‘ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್’ ಘೋಷಣೆ!

Ravi Talawar
‘ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್’ ಘೋಷಣೆ!
WhatsApp Group Join Now
Telegram Group Join Now

ಶೃಂಗೇರಿ, ಜನವರಿ 11: ‘‘ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್’’ ಈ ಘೋಷಣೆ ಕೇಳಿಬಂದಿದ್ದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಬಳಿಯ ಮೆಣಸೆ ಹೆಲಿಪ್ಯಾಡ್​ನಲ್ಲಿ. ಡಿಸಿಎಂ ಡಿಕೆ ಶಿವಕುಮಾರ್ ಶನಿವಾರ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ್ದು, ಮೆಣಸೆ ಹೆಲಿಪ್ಯಾಡ್​ಗೆ ಆಗಮನಿಸುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಅವರ ಪರ ಘೋಷಣೆಗಳನ್ನು ಕೂಗಿದರು.

ಧರ್ಮೋ ರಕ್ಷತಿ ರಕ್ಷಿತಃ. ಯಾರು ಧರ್ಮವನ್ನು ಕಾಯುತ್ತಾರೋ ಅವರನ್ನು ಧರ್ಮ ಕಾಯುತ್ತದೆ. ಶ್ರೀಗಳು ಜವಾಬ್ದಾರಿ ವಹಿಸಿಕೊಂಡು 50 ವರ್ಷ ಪೂರೈಸಿದ್ದಾರೆ. ಯಾವುದೇ ರಾಜಕೀಯಕ್ಕೆ ಹೋಗದೆ ಶ್ರೀಗಳು ಧರ್ಮ ಉಳಿಸಿದ್ದಾರೆ. ಶೃಂಗೇರಿ ಶಾರದಾ ಪೀಠದ ಮೇಲೆ ನನಗೆ ವಿಶೇಷವಾದ ನಂಬಿಕೆ ಇದೆ. ನಾನು ಸರ್ಕಾರದ ಪರ ಹಾಗೂ ವೈಯಕ್ತಿಕವಾಗಿ ಇಲ್ಲಿಗೆ ಬಂದಿದ್ದೇನೆ. ನಾನು ಧರ್ಮದ ಮೇಲೆ ನಂಬಿಕೆ ಇಟ್ಟವನು, ನಾನು ಪೂಜೆ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.
WhatsApp Group Join Now
Telegram Group Join Now
Share This Article