ್ಗದ ಸಂಚಾರವನ್ನು ಬಂದ್ ಮಾಡಲಾಗಿದೆ. ಈ ಹಿಂದಿನ ಹಳೆಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

”ಐಆರ್​ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸುರಂಗದ ಬಳಿ ಪದೆ ಪದೇ ಗುಡ್ಡ ಕುಸಿತವಾಗುತ್ತಿದೆ. ಮಣ್ಣು, ಕಲ್ಲು ಸಡಿಲಗೊಂಡು ಮಳೆಗಾಲದಲ್ಲಿ ಹೆದ್ದಾರಿಗೆ ಬೀಳುವುದರಿಂದ ನಿತ್ಯ ಸಂಚಾರ ಮಾಡುವ ಸವಾರರಿಗೆ ಜೀವ ಭಯ ಕಾಡುವಂತಾಗಿದೆ. ಕೂಡಲೇ ಈ ಭಾಗದಲ್ಲಿ ಗುಡ್ಡ ಕುಸಿಯುವುದನ್ನು ಗುತ್ತಿಗೆ ಪಡೆದ ಕಂಪನಿ ತಡೆಗಟ್ಟಲು ಅಗತ್ಯ ಕ್ರಮ‌ಕೈಗೊಳ್ಳುವಂತೆ ನಗರಸಭೆ ಮಾಜಿ‌ ಉಪಾಧ್ಯಕ್ಷ ಪಿ.ಪಿ ನಾಯ್ಕ ಆಗ್ರಹಿಸಿದ್ದಾರೆ.
WhatsApp Group Join Now
Telegram Group Join Now
Share This Article