ನಿರಂತರ ಪ್ರಯತ್ನದಿಂದ ಯಶಸ್ಸು ಸಾಧಿಸಬೇಕು: ಅನಂತಲೂ ಸುಧಾಕರ್

Sandeep Malannavar
ನಿರಂತರ ಪ್ರಯತ್ನದಿಂದ ಯಶಸ್ಸು ಸಾಧಿಸಬೇಕು: ಅನಂತಲೂ ಸುಧಾಕರ್
WhatsApp Group Join Now
Telegram Group Join Now
ಬಳ್ಳಾರಿ,ಜ.14.: ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ಪವಿತ್ರ ದಿನವು  ಶಿಸ್ತು ಮತ್ತು ಸಕಾರಾತ್ಮಕ ಚಿಂತನೆಯ ಸಂಕೇತವಾಗಿದೆ. ರೈತರ ಪರಿಶ್ರಮದಂತೆ ವಿದ್ಯಾರ್ಥಿಗಳೂ ನಿರಂತರ ಪ್ರಯತ್ನ ಮತ್ತು ಶ್ರಮದಿಂದ ಯಶಸ್ಸನ್ನು ಸಾಧಿಸಬೇಕೆಂದು ಅನಂತಲೂ ಸುಧಾಕರ್ ತಿಳಿಸಿದರು.
ನಗರದ ಶ್ರೀವಾಸವಿ ವಿದ್ಯಾಲಯದಲ್ಲಿ ಸಂಕ್ರಾAತಿಯ ಪ್ರಯುಕ್ತ ರಂಗೋಲಿ ದಿನಾಚರಣೆಯನ್ನು ಅತ್ಯಂತ ಅರ್ಥ ಪೂರ್ಣವಾಗಿ ಹಾಗೂ ನೂತನ ಪರಿಕಲ್ಪನೆಯೊಂದಿಗೆ ಆಚರಿಸಲಾಯಿತು. ವಿದ್ಯಾರ್ಥಿಗಳು ಪರಂಪರೆಯ ರಂಗೋಲಿಗೆ ವಿಜ್ಞಾನ ಮತ್ತು ಗಣಿತದ  ಪರಿಕಲ್ಪನೆಗಳನ್ನು ಸೇರಿಸಿ ವಿನೂತನ ರೀತಿಯಲ್ಲಿ ಪ್ರದರ್ಶಿಸಿದ್ದು, ಗಣಿತದ ಸೂತ್ರಗಳು, ಆಕಾರಗಳು, ವಿಜ್ಞಾನ ಸಂಬAಧಿತ ಚಿತ್ರಗಳನ್ನು ರಂಗೋಲಿಯ ಮೂಲಕ ಚಿತ್ರಿಸಿ ಸೃಜನಶೀಲತೆಯನ್ನು ಮೆರೆದರು.
ವಿದ್ಯಾರ್ಥಿಗಳು ಗಣಿತದ ಆಕಾರಗಳು, ಹಣ್ಣುಗಳು, ತರಕಾರಿಗಳು, ಹೂವುಗಳು, ಸೌರಮಂಡಲ, ಹೃದಯ, ಕಣ್ಣು, ಮೆದುಳು ಮುಂತಾದ  ಚಿತ್ರಗಳನ್ನು ಸುಂದರ ರಂಗೋಲಿಗಳಾಗಿ, ಅವರ ಕಲ್ಪನೆ, ಬಣ್ಣಗಳ ಬಳಕೆ ಹಾಗೂ ಉತ್ಸಾಹ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ನ ಅಧ್ಯಕ್ಷ ವಿಠ್ಠಕೃಷ್ಣಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಉತ್ಸಾಹ, ಶಿಸ್ತು ಹಾಗೂ ವಿನೂತನ ಚಿಂತನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿ,ಇAತಹ ಚಟುವಟಿಕೆಗಳು ವಿದ್ಯಾರ್ಥಿಗಳ ಬೌದ್ದಿಕ,ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಅಭಿವೃದ್ಧಿಗೆ ಬಹಳ ಸಹಕಾರಿಯಾಗುತ್ತವೆ, ಎಂದು ಹೇಳಿದರು.
ಶ್ರೀವಾಸವಿ ಎಜ್ಯುಕೇಷನ್ ಟ್ರಸ್ಟ್ನ ಉಪಾಧ್ಯಕ್ಷ ಜಿತೇಂದ್ರ ಮಾತನಾಡಿ, ಸಾಂಪ್ರದಾಯಿಕ ಪರಂಪರೆ  ಮತ್ತು ಶಿಕ್ಷಣವನ್ನು ಸಮತೋಲನವಾಗಿ ಬೆಳೆಸುತ್ತಾ , ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ, ಮೌಲ್ಯಗಳು ಮತ್ತು ಏಕತೆಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ಮುಖ್ಯಗುರುಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article