ಬೆಳಗಾವಿ. ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕಾದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ನಿರೀಕ್ಷಿತವಾಗಿ ಬ್ಯಾಂಕಿನ ಅಧ್ಯಕ್ಷರಾಗಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಅಗಿದ್ದು, ಉಪಾಧ್ಯಕ್ಷರಾಗಿ ಕಾಗವಾಡ ಶಾಸಕರಾದ ರಾಜು ಕಾಗೆ ಅವರು ಅಚ್ಚರಿ ಎಂಬಂತೆ ಆಯ್ಕೆ ಆಗಿ ಎಲ್ಲರ ಗಮನ ಸೆಳೆದರು.ಇವರಿಗೆ 13 ಜನ ನಿರ್ದೇಶಕರು ಬೆಂಬಲ ಘೋಷಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ನಿರೀಕ್ಷೆಯಂತೆ ನಾವು ನುರಿತ ಸಹಕಾರಿ ಧುರಿನ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಅದರಂತೆ ಶಾಸಕರಾದ ರಾಜು ಕಾಗೆ ಅವರನ್ನು ಉಪಾಧ್ಯಕ್ಷರನ್ನಾಗಿ ಎಲ್ಲ ಸದಸ್ಯರ ಸಹಕಾರದಿಂದ ಬ್ಯಾಂಕ ಅಭಿವೃದ್ಧಿಯ ಹಿತದೃಷ್ಟಿಯಿಂದ ಆಯ್ಕೆ ಮಾಡಿದ್ದು 3 ನೇ ಸ್ಥಾನದಲ್ಲಿರುವ ಬ್ಯಾಂಕನ್ನು ಪ್ರಥಮ ಸ್ಥಾನಕ್ಕೆ ತರುವ ಗುರಿ ಹೊಂಡಲಾಗಿದೆ ಎಂದರು.ಪ್ರಥಮ 30 ತಿಂಗಳು ಬಿಜೆಪಿ ಯವರು ಅಧ್ಯಕ್ಷ, ಕಾಂಗ್ರೆಸ್ ನವರು ಉಪಾಧ್ಯಕ್ಷ ಆಗಿರುತ್ತಾರೆ ನಂತರ 30 ತಿಂಗಳು ಕಾಂಗ್ರೆಸ್ ನವರು ಅಧ್ಯಕ್ಷ ಮತ್ತು ಬಿಜೆಪಿ ಯವರು ಉಪಾಧ್ಯಕ್ಷ ಆಗಿರುತ್ತಾರೆ ಎಂದರು.

ಜನ ಇಂತಹ ಸಮಯದಲ್ಲಿ ಕೆಲಸಕ್ಕಾಗಿ ಕಬ್ಬು ಕಟ್ಟಾವಿಗೆ ಠೇವಣಿ ಹಣ ಹಿಂಪಡೆದಿದ್ದು ಮತ್ತೆ ಹಣ ಠೇವಣಿ ಮಾಡಲಿದ್ದಾರೆ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ ಎಲ್ಲರ ಸಹಾಯ ಸಹಕಾರದಿಂದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿದ್ದು ಜೊಲ್ಲೆ ಅವರ ನೇತೃತ್ವದಲ್ಲಿ ಬ್ಯಾಂಕ ಅಭಿವೃದ್ಧಿ ಹೊಂದಲಿದ್ದು ಬ್ಯಾಂಕ ಅಭಿವೃದ್ಧಿಗೆ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದರು. ಇದು 30 ತಿಂಗಳ ಆಯ್ಕೆ ಅಲ್ಲ, ಜೊಲ್ಲೆ ಅವರ ಸಹಕಾರಿ ರಂಘದ ಅನುಭವದಲ್ಲಿ ಬ್ಯಾಂಕ ಮುಂದೆ ಸಾಗಿ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಸತತ 5 ವರ್ಷ ಅವರೆ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷ ರಾಜು ಕಾಗೆ ಅವರು ಪಿನಿಕ್ಷನಂತೆ ಆಯ್ಕೆ ಅಗಿದ್ದು, ಎಲ್ಲರೂ ಸೇರಿ ಬ್ಯಾಂಕ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ನೂತನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಜಾರಕಿಹೊಳಿ ಸಹೋದರರು ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ನುಡಿದಂತೆ ನಡೆದುಕೊಂಡಿದ್ದಾರೆ. ರೈತ ಸಾಲ ಜೊತೆ ಎಲ್ಲ ಕ್ಷೇತ್ರದಲ್ಲಿ ಸಾಲ ನೀಡಿ ಬ್ಯಾಂಕ ರಾಜ್ಯದಲ್ಲಿ ನಂ. 1 ಮಾಡುವ ಉದ್ದೇಶ ಹೊಂದಿದ್ದು, ಠೇವಣಿ ಹಿಂಪಡೆಯುವ ಗ್ರಾಹಕರು ನಮ್ಮ ಮೇಲೆ ವಿಶ್ವಾಸ ಇಡುವ ಕೆಲಸ ಮಾಡಬೇಕು. ಇದೆ ವರ್ಷ ಬ್ಯಾಂಕಿನ 100 ವರ್ಷಗಳ ಸಂಭ್ರಮ ಆಚರಣೆ ಮಾಡಲಾಗುವುದು ಎಂದರು.
ನೂತನ ಉಪಾಧ್ಯಕ್ಷ, ಶಾಸಕ ರಾಜು ಕಾಗೆ ಮಾತನಾಡಿ ನಾನು ವಯಸಿನಲ್ಲಿ ಹಾಗೂ ಶಿಕ್ಷಣದಲ್ಲಿ ಹಿರಿಯನಿದ್ದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಹಕಾರಿ ಸಂಘದ ಬೆಳವಣಿಗೆಗೆ ಪರ ವಿರೋಧಿ ಎನ್ನದೇ ಕೆಲಸ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಶಾಸಕ ಗಣೇಶ ಹುಕ್ಕೇರಿ, ಶಾಸಕ ವಿಶ್ವಾಸ ವೈದ್ಯ, ಮಹಾಂತೇಶ ದೊಡ್ಡಗೌಡರ, ಎಮ್ ಎಲ್ ಸಿ ಚನ್ನರಾಜ ಹಟ್ಟಿಹೊಳಿ, ಅರವಿಂದ ಪಾಟೀಲ, ನೀಲಕಂಠ ಕಪ್ಪಲಗುದ್ದಿ, ನಾನಾಸಾಹೇಬ ಪಾಟೀಲ, ವಿಶ್ವನಾಥ ಮಾಮನಿ, ಅಮರನಾಥ ಜಾರಕಿಹೊಳಿ, ರಾಹುಲ ಜಾರಕಿಹೊಳಿ, ಅಪ್ಪಾಸಾಹೇಬ ಕುಲಗಡೆ, ಸೇರಿದಂತೆ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಬೆಳಗಾವಿ ಉತ್ತರ ಶಾಸಕ ರಾಜು ಸೆಟ್, ಲಕ್ಷ್ಮಣರಾವ ಚಿಂಗಳೆ,ಮಾಜಿ ಶಾಸಕ ಸ್ಯಾಮ್ ಘಾಟಗೆ ಸೇರಿದಂತೆ ಅಧ್ಯಕ್ಷ, ಉಪಾಧ್ಯಕ್ಷರ, ನಿರ್ದೇಶಕರ ಬೆಂಬಲಿಗರು, ಸಹಕಾರಿ ಬಂದುಗಳು ರಾಜಕೀಯ ಮುಖಂಡರು ಭಾಗವಹಿಸಿ ಸಂಭ್ರಮಿಸಿದರು.


