ಸಲ್ಮಾನ್ ಮನೆ ಬಳಿ ನಡೆದ ಗುಂಡಿನ ದಾಳಿಗೆ ಅನ್ಮೋಲ್ ಬಿಷ್ಣೋಯ್ ಶೂಟರ್‌ಗಳಿಗೆ ಸ್ಪಷ್ಟವಾಗಿ ಸೂಚನೆ

Ravi Talawar
ಸಲ್ಮಾನ್ ಮನೆ ಬಳಿ ನಡೆದ ಗುಂಡಿನ ದಾಳಿಗೆ ಅನ್ಮೋಲ್ ಬಿಷ್ಣೋಯ್ ಶೂಟರ್‌ಗಳಿಗೆ ಸ್ಪಷ್ಟವಾಗಿ ಸೂಚನೆ
WhatsApp Group Join Now
Telegram Group Join Now

ಏಪ್ರಿಲ್ 14 ರಂದು ಸಲ್ಮಾನ್ ಖಾನ್ ಅವರ ಮನೆ ಬಳಿ ನಡೆದ ಗುಂಡಿನ ದಾಳಿಗೆ ಮುನ್ನ, ಅನ್ಮೋಲ್ ಬಿಷ್ಣೋಯ್ ಶೂಟರ್‌ಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದರು, ಆ ಸೂಚನೆಗಳೇನು ಎಂಬುದನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಚಾರ್ಜ್ ಶೀಟ್ ಪ್ರಕಾರ, ಜೈಲಿನಲ್ಲಿರುವ ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್ ಅವರ ಕಿರಿಯ ಸಹೋದರ ಅನ್ಮೋಲ್ ಅವರು ಮನೆಯ ಹೊರಗೆ ಗುಂಡು ಹಾರಿಸಿದ ಶೂಟರ್‌ಗಳಲ್ಲಿ ಒಬ್ಬರಿಗೆ ಸಂದೇಶವನ್ನು ನೀಡಿದ್ದು, ಬಾಲಿವುಡ್ ಸೂಪರ್‌ಸ್ಟಾರ್ ಖಾನ್ ಭಯಪಡುವ ರೀತಿಯಲ್ಲಿ ಗುಂಡು ಹಾರಿಸುವಂತೆ ಕೇಳಿದ್ದರು.

ಏಪ್ರಿಲ್ 14 ರ ಬೆಳಗ್ಗೆ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ವಿಕ್ಕಿ ಕುಮಾರ್ ಗುಪ್ತಾ ಮತ್ತು ಸಾಗರ್ ಪಾಲ್ ಎಂಬ ಇಬ್ಬರು ಬೈಕ್​ನಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದರು.

ಕ್ರೈಂ ಬ್ರ್ಯಾಂಚ್ ​ 1,735 ಪುಟಗಳ ಚಾರ್ಜ್ ಶೀಟ್ ಅನ್ನು ವಿಶೇಷ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ನ್ಯಾಯಾಲಯಕ್ಕೆ ಈ ತಿಂಗಳ ಆರಂಭದಲ್ಲಿ ಸಲ್ಲಿಸಿತು. ಮುಂಬೈನಲ್ಲಿ ತನ್ನ ಭದ್ರಕೋಟೆ ಮತ್ತು ಪ್ರಾಬಲ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಬಾಲಿವುಡ್ ಸೂಪರ್‌ಸ್ಟಾರ್ ಖಾನ್ ಅವರ ಮನೆಗೆ ಗುಂಡಿನ ಸಂಚು ರೂಪಿಸಲಾಗಿತ್ತು.

ವಿಕ್ಕಿ ಕುಮಾರ್ ಗುಪ್ತಾ ಮತ್ತು ಸಾಗರ್ ಪಾಲ್ ಅವರನ್ನು ಹೊರತುಪಡಿಸಿ, ಸೋನು ಕುಮಾರ್ ಬಿಷ್ಣೋಯ್, ಮೊಹಮ್ಮದ್ ರಫೀಕ್ ಚೌಧರಿ ಮತ್ತು ಹರ್ಪಾಲ್ ಸಿಂಗ್ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

 

WhatsApp Group Join Now
Telegram Group Join Now
Share This Article