ಕುಸಿಯುವ ಹಂತದಲ್ಲಿರುವ ಅಂಗನವಾಡಿ ಕಟ್ಟಡ ಪ್ರಾಣಭೀತಿಯಲ್ಲಿ ಮಕ್ಕಳು

Pratibha Boi
ಕುಸಿಯುವ ಹಂತದಲ್ಲಿರುವ ಅಂಗನವಾಡಿ ಕಟ್ಟಡ ಪ್ರಾಣಭೀತಿಯಲ್ಲಿ ಮಕ್ಕಳು
WhatsApp Group Join Now
Telegram Group Join Now

ಜಮಖಂಡಿ :ಅಂಗನವಾಡಿ ಕೇಂದ್ರವೊಂದು ದುರಸ್ತಿಗೊಳ್ಳದೇ ಕುಸಿಯುವ ಹಂತದಲ್ಲಿದ್ದು, ಪ್ರಾಣ ಭೀತಿಯಲ್ಲಿ ಹಲವಾರು ಕಂದಮ್ಮಗಳು ತಮ್ಮ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪಡೆಯಬೇಕಾದ ದುಃಸ್ಥಿತಿ ಬಂದೊದಗಿದೆ. ತಾಲೂಕಿನ ಬಿದರಿ ಗ್ರಾಮದ ಇಂದಿರಾ ನಗರದಲ್ಲಿರುವ ಅಂಗನವಾಡಿ ಕೇಂದ್ರ ಸಿಥಿಲಗೊಂಡಿದ್ದು ಬೀಳುವ ಹಂತ ದಲ್ಲಿದೆ. ಸುಮಾರು 20 ಮಕ್ಕಳು ಈ ಕೇಂದ್ರಕ್ಕೆ ಕಲಿಯಲು ಬರುತ್ತಾರೆ.

ಅಂಗನವಾಡಿಯ ಕಟ್ಟಡವು ಶಿಥಿಲಗೊಂಡಿದ್ದು, ಇಂದೋ, ನಾಳೆಯೋ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಈ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲು ಪೋಷಕರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.ಅಂಗನವಾಡಿ ಮೇಲ್ಛಾವಣಿಯ ಸಿಮೆಂಟ ಕಳಚಿ ಮಕ್ಕಳು ಕೂರುವ ಜಾಗದಲ್ಲೇ ಬಿದ್ದಿದ್ದು, ಘಟನೆಯಿಂದ ಪೋಷಕರು ಆತಂಕಗೊಂಡಿದ್ದಾರೆ. ಅಂಗನವಾಡಿ ಕಟ್ಟಡ ದುರಸ್ತಿಗೆ ಸ್ಥಳೀಯರು ಹಲವು ಬಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಕಟ್ಟಡ ದುರಸ್ತಿ ಮಾಡಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಅಂಗನವಾಡಿ ಕೇಂದ್ರದಲ್ಲಿರುವ ಮಕ್ಕಳು ಕೊಠಡಿಯ ಮೂಲೆಯಲ್ಲಿ ಕುಳಿತು ಪಾಠ ಕೇಳಬೇಕಾದ ಪರಿಸ್ಥಿತಿ ಇದೆ..ಅಂಗನವಾಡಿ ಮಕ್ಕಳಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ,

ಕೋಟ್‌;1

ಬಿದರಿಗ್ರಾಮದ ಅಂಗನವಾಡಿ ಕಟ್ಟಡ ಸಿಥಿಲಗೊಂಡಿದೆ ಆದರೆ ಮುಳುಗಡೆ ಪ್ರದೇಶವಾಗಿರುವ ಬಿದರಿಗ್ರಾಮದಲ್ಲಿ ಹೊಸ ಕಟ್ಟಡ ಕಟ್ಟಲು ಅನುದಾನವಿಲ್ಲ, ಆದ್ದರಿಂದ ಮಕ್ಕಳಿಗೆ ತೊಂದರೆ ಯಾಗದಂತೆ ತಾತ್ಕಾಲಿಕ ಶೆಡ್‌ ನಿರ್ಮಿಸಲಾಗಿದೆ. ಮುಳುಗಡೆ ಪ್ರದೇಶದಲ್ಲಿ ಬಾಡಿಗೆ ಕಟ್ಟಡ ಪಡೆಯಲು ಬರುವದಿಲ್ಲವಾದ್ದರಿಂದ ಇದ್ದ ಕಟ್ಟಡದಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಾಪಂಗೆ ಅರ್ಜಿ ಸಲ್ಲಿಸಲಾಗಿದ್ದು ಕಟ್ಟಡದ ದುರಸ್ತಿಗೆ ಮನವಿ ಸಲ್ಲಿಸಲಾಗಿದೆ- ಆನಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿ.(ಸಿಡಿಪಿಓ) ಜಮಖಂಡಿ.

WhatsApp Group Join Now
Telegram Group Join Now
Share This Article