ಬಳ್ಳಾರಿ ಆಗಸ್ಟ್. 05.. ತಮ್ಮ ವಿಶಿಷ್ಟ ಕಲಾ ಸೇವೆಯಿಂದ ಕಲೆಗೆ ಮತ್ತು ಕಲಾವಿದರಿಗೆ ಘನತೆ ತಂದುಕೊಟ್ಟ ರಾಘವರು ಆರು ದಶಕಗಳ ಹಿಂದೆ ತಮ್ಮ ಅಭಿನಯದ ಮೂಲಕ ದೇಶ ವಿದೇಶಗಳಲ್ಲಿ ಹೆಸರುಗಳಿಸಿದವರು ಎಂದು ಸುರವರ ಪ್ರತಾಪರೆಡ್ಡಿ ತೆಲುಗು ವಿಶ್ವವಿದ್ಯಾಲಯದ ಉಪಕುಲಪತಿ ವೇಲಿ ದಂಡ ನಿತ್ಯಾನಂದರಾವ್ ಅವರು ಹೇಳಿದರು.
ರಾಘವ ಕಲಾಮಂದಿರದಲ್ಲಿ ರಾಘವರ 145 ನೇ ಜಯಂತಿಯ ಅಂಗವಾಗಿ ನಡೆದ ನಾಟಕೋತ್ಸವ ಮತ್ತು ತೆಲುಗು ಭಾಷೆಯ ಶ್ರೇಷ್ಠ ನಟರಿಗೆ ರಾಘವ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ತೆಲುಗು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ನಿರಂತರವಾಗಿ ಅಭಿನಯಿಸಿ ಸ್ತ್ರೀ ಪಾತ್ರಗಳನ್ನು ಸ್ತ್ರೀಯರೇ ಮಾಡಬೇಕೆಂದು ಹೇಳಿ, ಅದರಂತೆ ರಂಗಭೂಮಿಗೆ ಹೊಸ ಮಾರ್ಪಾಡು ತಂದ ಧೀಮಂತ ರಾಘವರ ಕಲಾ ಸೇವೆ ಅನನ್ಯವಾದದು.
ತೆಲುಗು ಭಾಷೆಯ ರಂಗಭೂಮಿಯ ಸೇವೆಗೆ ರಾಘವರ ಹೆಸರಿನ ರಾಜ್ಯ ಪ್ರಶಸ್ತಿ ಪಡೆದ ಆಂಧ್ರ ನಾಟಕ ಅಕಾಡೆಮಿ ಅಧ್ಯಕ್ಷ ನಟ ಗುಮ್ಮಡಿ ಗೋಪಾಲಕೃಷ್ಣ ಅವರು ಮಾತನಾಡಿ, ರಾಘವರ ಪ್ರಶಸ್ತಿಯನ್ನು ಪಡೆದಿರುವುದು ರಂಗಭೂಮಿಯಲ್ಲಿ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಅವರು ಆ ಕಾಲದ ನಾಟಕಗಳಿಗೆ ಹೊಸ ರೂಪವನ್ನು ಹುಟ್ಟು ತಮ್ಮ ಇಡೀ ಬದುಕನ್ನು ರಂಗಭೂಮಿಗೆ ಸಮರ್ಪಿಸಿದ ರಾಘವರು ಎಂದೂ ಮರೆಯಲಾಗದ ಮಹಾರತ್ನ,ಅವರೊಬ್ಬ ಅಭಿಜಾತ ಕಲಾವಿದ ಎಂದು ರಾಘವರ ವ್ಯಕ್ತಿತ್ವವನ್ನು ಕೊಂಡಾಡಿದರು.
ರಾಘವರ ರಾಜ್ಯ ಪ್ರಶಸ್ತಿಯನ್ನು ಸತತವಾಗಿ ಸುಮಾರು 17 ವರ್ಷಗಳಿಂದ ರಾಘವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ಮತ್ತು ನಾಟಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಸಾಮಾನ್ಯ ಮಾತಲ್ಲ, ಕಲೆಯ ಮೇಲೆ ಗೌರವ ಮತ್ತು ನಾಟಕ ರಂಗ ಬೆಳೆಸಬೇಕು ಎನ್ನುವ ಛಲ ಇದ್ದವರಿಗೆ ಮಾತ್ರ ಸಾಧ್ಯವಾಗುತ್ತದೆ. ರಾಘವರು ವೃತ್ತಿಯಲ್ಲಿ ವಕೀಲರಾಗಿದ್ದರೂ ನಾಟಕ ರಂಗಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಅವರ ದಾರಿಯಲ್ಲಿ ಈ ಅಸೋಸಿಯೇಷನ್ ನಡೆಯುತ್ತಿರುವುದು ಸಂತೋಷದ ವಿಷಯ. ಈ ಪ್ರಶಸ್ತಿ ನನಗೆ ಲಭಿಸಿರುವುದು ನನ್ನ ಸೌಭಾಗ್ಯವೇ ಸರಿ ಎಂದು ಸಂತಸವನ್ನು ಹಂಚಿಕೊಂಡರು .
ಆಂಧ್ರಪ್ರದೇಶ ರಾಜ್ಯದ ಕೃಷ್ಣ ಜಿಲ್ಲೆ ಮೇದೂರು ಗ್ರಾಮದ ಗುಮ್ಮಡಿ ಗೋಪಾಲಕೃಷ್ಣಅವರನ್ನು ರಾಘವ ಮೆಮೋರಿಯಲ್ ಅಸೋಸಿಯೇಷನ್ ಪರವಾಗಿ ಸತ್ಕರಿಸಿ “ರಾಜ್ಯಮಟ್ಟದ ರಾಘವ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷರಾದ ಕೆ ಕೋಟೇಶ್ವರರಾವ್ ಅವರು ಬಳ್ಳಾರಿಯ ಕಲಾಪ್ರೇಮಿಗಳು ಸಾಕಷ್ಟು ಸಂಖ್ಯೆಯಲ್ಲಿ ನಾಟಕಗಳನ್ನು ನೋಡಲು ಆಗಮಿಸುತ್ತಿರುವದು ಸಂತೋಷದ ವಿಷಯವೆಂದರು.ವೇದಿಕೆಯಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಕೆ. ಚನ್ನಪ್ಪ ಪ್ರಧಾನ ಕಾರ್ಯದರ್ಶಿ ಎನ್. ಪ್ರಕಾಶ್ ಉಪಾಧ್ಯಕ್ಷರಾದ ಹೆಚ್. ವಿಷ್ಣುವರ್ಧನ ರೆಡ್ಡಿ ಖಜಾಂಜಿ ಪಿ .ಧನಂಜಯ ಸಹ ಕಾರ್ಯದರ್ಶಿ ಎಂ. ರಾಮಾಂಜನೇಯಲು ಉಪಸ್ಥಿತರಿದ್ದರು.
ಶ್ರೀ ಸಾಯಿಬಾಬ ನಾಟ್ಯ ಮಂಡಳಿ ವಿಜಯವಾಡದ ಸಂಸ್ಕಾರ ಭಾರತಿ ಅಧ್ಯಕ್ಷರಾದ ಡಾ. ಪಿ.ವಿ.ಎನ್ ಕೃಷ್ಣ ರವರ ರಚಸಿದ ನಿರ್ದೇಶಿಸಿದ “ಜಯಹೋ ಶ್ರೀ ಛತ್ರಪತಿ ಶಿವಾಜಿ ಮಹಾರಾಜ” ಎನ್ನುವಂತಹ ತೆಲುಗು ಐತಿಹಾಸಿಕ ನಾಟಕವನ್ನು ಪ್ರದರ್ಶಿಸಲಾಯಿತು. ಅದ್ಬುತವಾಗಿ ನಾಟಕ ಪ್ರದರ್ಶನ ಮಾಡಿದರು.ಎನ್ .ಪ್ರಕಾಶ್ ಸ್ವಾಗತಿಸಿದರು,ಎನ್.ಶ್ರೀನಿವಾಸರೆಡ್ಡಿ ನಿರೂಪಿಸಿದರು.ಪಿ. ಧನಂಜಯ ವಂದಿಸಿದರು.ರಮಣಪ್ಪ ಭಜಂತ್ರಿ ಕಾರ್ಯಕ್ರಮವನ್ನು ನಿರ್ವಹಿಸಿದರು.