ಬೆಂಗಳೂರು: ಇತ್ತಿಚೆಗೆ ಬೆಂಗಳೂರಿನ ನೆಲಮಂಗಲದಲ್ಲಿ ಕರ್ನಾಟಕ ಕನ್ನಡ ಸಾಹಿತ್ಯ ಲೋಕ ನೆಲಮಂಗಲ ಇವರು ರವಿವಾರ ದಿನಾಂಕ – ೨೮-೧೨-೨೦೨೫ ರಂದು ಬೆಳಿಗ್ಗೆ ೧೧ ಗಂಟೆಗೆ ಶ್ರೀ ಪವಾಡ ಬಸವಣ್ಣ ದೇವರ ಮಠದಲ್ಲಿ ಬುದ್ಧ ಬಸವ ಭೀಮ ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಸಮಾರಂಭ ನಡೆಯಿತು.
ಈ ಭವ್ಯ ವೇದಿಕೆಯ ಮೇಲೆ ಉಪಸ್ಥಿತರಿರುವ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀ ಬಸವಣ್ಣ ದೇವರ ಮಠ ನೆಲಮಂಗಲ, ನಿವೃತ್ತ ಆಯ್ ಎ ಎಸ್ ಅಧಿಕಾರಿಗಳು, ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ, ಲತಾ ಕೆ. ಎಸ್ ಹೆಗಡೆ, ಡಾ. ಸಂತೋಷ ಹಾನಗಲ್, ಡಾ. ವಿಜಯಕುಮಾರ್ ಹೆಚ್, ಡಾ. ಲಕ್ಷ್ಮೀನಾರಾಯಣಸ್ವಾಮಿ, ಡಾ. ಲಕ್ಷೀನರಸಮ್ಮನವರು, ಡಾ. ಪೂರ್ಣೀಮಾ ರಾಜೇಶ್ ಇನ್ನೂ ಮುಂತಾದ ಗಣ್ಯಮಾನ್ಯರೆಲ್ಲರೂ ಸೇರಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದ ಆನಂದ ಹಕ್ಕೆನ್ನವರ ಅವರ ಚೊಚ್ಚಲ ಕವನ ಸಂಕಲನ ಹೃದಯಾಂತರಾಳ ಕೃತಿ ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು. ಪ್ರಜಾಕವಿ ಎನ್ ಆರ್ ನಾಗರಾಜ್ ಸಾಹಿತಿಗಳು ಅವಕಾಶ ನೀಡಿದರು. ಕು. ಭಾಗ್ಯಶ್ರೀ ಹುರಕಡ್ಲಿ ಕೃತಿ ಪರಿಚಯ ಮಾಡಿದರು. ಗಿರಿಯಪ್ಪ ಕೆ, ಸೌಮ್ಯಾ ಸಿ ಮುಂತಾದ ಸಾಹಿತಿಗಳು ಉಪಸ್ಥಿತರಿದ್ದರೆಂದು ಆನಂದ ಹಕ್ಕೆನ್ನವರ ತಿಳಿಸಿದ್ದಾರೆ.


