ಅನಂತನಾಗ್-ಲಕ್ಷೀ ಸಿನಿಮಾ ರಾಜದ್ರೋಹಿ

Ravi Talawar
ಅನಂತನಾಗ್-ಲಕ್ಷೀ ಸಿನಿಮಾ ರಾಜದ್ರೋಹಿ
WhatsApp Group Join Now
Telegram Group Join Now
      ‘ರಾಜ ದ್ರೋಹಿ’ ಚಿತ್ರದಲ್ಲಿ ಹಲವು ವಿಶೇಷತೆಗಳು ತುಂಬಿವೆ. ದೀರ್ಘ ಕಾಲದ  ನಂತರ ಅನಂತನಾಗ್ ಮತ್ತು ಲಕ್ಷೀ  ಅಭಿನಯಿಸಿದ್ದಾರೆ.
     ಅಲ್ಲದೆ, ನಟ ಶರಣ್ ಹಾಗೂ ಅವರ ತಂದೆ-ತಾಯಿ ನಟನೆ ಮಾಡಿದ್ದಾರೆ. ಜೊತೆಗೆ ಹಿರಿಯ ಪ್ರಚಾರಕರ್ತ ವಿಜಯ್‌ಕುಮಾರ್ ಪ್ರಚಾರ ಮಾಡುತ್ತಿರುವ 685ನೇ ಚಿತ್ರ ಇದು ಎನ್ನಲಾಗಿದೆ. ಧನುಷ್ ಕಂಬೈನ್ಸ್ ಬ್ಯಾನರ್‌ದಲ್ಲಿ ಮಹದೇವಯ್ಯ ನಿರ್ಮಾಣ ಮಾಡಿದ್ದು, ಸಮರ್ಥರಾಜ್ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
      ತಮ್ಮ ಎದುರೇ ಬರುವ ಸಮಸ್ಯೆಗಳನ್ನು ಯಾವ ರೀತಿ ಎದುರಿಸುತ್ತಾರೆ. ಅಪ್ಪ-ಅಮ್ಮ ಕಣ್ಣ ಮುಂದೆ ಇದ್ದರೂ ಗುರುತಿಸಲಾಗದಂತ ಮಕ್ಕಳ ಪರಿಸ್ಥಿತಿ, ಅದೇ ರೀತಿ ತಂದೆ-ತಾಯಿಗೆ ಇವರೇ ತಮ್ಮ ಮಕ್ಕಳೆಂದು ತಿಳಿದಿರುವುದಿಲ್ಲ. ಮುಂದೆ ಬೇರೆ ಬೇರೆ ಅವಘಡಗಳು ಸಂಭವಿಸಿದಾಗ, ಹೇಗೆಲ್ಲಾ ತಿರುವುಗಳು ಪಡೆದುಕೊಳ್ಳುತ್ತದೆ ಎಂಬುದು ಚಿತ್ರದ ಕಥೆಯ ಸಾರಾಂಶವಾಗಿದೆ.
       ತಾರಾಗಣದಲ್ಲಿ ಅಭಿಜಿತ್, ಒರಟ ಪ್ರಶಾಂತ್, ನೀನಾಸಂ ಅಶ್ವಥ್, ಅಚ್ಯುತಕುಮಾರ್, ಕುರಿಬಾಂಡ್ ಸುನಿಲ್, ಬ್ಯಾಂಕ್ ಜನಾರ್ಧನ್, ಪಟ್ರೆಅಜಿತ್, ಮಾನಸಿ, ಸುನಿತಾಶ್ರೀನಿವಾಸ್, ಲಲಿತಾ, ರಾಧಾಕೃಷ್ಣ, ಕುರಿ ಪ್ರತಾಪ್, ಶ್ರೀಲಕ್ಷೀ ಮುಂತಾದವರು ನಟಿಸಿದ್ದಾರೆ. ಸಂಗೀತ ರಘುತುಮಕೂರು, ಹಿನ್ನಲೆ ಸಂಗೀತ ಭೂಪತಿ, ಛಾಯಾಗ್ರಹಣ ಸತೀಶ್‌ಮನೋಹರ್-ವೀನಸ್‌ಮೂರ್ತಿ-ನಾಗರಾಜ್, ಸಂಕಲನ ಕುಮಾರ್‌ಕೊಟಿಕೊಪ್ಪ, ಕಲೆ ಬಾಬುಖಾನ್, ಸಾಹಸ ಅಲ್ಟಿಮೇಟ್ ಶಿವು. ಅಂದುಕೊಂಡಂತೆ ಆದರೆ, ಮುಂದಿನ ತಿಂಗಳು ಚಿತ್ರವನ್ನು ಜನರಿಗೆ ತೋರಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.
WhatsApp Group Join Now
Telegram Group Join Now
Share This Article