ಬಳ್ಳಾರಿ. ಮೇ. 05.. ತಾಲೂಕಿನ ಕುಡುತಿನಿ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಇದೇ ತಿಂಗಳು 17 ನೇ ತಾರೀಖಿನೊಳಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಸಭೆಯನ್ನು ಕರೆದು ರೈತರ ಸಮಸ್ಯೆಯನ್ನು ಪರಿಹರಿಸಿದೆ ಹೋದಲ್ಲಿ ಮೇ 20ರಂದು ಹೊಸಪೇಟೆಯಲ್ಲಿ ನಡೆಯುವ ರಾಜ್ಯ ಸರ್ಕಾರದ ಎರಡನೇ ವರ್ಷದ ಸಾಧನ ಸಮಾವೇಶದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ರೈತನಾಯಕ ಹಾಗೂ ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯ ಅಧ್ಯಕ್ಷ ಆನಂದ್ ಕುಮಾರ್ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಎಚ್ಚರಿಸಿದರು.
ಅವರು ಇಂದು ಕುಡುತಿನಿ ಪಟ್ಟಣದಲ್ಲಿ ರೈತರ ಜಮೀನಿಗೆ ನ್ಯಾಯಯುತ ಬೆಲೆಯನ್ನು ಒದಗಿಸಿಕೊಡುವಂತೆ ಸಿಪಿಐಎಂ, ಪ್ರಜಾ ಪರಿವರ್ತನಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ವಿವಿಧ ಸಂಘಟನೆಗಳ ಸಹಾಯದಿಂದ ಹಮ್ಮಿಕೊಂಡಿದ್ದ ರಸ್ತೆ ತಡೆ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿ, ಕುಡುತಿನಿ ಹೊರಗಿನಡೋಣಿ, ಜಾನೆ ಕುಂಟೆ, ವೇಣಿ ವೀರಾಪುರ ಗ್ರಾಮಗಳ ರೈತರಿಂದ ಕೆಐಡಿಬಿಯು ಏನ್ ಎಂ ಡಿ ಸಿ, ಮಿತ್ತಲ್ ಮತ್ತು ಬ್ರಾಹ್ಮಿಣಿ ಕೈಗಾರಿಕೆಗಳಿಗೆ
ವಶಪಡಿಸಿಕೊಂಡ ಜಮೀನಿಗೆ ನ್ಯಾಯಯುತವಾದ ಬೆಲೆಯನ್ನು ನೀಡಬೇಕೆಂದು ಮೇಲ್ಕಂಡ ಗ್ರಾಮಗಳ ರೈತರು ಕಳೆದ 800ಕ್ಕೂ ದಿನಗಳಿಂದ ಹೋರಾಟವನ್ನು ನಡೆಸುತ್ತಿದ್ದರು ಸರ್ಕಾರ ಮತ್ತು ಜಿಲ್ಲಾಡಳಿತ ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ ಬಳ್ಳಾರಿ ಜಿಲ್ಲಾ ನ್ಯಾಯಾಲಯ ಆದೇಶದ ಪ್ರಕಾರ ಎಕರೆಗೆ ಒಂದು ಕೋಟಿ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲು ಆದೇಶಿಸುತ್ತದೆ ಅದನ್ನು ಸಹ ನೀಡಿರುವುದಿಲ್ಲ ಇದು ರೈತ ವಿರೋಧಿ ಸರ್ಕಾರವಾಗಿದೆ ಎಂದು ರಾಜ್ಯ ಸರ್ಕಾರದ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಹರಿ ಹಾಯ್ದರು.
ಭೂಸಂತ್ರಸ್ಥ ರೈತರ ಬೇಡಿಕೆಗಳನ್ನು ಪರಿಹರಿಸಲು ಇನ್ನೂ ಒಂದು ವಾರದಲ್ಲಿ ಶಾಸಕರು ಸಂಸದರು ಮತ್ತು ರೈತ ಮುಖಂಡರುಗಳ ಸಭೆಯನ್ನು ಕರೆದು ಹಾಗೂ ಸರ್ಕಾರದ ಮಟ್ಟದಲ್ಲಿ ಮಾತುಕತೆಯನ್ನು ನಡೆಸಲಾಗುವುದು ಎಂಬ ಜಿಲ್ಲಾಧಿಕಾರಿಗಳ ಭರವಸೆಯಿಂದ ರಸ್ತೆ ತಡೆ ಚಳುವಳಿಯನ್ನು ಹಿಂಪಡೆದುಕೊಂಡರು.
ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ರಾಜ್ಯ ಮುಖಂಡರಾದ ಯು ಬಸವರಾಜ್, ಪ್ರಾಂತ ರೈತ ಸಂಘದ ವಿ ಎಸ್ ಶಿವಶಂಕರ್, ಹೋರಾಟಗಾರರಾದ ಸತ್ತಿಬಾಬು, ಕರ್ನಾಟಕ ರಕ್ಷಣಾ ವೇದಿಕೆಯ ಸಂಪತ್ ಕುಮಾರ್, ರೈತರದ ಶ್ರೀಕಾಂತ್ ಹೇಳಿದಂತೆ ನೂರಾರು ಜನ ರೈತರು ಈ ರಸ್ತೆ ತಡೆ ಚಳುವಳಿಯಲ್ಲಿ ಭಾಗವಹಿಸಿದ್ದರು.
ಪೊಲೀಸ್ ಇಲಾಖೆಯ ಡಿಎಸ್ಪಿ, ಎ ಎಸ್ ಪಿ, ಪಿಎಸ್ಐ ಸೇರಿದಂತೆ ಹಲವಾರು ಜನ ಪೊಲೀಸರು ಸೂಕ್ತ ಬಂದೋಬಸ್ ಕಲ್ಪಿಸಿದ್ದರು.