ಬಳ್ಳಾರಿ :19.. ನಗರದ ಕಂಟೋನ್ಮೆಂಟ್ ಪ್ರದೇಶದ ವಾಹಬ್ ಟವರ್ ಕಟ್ಟಡದಲ್ಲಿರುವ ಇಂದಿರಾ ಐವಿಎಫ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಾದ ಅನಿರುದ್ಧ ಎಂಬ ವೈದ್ಯರು ಸಲಿಂಗ ಕಾಮಿಗಳಾಗಿದ್ದು ಅವರು ತಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕಿರಿಯ ಕೆಲಸಗಾರರನ್ನು ತಮ್ಮ ಕಾಮ ಕೃಷಿಯನ್ನು ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಮತ್ತು ಅವರಿಗೆ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಚಿಕಿತ್ಸೆಗೆ ಬರುವ ಮಹಿಳೆಯರಿಗೆ ಪ್ರೆಜ್ಞೆ ತಪ್ಪಿಸಿ ಅಸಹಜ ಲೈಂಗಿಕತೆ ಮಾಡಿಸಿ, ತಾನು ತೃಪ್ತಿ ನೀಗಿಸಿಕೊಳ್ಳುತ್ತಾರೆ, ಜೊತೆಗೆ ಆಸ್ಪತ್ರೆಯ ಸಿಬ್ಬಂದಿಗಳನ್ನು ಸಹ ಪ್ರಜ್ಞೆ ತಪ್ಪಿದ ಮಹಿಳೆಯರನ್ನು ಅತ್ಯಾಚಾರ ಮಾಡಲು ಪ್ರೇರೇಪಿಸುತ್ತಿದ್ದಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನಾನು ಈಗಾಗಲೇ ಜಿಲ್ಲಾ ಪೊಲೀಸ್ ಅಧಿಕ್ಷಕರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ದೂರನ್ನು ನೀಡಿದ್ದೇನೆ ಇಲ್ಲಿಯವರೆಗೆ ಯಾರು ಕೂಡ ಕ್ರಮ ಕೈಗೊಂಡಿರುವುದಿಲ್ಲ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹರ್ಷವರ್ಧನ್ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ ನಗರದ ಇಂದಿರಾ ಐ.ವಿ.ಎಫ್ ಆಸ್ಪತ್ರೆಯಲ್ಲಿ ಸುಮಾರು 15 ತಿಂಗಳುಗಳಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿನ ಆಸ್ಪತ್ರೆಯ ವೈದ್ಯರಾದ ಅನಿರುದ್ಧ ಆರ್ ಹೆಚ್ ಎಂಬುವವರು ಇತ್ತೀಚಿಗೆ 02 ತಿಂಗಳುಗಳಿಂದ ನನಗೆ ಲೈಂಗಿಕವಾಗಿ ಸಲಿಂಗ ಕಾಮಕ್ಕೆ ಬಳಸಿಕೊಳ್ಳುವ ಇರಾದೆಯನ್ನು ವ್ಯಕ್ತಪಡಿಸಿರುತ್ತಾರೆ. ಅದಕ್ಕೆ ನಾನು ಒಪ್ಪದಿದ್ದಾಗ ಚಿಕಿತ್ಸೆಗಾಗಿ ಬರುವ ಮಹಿಳೆಯರನ್ನು ಅನಸ್ತೇಷಿಯ ಕೊಟ್ಟಾಗ ಅವರನ್ನು ಲೈಂಗಿಕವಾಗಿ ಬಳಸಿಕೊಂಡು ತದನಂತರ ನನ್ನ ಜೊತೆ (ವೈದ್ಯ ಅನಿರುದ್ಧ) ಸಲಿಂಗ ಕಾಮ ಮಾಡು ಎಂದು ಪ್ರೇರೆಪಿಸಿರುತ್ತಾರೆ. ಜೊತೆಗೆ ಅಪಾರ ಹಣ, ಬೇಡಿಕೆಗೆ ಅನುಸಾರವಾಗಿ ವ್ಯವಸ್ಥೆ ಮಾಡಿಕೊಡುವುದಾಗಿ ಅಮಿಷವನ್ನು ವಡ್ಡಿರುತ್ತಾರೆ ಇದಕ್ಕೆ ನಾನು ಅಸಮ್ಮತಿ ವ್ಯಕ್ತಪಡಿಸಿದಾಗ ನನ್ನನ್ನು ಕೆಲಸದಿಂದ ತೆಗೆದು ಹಾಕುವ ಧಮಿಕೆ ಹಾಕಿ ನಾನಾ ವಿಧವಾಗಿ ನನ್ನನ್ನು ಹಿಂಸಿಸಿರುತ್ತಾರೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನ ವಂಶವನ್ನೆ ನಿರ್ವಂಶ ಮಾಡುವುದಾಗಿ ಹೆದರಿಸಿರುತ್ತಾರೆ. ಜೊತೆಗೆ ಸದರಿ ಸಲಿಂಗ ಕಾಮದ ವಿಷಯವು ತನ್ನ ಪ್ರತಿಷ್ಠೆಗೆ ದಕ್ಕೆ ಬಾರದಂತೆ ನೋಡಿಕೊಳ್ಳಬೇಕು, ಒಂದುವೇಳೆ ಇದು ಬಯಲಾದರೆ ಸ್ವತಃ ನಾನು ಆತ್ಮಹತ್ಯೆಗೆ ಶರಣಾಗುವ ಬೆದರಿಕೆಯನ್ನು ಹಾಕುತ್ತಿದ್ದಾನೆ.
ಹೀಗೆ ನನಗೆ ಪ್ರತಿನಿತ್ಯ ಕಿರುಕುಳ ನೀಡುವ ವೈದ್ಯ ಅನಿರುದ್ಧರವರು ಈ ದುಷ್ಕೃತ್ಯವನ್ನು ಖಂಡಿಸುತ್ತಾ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳನ್ನು ಒತ್ತಾಯಿಸಿದರು.
Ll ಈ ಪತ್ರಿಕಾಗೋಷ್ಠಿಯಲ್ಲಿ, ಇಝಜ್ ಅಹ್ಮದ್, ಉದಯ್ ಕಿರಣ್, ಅಲೋಕ್, ಸಾಯಿ ಋಷಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.