ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ನಿವೃತ್ತಿ ಒಪ್ಪಂದ ಜಾರಿಗೆ ಆಗ್ರಹ

Ravi Talawar
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ನಿವೃತ್ತಿ ಒಪ್ಪಂದ ಜಾರಿಗೆ ಆಗ್ರಹ
WhatsApp Group Join Now
Telegram Group Join Now
 ಬಳ್ಳಾರಿ. ಮೇ. 19.: ಕರ್ನಾಟಕ ರಾಜ್ಯ  ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗ್ರಾಚ್ಯುಟಿ ಪಾವತಿ ಕಾಯಿದೆ 1972ರ ಅಡಿಯಲ್ಲಿ ಗ್ರಾಚ್ಯುಟಿ (ನಿವೃತ್ತಿ ಉಪಧನ) ಪಡೆಯಲು ಅರ್ಹರು ಎಂಬುದಾಗಿ ಸುಪ್ರೀಂಕೋರ್ಟ್ ಅತ್ಯಂತ ಮಹತ್ವದ ತೀರ್ಪನ್ನು ಇತ್ತೀಚೆಗೆ ಅಂದರೆ
 25ನೇ ಏಪ್ರಿಲ್ 2022ರಂದು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ  ಅಜಯ್ ರಸ್ತೋಗಿ ಮತ್ತು  ಅಭಯ್ ಎಸ್ ಓಕಾ ರವರ ನೇತೃತ್ವದ ನ್ಯಾಯಪೀಠ ಅಂಗನವಾಡಿ ನೌಕರರ ಕೆಲಸ ಕಾರ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವರ ಕೆಲಸವು ಅರಕಾಲಿಕವಲ್ಲ,  ಅಂಗನವಾಡಿ ನೌಕರರು ಪೂರ್ಣ ಸಮಯದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಅಭಿಪ್ರಾಯಗೊಂಡು ಅವರಿಗೆ  ಸಲ್ಲಬೇಕಾದ ನಿವೃತ್ತಿ ವೇತನ ಹಾಗೂ ಗ್ರಾಚುಟಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಸ್ಪಷ್ಟವಾಗಿ ಆದೇಶವನ್ನು ನೀಡಿದೆ ಅದೇ ಪ್ರಕಾರವಾಗಿ ನಮಗೆ ರಾಜ್ಯ ಸರ್ಕಾರ ಗ್ರಾಚುಟಿ ಮತ್ತು ನಿವೃತ್ತಿ ವೇತನವನ್ನು ಒದಗಿಸಿ ಕೊಡಬೇಕೆಂದು  ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಆರ್ಕಾಣಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
 ಅವರು ಇಂದು ಬಳ್ಳಾರಿ ಜಿಲ್ಲಾ ಅಧಿಕಾರಿಗಳ ಸ್ಥಾನಿಕ ಅಧಿಕಾರಿ ತಾಸಿಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರುಗಳು ನಿಯಮಿತವಾದ ಸಂಬಳ ಹಾಗೂ ಮತ್ತಿತರ ಸೌಲತ್ತುಗಳಿಂದಲೂ ವಂಚಿತರಾಗಿದ್ದಾರೆ. ಅವರುಗಳು ನಿರ್ವಹಿಸುವ ಕೆಲಸ ಶಾಸನಬದ್ಧವಾಗಿದ್ದರೂ ಸಹ ಅದನ್ನು ನಾಗರಿಕ ಸೇವೆಯಿಂದಾಗಲೀ ಅಥವಾ ನಾಗರಿಕ ಹುದ್ದೆ ಎಂಬುದಾಗಿಯೂ ಪರಿಗಣಿಸುವುದಿಲ್ಲ. ಹಾಗೂ ಕನಿಷ್ಠ ವೇತನಕ್ಕಿಂತ ಕಡಿಮೆ ಗೌರವ ಧನದಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ಗಂಭೀರವಾಗಿ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ವೇತನದ ವ್ಯಾಖ್ಯಾನವು ತುಂಬಾ ವಿಶಾಲವಾಗಿದೆ. ಅಂಗನವಾಡಿ ನೌಕರರು ಪಡೆಯುವ ಗೌರವ ಧನವೂ ಕೂಡ ವೇತನದ ವ್ಯಾಖ್ಯಾನಕ್ಕೆ ಒಳಪಡುವುದರಿಂದ ವೇತನಕ್ಕಾಗಿಯೇ ನೇಮಕಗೊಂಡಿರುವ ಅಂಗನವಾಡಿಗಳ ಕಾರ್ಯಕರ್ತೆ ಮತ್ತು ಸಹಾಯಕಿಯರು 1972ರ ಗ್ರಾಚ್ಯುಟಿ ಪಾವತಿ ಕಾಯ್ದೆಯ ಪ್ರಕಾರ ಅವರು ನೌಕರರಾಗಿರುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟಿಕರಿಸಿದೆ.
 ಅಷ್ಟೇ ಅಲ್ಲದೆ  1972ರ ಗ್ರಾಚ್ಯುಟಿ ಪಾವತಿ ಕಾಯಿದೆಯ ಪ್ರಕಾರ ಯಾವುದೇ ಉದ್ಯೋಗ ಘಟಕದಲ್ಲಿ ಐದು ವರ್ಷ ಸೇವೆ ಪೂರ್ಣಗೊಳಿಸಿ ಸ್ವಯಂ ನಿವೃತ್ತಿ ಆದವರು ಸಹ ರಾಜಕೀಯ ಪಡೆಯಲು ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ ಹಾಗೂ ಪೂರ್ಣಕಾಲಿಕ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ನಿವೃತ್ತಿಗೊಂಡ 30 ದಿನಗಳಲ್ಲಿ ಅವರಿಗೆ ಸಲ್ಲಬೇಕಾದ ಗ್ರಾಚ್ಯುಟಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಗ್ರಾಚ್ಯುಟಿ ಪಾವತಿಯಲ್ಲಿ ವಿಳಂಬವಾದರೆ ಶೇಕಡಾ 10 ರಷ್ಟು ಬಡ್ಡಿ ಸಮೇತ ಸೇರಿಸಿ ಗ್ರಾಚ್ಯುಟಿ ಮೊತ್ತವನ್ನು ನೀಡಬೇಕೆಂಬುದು ಗ್ರಾಚ್ಯುಟಿ ಪಾವತಿಯ ಕಾಯ್ದೆಯ ನಿಬಂಧನೆಯಲ್ಲಿ ತಿಳಿಸಲಾಗಿದೆ. ಈ ಕಾಯ್ದೆ ಅಡಿಯಲ್ಲಿ
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಹ ಕೇಂದ್ರ ಮತ್ತು ರಾಜಕೀಯ ರಾಜ್ಯ ಸರ್ಕಾರಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಸಿಡಿಪಿಓ ಆಧೀನದಲ್ಲಿರುವ ಐಸಿಡಿಎಸ್ ಯೋಜನೆ (ಪ್ರಾಜೆಕ್ಟ್) ಗಳಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳಾಗಿರುವುದರಿಂದ ಗ್ರಾಚ್ಯುಟಿ ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತಾರೆ ಹಾಗೂ ಕಾಯ್ದೆಯ ಪ್ರಕಾರ ಉದ್ಯೋಗಿಯು ಮರಣ ಹೊಂದಿದರೆ ಅವರ ನಾಮಿನಿ ಅಥವಾ ವಾರಸುದಾರರಿಗೆ ಗ್ರಾಚ್ಯುಟಿ ಪಡೆಯಲು ಕಾನೂನು ಬದ್ಧ ಹಕ್ಕುದಾರರಾಗಿರುತ್ತಾರೆ ಎಂಬುದನ್ನು ಗ್ರಾಚ್ಯುಟಿ ಕಾಯಿದೆ ಸ್ಪಷ್ಟಿಕರಿಸಿದೆ. ಆದುದರಿಂದ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ನೀಡುವುದು ಸರ್ಕಾರದ ಹೊಣೆಗಾರಿಕೆಯಾಗಿರುತ್ತದೆ ಕೂಡಲೇ ಗ್ರಾಚುಟಿ ಮತ್ತು ನಿವೃತ್ತಿ ವೇತನ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು
ಕರ್ನಾಟಕ ರಾಜ್ಯ ಸರ್ಕಾರದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಲು ನಿರ್ಧರಿಸಿದ್ದು, ಅದನ್ನು 2023 ರಿಂದ ನಿವೃತ್ತರಾದವರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದಾಗಿ ಘೋಷಿಸಿರುವುದು 1972ರ ಗ್ರಾಚ್ಯುಟಿ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ.
1975ರಲ್ಲಿ ಪ್ರಾರಂಭವಾದ ಐಸಿಡಿಎಸ್ ಯೋಜನೆಗೆ ಇದೀಗ 50 ವರ್ಷಗಳಾಗುತ್ತಿದ್ದು, ಸೇವೆಗೆ ಸೇರಿದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು 2011-12ನೇ ಸಾಲಿನಿಂದಲೇ ಕಾಲಕಾಲಕ್ಕೆ ನಿವೃತ್ತರಾಗುತ್ತಾ ಬರುತ್ತಿದ್ದಾರೆ. ಈಗಾಗಲೇ ನಿವೃತ್ತರಾಗಿರುವ ಕಾರ್ಯಕರ್ತೆಯರು ಸಹಾಯಕಿಯರಲ್ಲಿ ಬಹುತೇಕರು ಮರಣ ಹೊಂದಿದ್ದು, ಉಳಿದವರು ಕಾಯಿಲೆಗಳಿಗೆ ತುತ್ತಾಗಿ ಆರ್ಥಿಕ ಸಂಕಷ್ಟಗಳು ತರಹದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.
ಆದುದರಿಂದ 2023ರ ನಂತರ ನಿವೃತ್ತರಾಗುವವರೆಗೆ ಗ್ರಾಚ್ಯುಟಿ ನೀಡುವ ಸರ್ಕಾರದ ನಿರ್ಧಾರವನ್ನು ಮಾರ್ಪಡಿಸಿ 1975 ರಿಂದ ಸೇವೆಗೆ ಸೇರಿ 2011-12 ರಿಂದ ನಿವೃತ್ತರಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಅನ್ವಯವಾಗುವಂತೆ ಗ್ರಾಚ್ಯುಟಿ ಸೌಲಭ್ಯವನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
 ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಹಾಗೂ ರಾಜ್ಯ ಕಾರ್ಯದರ್ಶಿ  ಆರ್ಕಾಣಿ, ಈ.ಮಂಗಮ್ಮ, ಪಿಡಿ ಮೀನಾ ಕುಮಾರಿ, B ಎರಮ್ಮ, ಟೀ ಇಂದಿರಾ ಟೀ ಪುಷ್ಪವತಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರು ಇದ್ದರು.
WhatsApp Group Join Now
Telegram Group Join Now
Share This Article