ಇಂಡಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವ್ಯಾಪಾರಸ್ಥರು ವರ್ತಕರು ತಮ್ಮ ಅಂಗಡಿಗಳ ಮೇಲೆ ಶೇಕಡಾ ೬೦ ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ನಾಮಫಲಕದಲ್ಲಿ ಅಳವಡಿಸಲು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದಲ್ಲಿ ತಾಲೂಕಾ ಆಡಳಿತ ಮತ್ತು ಕನ್ನಡ ಸಂಘಟನೆಗಳ ಆಶ್ರಯದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾಗೃತಿ ಜಾಥಾದಲ್ಲಿ ತಹಸೀಲ್ಧಾರ ಬಿ.ಎಸ್.ಕಡಕಬಾವಿ, ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ,ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ,ಉಪಾಧ್ಯಕ್ಷ ಜಹಾಂಗೀರ ಸೌದಾಗರ,ಕರವೇ ಸಂಘಟನೆಯ ಬಾಳು ಮುಳಜಿ, ರಾಜು ಕುಲಕರ್ಣಿ, ಸಚಿನ ನಾವಿ, ಮಹೇಶ ಹೂಗಾರ, ಮಹಿಬೂಬ ಬೇನೂರ, ಪ್ರವೀಣ ಪೊದ್ದಾರ, ಸಂದೇಶ ಗಲಗಲಿ, ರಾಮಸಿಂಗ ಕನ್ನೊಳ್ಳಿ, ಶಿವಾನಂದ ಬಡಿಗೇರ, ಅಶೋಕ ಅಕಲಾದಿ, ಮುಸ್ತಾಕ ಇಂಡಿಕರ,ಕೇಶವ ಕಾಟಕರ, ಸುದೀಪ ನಾವಿ, ಪ್ರದೀಪ ಶೆಟ್ಟಿ, ಅದೃಶ್ಯಪ್ಪ ವಾಲಿ, ಆಶಾ ಕಾರ್ತೆಯರು,ಪುರಸಭೆ ಸಿಬ್ಬಂದಿ, ಕೆರವೇ ಕಾರ್ಯಕರ್ತರು ಮತ್ತಿತರಿದ್ದರು.
ಜಾಗೃತಿ ಜಾಥಾ ಮಿನಿ ವಿಧಾನಸೌಧದಿಂದ ಮಹಾವೀರ ವೃತ್ತದ ವರೆಗೆ ಮತ್ತು ಪ್ರಮುಖ ಬೀದಿಗಳಲ್ಲಿ ನಡೆಯಿತು.