ಜಮಖಂಡಿ; ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕುಮಾರ ಆಲಗೂರ ಮೇಲೆ ಅಪರಿಚಿತರು ಹಲ್ಲೆಗೆ ವಿಫಲಯತ್ನ ನಡೆಸಿರುವ ಘಟನೆ ವರದಿಯಾಗಿದೆ. ಮಹರಾಷ್ಟ್ರದ ಅಪರಿಚಿತ ವ್ಯಕ್ತಿಗಳು ದೂರವಾಣಿ ಮಾಡಿ ಕರೆಯಿಸಿಕೊಂಡು ನಿಮ್ಮಮೇಲೆ ಹಲ್ಲೆ ಮಾಡಲು ನಮಗೆ ಸುಪಾರಿ ನೀಡಿದ್ದಾರೆ. ನಮಗೆ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದ್ದು, ಅಷ್ಟರಲ್ಲಿ ಎಚ್ಚೆತ್ತುಕೊಂಡ ಕುಮಾರ ಆಲಗೂರ ತಮ್ಮ ಸ್ನೇಹಿತರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಇದರಿಂದ ಸಕಾಲಕ್ಕೆ ಆಗಮಿಸಿ ಪೊಲೀಸರು ಇಬ್ಬರು ಮಹರಾಷ್ಟ್ರ ಮೂಲದ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಅಪರಿಚಿತರು; ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ಮಾತನಾಡುತ್ತಿದ್ದ ಇಬ್ಬರು ಅಪರಿಚಿತರು ಯಾರು ಎಂಬುದು ಗೊತ್ತಿಲ್ಲ ನನ್ನ ಮೇಲೆ ಹಲ್ಲೆ ನಡೆಸಲು ಯಾರು ಸುಪಾರಿ ಕೊಟ್ಟಿದ್ದಾರೆ ಎಂಬುದು ಅರ್ಥವಾಗಿಲ್ಲ. ವ್ಯಕ್ತಿಗಳ ಬಗ್ಗೆ ಕೂಲಂಕುಶ ತನಿಖೆ ನಡೆಸಿ ಇವರ ಹಿಂದಿರುವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿದೆ ಯಾವುದೇ ಒತ್ತಡಕ್ಕೆ ಮಣಿಯದೇ ಪೊಲೀಸರು ಸೂಕ್ತ ಕ್ರಮ ಜರುಗಿಸಲಿದ್ದಾರೆ ಎಂಬ ವಿಶ್ವಾಸ ವಿದೆ ಎಂದು ಕುಮಾರ ಆಲಗೂರ ತಿಳಿಸಿದ್ದಾರೆ,
ಮೂವರು ಆರೋಪಿಗಳ ಬಂಧನ
ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷನ ಕೊಲೆಗೆ ಯತ್ನ ನಡೆಸಿದ ಸುಪಾರಿ ಕಿಲ್ಲರ್‌ಗಳನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಪಾರಿ ಕೊಟ್ಟವ, ಸುಪಾರಿ ಪಡೆದರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಮಾರ್ ಆಲಗೂರ ಕೊಲೆಗೆ ೧೦ ಲಕ್ಷ ಕ್ಕೆ ಸುಪಾರಿ ನೀಡಿದ ಆರೋಪದ ಮೇಲೆ ಅತುಲ ಯಾದವ, ವಿನಾಯಕ ಪುಣೇಕರ್, ಹಾಗೂ ಜಹಾಂಗೀರ್ ಶೇಕ್ ಎಂಬುವರನ್ನು ಬಂಧಿಸಲಾಗಿದೆ. ಮೂರನೇ ಆರೋಪಿ ಜಹಾಂಗೀರ್ ಶೇಕ ಕೊಲೆಗೆ ಸುಪಾರಿ ನೀಡಿದ್ದ ಎನ್ನಲಾಗಿದೆ. ಬಂಧಿತರು ಮಹಾರಾಷ್ಟ್ರದ ಸಾಂಗ್ಲಿ ಮೂಲದವರು. ಜಮಖಂಡಿ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.