ಅಕ್ಷರ ಜ್ಞಾನದಿಂದ ಸಶಕ್ತ ಸಮಾಜ ನಿರ್ಮಿಸಲು ಸಾಧ್ಯ- ಸಂತೋಷ ಬಂಡೆ

Abushama Hawaldar
ಅಕ್ಷರ ಜ್ಞಾನದಿಂದ ಸಶಕ್ತ ಸಮಾಜ ನಿರ್ಮಿಸಲು ಸಾಧ್ಯ- ಸಂತೋಷ ಬಂಡೆ
WhatsApp Group Join Now
Telegram Group Join Now
ಇಂಡಿ: ಸಾಕ್ಷರತೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಬಹುಮುಖ್ಯವಾಗಿದೆ. ಸಾಕ್ಷರತೆಯು ವ್ಯಕ್ತಿಯನ್ನು ಸಮಾಜದಲ್ಲಿ ಘನತೆಯಿಂದ ಸ್ವಾವಲಂಬಿಯಾಗಿ ಬದುಕಲು ಸಹಕರಿಸುತ್ತದೆ. ಹೀಗಾಗಿ ಪ್ರತಿಯೊಬ್ಬರು ಅಕ್ಷರ ಜ್ಞಾನ ಹೊಂದಿ ಸಶಕ್ತ ಸಮಾಜ ನಿರ್ಮಿಸಲು ಸಂಕಲ್ಪಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ಅಂತಾರಾಷ್ಟ್ರೀಯ ಸಾಕ್ಷರತಾ ದಿನದ ನಿಮಿತ್ತ ‘ಅಕ್ಷರ ಜ್ಞಾನ ಎಲ್ಲರಿಗೂ ಅಗತ್ಯ’-ಚಿಂತನಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದರು.
         ಶಿಕ್ಷಣವು ಸುಸಂಸ್ಕೃತ, ಸಮರ್ಥ ಮತ್ತು ಬಲಿಷ್ಠ ಸಮಾಜದ ಅಡಿಪಾಯವಾಗಿದೆ. ದೇಶದ ಜನಜಾಗೃತಿಗೆ, ಜೀವನ ಮಟ್ಟ ಮತ್ತು ಕೌಶಲವನ್ನು ವೃದ್ಧಿಸಲು ಸಾಕ್ಷರತೆ ಅತೀ ಅವಶ್ಯ. ಆಧುನಿಕ ಸಮಾಜದಲ್ಲಿ ಸಾಕ್ಷರತೆ ನಿತ್ಯ ಬದುಕಿನ ಒಂದು ಸಾಧನವಾಗಿದೆ ಎಂದು ಹೇಳಿದರು.
 ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು. ಹೆಣ್ಣು ಮಕ್ಕಳನ್ನು ಸಾಕ್ಷರರನ್ನಾಗಿ ಮಾಡಿದಾಗ ಇಡೀ ಕುಟುಂಬ ಅಕ್ಷರಸ್ಥವಾಗಿ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಹಾಗಾಗಿ ಎಲ್ಲರನ್ನೂ ಅಕ್ಷರವಂತರನ್ನಾಗಿ ಮಾಡುವದು ಬಹುಮುಖ್ಯ ಎಂದು ಹೇಳಿದರು.
 ಮುಖ್ಯ ಶಿಕ್ಷಕ ಅನಿಲ ಪತಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರು ಉತ್ತಮ ಜೀವನವನ್ನು ನಡೆಸಲು, ಬಡತನ ನಿರ್ಮೂಲನೆ ಮಾಡಲು, ಜನಸಂಖ್ಯೆಯನ್ನು ನಿಯಂತ್ರಿಸಲು ಸಾಕ್ಷರತೆಯು ಸಹಾಯ ಮಾಡುತ್ತದೆ. ಉತ್ತಮ ಶಿಕ್ಷಣಕ್ಕಾಗಿ ಜನರನ್ನು ಪ್ರೋತ್ಸಾಹಿಸಲು ಈ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
 ಶಿಕ್ಷಕಿ ಎಫ್ ಎ ಹೊರ್ತಿ ಸಾಕ್ಷರತಾ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು.ಶಿಕ್ಷಕರಾದ ಎಸ್ ಎಂ ಪಂಚಮುಖಿ, ಎಸ್ ಡಿ ಬಿರಾದಾರ, ಎಸ್ ಪಿ ಪೂಜಾರಿ, ಎನ್ ಬಿ ಚೌಧರಿ, ಜೆ ಸಿ ಗುಣಕಿ, ಶಾಂತೇಶ ಹಳಗುಣಕಿ, ಶೃದ್ಧಾ ಬಂಕಲಗಾ, ಸುರೇಶ ದೊಡ್ಯಾಳಕರ ಮತ್ತು ಅತಿಥಿ ಶಿಕ್ಷಕರಾದ ಯಲ್ಲಮ್ಮ ಸಾಲೋಟಗಿ, ಪ್ರಜ್ವಲ ಕುಲಕರ್ಣಿ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article