ಜಮ್ಮು-ಕಾಶ್ಮೀರದಲ್ಲಿ ನಿಗೂಢ ಕಾಯಿಲೆಗೆ ಬಲಿಯಾಯ್ತು ಇಡೀ ಕುಟುಂಬ

Ravi Talawar
ಜಮ್ಮು-ಕಾಶ್ಮೀರದಲ್ಲಿ ನಿಗೂಢ ಕಾಯಿಲೆಗೆ ಬಲಿಯಾಯ್ತು ಇಡೀ ಕುಟುಂಬ
WhatsApp Group Join Now
Telegram Group Join Now

ಶ್ರೀನಗರ: ಇದು ನಿಜಕ್ಕೂ ಕರುಣಾಜನಕ ಕಥೆ. ದಿಕ್ಕೇ ತೋಚದಂತಾದ ಮೊಹಮ್ಮದ್ ಅಸ್ಲಾಂ ಎಂಬ ದಯನೀಯನ ವ್ಯಥೆ. ಜಮ್ಮು- ಕಾಶ್ಮೀರದ ರಾಜೌರಿಯ ಗಡಿ ಜಿಲ್ಲೆಯ ದೂರದ ಬುಧಾಲ್ ಗ್ರಾಮದಲ್ಲಿ ತನ್ನ ತಾಯಿಯ ಸಂಬಂಧದಲ್ಲಿ ಮಾವ ಮತ್ತು ಅತ್ತೆ ಸೇರಿದಂತೆ ಮೂರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ನಿಗೂಢ ಕಾಯಿಲೆಗೆ ಕಳೆದುಕೊಂಡಿದ್ದಾರೆ. ಈಗ ಬದುಕುಳಿದಿರುವ ಏಕೈಕ ಮಗಳ ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿಯಲ್ಲಿದ್ದು, ಜಮ್ಮುವಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

ನಿನ್ನೆ ಶುಕ್ರವಾರ ಬೆಳಿಗ್ಗೆ, ಅಸ್ಲಾಂ ತನ್ನ ಅತ್ತೆ ಜಟ್ಟಿ ಬೇಗಂ (60ವ) ಅವರನ್ನು ನಿಗೂಢ ಕಾಯಿಲೆಯಿಂದ ಕಳೆದುಕೊಂಡರು. ಬೇಗಂ ಅವರ ಸಾವಿನೊಂದಿಗೆ, ನಿಗೂಢ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ 16 ಕ್ಕೆ ಏರಿದೆ, ಇದರಲ್ಲಿ 4 ಮಂದಿ ವಯಸ್ಕರು ಮತ್ತು 12 ಮಕ್ಕಳು ಸೇರಿದ್ದಾರೆ.

ಈ ವರ್ಷ ಜನವರಿ 9 ರಿಂದ ಅಸ್ಲಾಂ ಅವರ ಕುಟುಂಬದಲ್ಲಿ ಇದು ಏಳನೇ ನಿಗೂಢ ಸಾವು. ಅವರ ಮಾವ ಮೊಹಮ್ಮದ್ ಯೂಸುಫ್ (63ವ) ಗುರುವಾರ ನಿಗೂಢ ಕಾಯಿಲೆಯಿಂದ ನಿಧನರಾದರು. ಈ ಸಾವುಗಳು ಅಸ್ಲಾಂ ಅವರನ್ನು ಜರ್ಝರಿತವಾಗಿಸಿದೆ.

WhatsApp Group Join Now
Telegram Group Join Now
Share This Article