ಧಾರವಾಡ: ‘ಬಸವೇಶ್ವರ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿಯ ರಜತ ಮಹೋತ್ಸವ ಪ್ರಯುಕ್ತ ಮಾರ್ಚ್ 25 ರಂದು ಬೆಳಿಗ್ಗೆ 11 ಗಂಟೆಗೆ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾಗಿದೆ’ ಎಂದು ಸೊಸೈಟಿಯ ಅಧ್ಯಕ್ಷ ಸಹದೇವ ನಿಗದಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಗಾವಿಯ ಮುಕ್ತಿಮಠದ ಶಿವಸಿದ್ಧ ಸೋಮೆಶ್ವರ ಶಿವಾಚಾರ್ಯ ಸ್ವಾಮೀಜಿ, ಬಳ್ಳಾರಿ ಅಜ್ಜನವರು ಸಾನ್ನಿಧ್ಯ ವಹಿಸುವರು. ಉಳವಿ ಚನ್ನಬಸವೇಶ್ವರ ಧರ್ಮ ಪಂಡ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಆರ್. ರಾಮನಗೌಡರ, ಕಾರ್ಯಾಧ್ಯಕ್ಷ ಬಿ.ಎಂ. ಸೂರಗೊಂಡ ಪಾಲ್ಗೊಳ್ಳುವರು’ಎಂದರು.
‘ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಹು-ಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಮಾಜಿ ಶಾಸಕರಾದ ಸೀಮಾ ಅಶೋಕ ಮಸೂತಿ, ಅಮೃತ ದೇಸಾಯಿ, ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಪಾಲ್ಗೊಳ್ಳುವರು’ ಎಂದು ಹೇಳಿದರು.
‘24ರಂದು ಸಂಜೆ 5.30ಕ್ಕೆ ಗಾಂಧಿ ಚೌಕ್ದಿಂದ ಕಲಾಭವನದವರೆಗೆ 21 ಜೋಡಿ ವಧು-ವರರ ಮೆರವಣಿಗೆ ನಡೆಯಲಿದೆ. ವಿವಾಹವಾದ ಎಲ್ಲ ವಧು-ವರರನ್ನು ಅಯೋಧ್ಯ, ಕಾಸಿ, ಪ್ರಯಾಗರಾಜ್, ಆಗ್ರಾ, ಮಥುರಾ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಉಚಿತ ಪ್ರವಾಸ ಮಾಡಿಸಲಾಗುವುದು’ ಎಂದು ತಿಳಿಸಿದರು.
ಮುಖಂಡ ಮೋಹನ ರಾಮದುರ್ಗ,ಮೈಲಾರ ಉಪ್ಪಿನ, ಗದಿಗೆಪ್ಪ ಮುದಿಯಪ್ಪನವರ, ಶಿವಾನಂದ ಗುಂಡಗೋವಿ ಸುದ್ದಿಗೋಷ್ಠಿಯಲ್ಲಿದ್ದರು.
ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು : 9741165039, 9964453428, 8152017181 ತಿಳಿಸಿದ್ದಾರೆ..

