ಮುರಗೋಡ.ಇಲ್ಲಿನ ಲಿಂ. ಶ್ರೀ ಮಹಾಂತೇಶ ಅಜ್ಜನವರು ಪ್ರಾರಂಭಿಸಿರುವ ಬಿಡಿಸಿಸಿ ಬ್ಯಾಂಕು ಇಂದು ರಾಜ್ಯದ 2 ನೇ ದೊಡ್ಡ ಬ್ಯಾಂಕು ಆಗಿ ಕೆಲಸ ಮಾಡುತ್ತಿದ್ದು, ಶ್ರೀ ಮಹಾಂತೇಶ ಅಜ್ಜನವರ ಆಶೀರ್ವಾದದಿಂದ ರಾಜ್ಯದ ನಂ 1 ಬ್ಯಾಂಕ ಮಾಡಲು ಶ್ರಮಿಸುವದಾಗಿ ಮತ್ತು ಶ್ರೀಮಠದ ಅಭಿವೃದ್ಧಿಗೆ ಸದಾ ಸಹಕಾರ ನೀಡುವದಾಗಿ ಬಿಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು..
ಅವರು ಶುಕ್ರವಾರದಂದು ಮುರಗೋಡದ ಶ್ರೀ ಮಹಾಂತೇಶ ಅಜ್ಜನವರ ಮಠಕ್ಕೆ ಅಧ್ಯಕ್ಷರಾದ ನಂತರ ಬೇಟಿ ನೀಡಿ ಗದ್ದುಗೆ ದರ್ಶನ ಪಡೆದು ಶ್ರೀ ಮಠದ ಪೀಠಧಿಪತಿಗಳಾದ ಶ್ರೀ ನೀಲಕಂಠ ಮಹಾಸ್ವಾಮಿಗಳ ಆಶೀರ್ವಾದ ಪಡೆದು ಮಾತನಾಡಿದರು.
ಬಿಡಿಸಿಸಿ ಬ್ಯಾಂಕ ಹಿರಿಯ ನಿರ್ದೇಶಕ ಹಾಗೂ ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ ಮಾತನಾಡಿ ಶ್ರೀ ಮಹಾಂತೇಶ ಅಜ್ಜನವರ ಕೃಪೆಯಿಂದ ಆರಂಭವಾದ ಬ್ಯಾಂಕು ಇಂದು ರೈತರ ಒಡನಾಡಿಯಾಗಿ, ಸಹಸ್ರಾರು ಕೋಟಿ ರೂಪಾಯಿಗಳ ವ್ಯವಹಾರ ಮಾಡಿ, ಸಹಸ್ರಾರು ಜನರಿಗೆ ಉದ್ಯೋಗ ನೀಡಿ ಮುಂದಿನ ದಿನಗಳಲ್ಲಿ ನಂ 1 ನೇ ಬ್ಯಾಂಕ ಆಗಿ ಎಲ್ಲ ಜನರ ಆಶಾಕಿರಣ ಆಗಲಿದೆ ಎಂದರು.
ಇದೆ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ, ಅಪ್ಪಾಸಾಹೇಬ ಕುಲಗುಡೆ, ಅರವಿಂದ ಪಾಟೀಲ,ನೀಲಕಂಠ ಕಪ್ಪಲಗುದ್ದಿ, ವೀರೂಪಾಕ್ಷ ಮಾಮನಿ,ಬ್ಯಾಂಕಿನ ಅಧಿಕಾರಿಗಳಿಗೆ ಶ್ರೀ ಮಠದ ವತಿಯಿಂದ ಶ್ರೀ ನೀಲಕಂಠ ಮಹಾಸ್ವಾಮಿಗಳು ಸತ್ಕರಿಸಿ, ಸನ್ಮಾನಿಸಿದರು. ಇದೆ ಸಂದರ್ಭದಲ್ಲಿ ಶ್ರೀ ಮಠದ ಅಬ್ಯುದಯಕ್ಕೆ ಬಿಡಿಸಿಸಿ ಬ್ಯಾಂಕ ವತಿಯಿಂದ ರೂ. 10 ಲಕ್ಷ ಗಳ ಚೆಕ್ ನ್ನು ದೇಣಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ, ಮಂಜುಳಾ ದೊಡ್ಡಗೌಡರ, ಬೈಲಹೊಂಗಲ, ಕಿತ್ತೂರು ತಾಲೂಕಿನ ಮುಖಂಡರು, ಗ್ರಾಮದ ಹಿರಿಯರು, ರೈತರು, ಗ್ರಾಮಸ್ಥರು ಭಾಗವಹಿಸಿದ್ದರು.


