ವಿಜಯನಗರ(ಹೊಸಪೇಟೆ): ಹೊಸಪೇಟೆ ಮತ್ತು ಮುನಿರಾಬಾದ್ ರೈಲು ನಿಲ್ದಾಣಗಳ ಮಧ್ಯೆಭಾಗದಲ್ಲಿ ಏ.5 ರಂದು ರೈಲು ಹಳಿಯಲ್ಲಿ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿ ಚಹರೆ ವಿವರ : 5.6 ಅಡಿ ಎತ್ತರ, ಕೋಲು ಮುಖ, ಸಾಧರಣ ಮೈಕಟ್ಟು, ಗೋಧಿ ಮೈ ಬಣ್ಣ, ಉದ್ದ ಮೂಗು, ಅಗಲವಾದ ಹಣೆ, ಸುಮಾರು 02 ಇಂಚು ಬಿಳಿ ಮಿಶ್ರಿತ ಕಪ್ಪು ಕೂದಲು ಮತ್ತು ಸುಮಾರು ಸಣ್ಣ ಮೀಸೆ ಬಿಟ್ಟಿರುತ್ತಾರೆೆ. ಆಕಾಶ ತಿಳಿ ನೀಲಿ ಕಲರ್ ಪುಲ್ ಅಂಗಿ, ಕಾಲರ್‌ನಲ್ಲಿ ಎಂಆರ್ ಎಂದು ಇದೆ. ಬಿಳಿಯ ಬಣ್ಣದ ಆಫ್ ಬನಿಯನ್, ಕಂದು ಬಣ್ಣದ ಪ್ಯಾಂಟ್, ಒಂದು ಹಸಿರು ಬಣ್ಣದ ಗೆರೆಗಳುಳ್ಳ ಕೈ ವಸ್ತç, ಕಂದು ಬಣ್ಣದ ಅಂಡರವೇರ್, ಸೊಂಟಕ್ಕೆ ಬ್ರೌನ್ ಕಲರ್ ಬೆಲ್ಟ್ ಇರುತ್ತದೆ. ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ರೈಲ್ವೆ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರು 9480802131 ರೈಲ್ವೆ ಪೊಲೀಸ್ ವೃತ್ತ, ಪೊಲೀಸ್ ವೃತ್ತ ನಿರೀಕ್ಷಕರು 9480800471 ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.