ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣದಲ್ಲಿ ಹಲವು ಸಾವು ನೋವುಗಳು ಸಂಭವಿಸಿದೆ. ಕನಿಷ್ಠ 15 ಮಂದಿ ಬಲಿಯಾಗಿದ್ದರೆ ಇನ್ನು ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಇದೀಗ ಮತ್ತೊಬ್ಬ ಆರೋಪಿಯನ್ನು ಎನ್ಐಎ ತಂಡ ಪತ್ತೆ ಹಚ್ಚಿದೆ. ಆತ್ಮಹತ್ಯಾ ಬಾಂಬರ್ ನಬಿಗೆ ಸಹಾಯ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದ ಆತ್ಮಹತ್ಯಾ ಕಾರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಎನ್ಐಎ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಈ ಪ್ರಕರಣದಲ್ಲಿ ಈಗ ಏಳನೇ ಆರೋಪಿಯನ್ನು ಬಂಧಿಸಿದೆ. ಫರಿದಾಬಾದ್ನ ಧೌಜ್ ನಿವಾಸಿ, ಅಲ್ ಫಲಾಹ್ ವಿಶ್ವವಿದ್ಯಾಲಯದ ಉದ್ಯೋಗಿ ಸೋಯಾಬ್ ಅಲಿಯಾಸ್ ಸೋಯಾಬ್ ಖಾನ್ ಅವರನ್ನು ಎನ್‌ಐಎ ತಂಡ ಬಂಧಿಸಿದೆ.


